ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಿರೀಕ್ಷಿತ ಪ್ರಮಾಣದಲ್ಲಿ ಪ್ರಯಾಣಿಕರನ್ನು ಸೆಳೆಯಲು ನಮ್ಮ ಮೆಟ್ರೋ ವಿಫಲವಾಗಿರುವುದಕ್ಕೆ ಬಸ್ ಸೇವೆಯೊಂದಿಗೆ ಸಮರ್ಪಕ ಸಮನ್ವಯದ ಕೊರತೆ, ಕೊನೆಯ ಹಂತದ ಸಂಪರ್ಕ ವ್ಯವಸ್ಥೆಯಲ್ಲಿನ ಲೋಪ ಹಾಗೂ ನಿಲ್ದಾಣಗಳಲ್ಲಿ ಅಗತ್ಯ ಪಾರ್ಕಿಂಗ್ ಸೌಲಭ್ಯಗಳಿಲ್ಲದಿರುವುದು ಪ್ರಮುಖ ಕಾರಣ ಎಂದು ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿ ತಿಳಿಸಿದೆ.
ಸೋಮವಾರ ಸಂಸತ್ತಿನಲ್ಲಿ ಮಂಡನೆಯಾದ ಸಿಎಜಿಯ 2026ರ ಕಾರ್ಯಕ್ಷಮತಾ ಲೆಕ್ಕಪರಿಶೋಧನಾ ವರದಿ ಸಂಖ್ಯೆ&7ರಲ್ಲಿ ಮೆಟ್ರೋ ಯೋಜನೆಯ ಹಲವು ಲೋಪಗಳನ್ನು ಉಲ್ಲೇಖಿಸಲಾಗಿದೆ. 2007ರ ಡಿಪಿಆರ್ನಲ್ಲಿ ಅಂದಾಜಿಸಿದ್ದ ಪ್ರಯಾಣಿಕರ ಸಂಖ್ಯೆ ಹಾಗೂ ಪೀಕ್ ಅವರ್ ಪೀಕ್ ಡೈರೆಕ್ಷನ್ ಟ್ರಾಫಿಕ್ ಪ್ರಮಾಣವನ್ನು 2023ರಲ್ಲಿಯೂ ಸಾಧಿಸಲು ಸಾಧ್ಯವಾಗಿಲ್ಲ. ಹಂತ&1ರಲ್ಲಿ 2021ರ ಗರಿಷ್ಠ ಸಮಯದ ಗರಿಷ್ಠ ದಿಕ್ಕಿನ ಸಂಚಾರ(ಪಿಎಚ್ಪಿಡಿಟಿ) 15 ಸಾವಿರಕ್ಕೂ ಅಧಿಕ ಇರಲಿದೆ ಎಂದು ಅಂದಾಜಿಸಿದ್ದರೂ, ವಾಸ್ತವಿಕ ಪ್ರಮಾಣ 6,429ರಿಂದ 8,852ರಷ್ಟೇ ಇತ್ತು.
ಪ್ರಯಾಣಿಕರ ಸಂಖ್ಯೆ ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆಯಾಗಲು ಕಾರಣವೇನು ಎಂಬುದನ್ನು ಪತ್ತೆಹಚ್ಚಿ, ಸಂಖ್ಯೆ ಹೆಚ್ಚಿಸಲು ಅಗತ್ಯ ಅಧ್ಯಯನವನ್ನೂ ನಡೆಸಲಾಗಿಲ್ಲ ಎಂದು ಸಿಎಜಿ ಆಕ್ಷೇಪಿಸಿದೆ.
ಸಮಗ್ರ ಸಾರಿಗೆ ಯೋಜನೆಯೇ ಇಲ್ಲ!:
2006ರಲ್ಲೇ ಕೇಂದ್ರ ಸರ್ಕಾರ ನಿರ್ದೇಶನ ನೀಡಿದ್ದರೂ, ಮೆಟ್ರೋಗೆ ಪ್ರಯಾಣಿಕರನ್ನು ಸಂಪರ್ಕಿಸುವ ಸಮಗ್ರ ಸಾರಿಗೆ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಿರಲಿಲ್ಲ. ಹಂತ&2ರ ಡಿಪಿಆರ್ಗಳನ್ನೂ ಸಮಗ್ರ ಚಲನಶೀಲತಾ ಯೋಜನೆ, ಟ್ರಾನ್ಸಿಟ್ ಓರಿಯೆಂಟೆಡ್ ಡೆವಲಪ್ಮೆಂಟ್ ಹಾಗೂ ಭೂ ಬಳಕೆ ನೀತಿಯ ಸಮರ್ಪಕ ಚೌಕಟ್ಟಿಲ್ಲದೆ ಸಿದ್ಧಪಡಿಸಲಾಗಿತ್ತು. ಪರಿಣಾಮ ಮೆಟ್ರೋ&ಬಸ್&ಕೊನೆಯ ಹಂತದ ಸಂಪರ್ಕ ದುರ್ಬಲವಾಗಿದೆ.
6,603 ಕೋಟಿ ರೂ. ಭೂಸ್ವಾಧಿನ ಹೆಚ್ಚಳ:
ಭೂಸ್ವಾಧಿನ ವೆಚ್ಚದಲ್ಲಿ 2023ರ ಮಾರ್ಚ್ ವೇಳೆಗೆ 6,603 ಕೋಟಿ ಹೆಚ್ಚಳವಾಗಿದ್ದು, ತಪ್ಪು ಭೂದರ ಅನ್ವಯದಿಂದ 294.72 ಕೋಟಿ ್ಟಖಿ. ಹೆಚ್ಚುವರಿ ಪರಿಹಾರ ಪಾವತಿಸಲಾಗಿದೆ. ಅಧಿಸೂಚನೆ ವಿಳಂಬದಿಂದ 186.86 ಕೋಟಿ ರೂ. ಬಡ್ಡಿ ನೀಡಲಾಗಿದೆ. 9 ಸಿವಿಲ್ ಗುತ್ತಿಗೆಗಳಲ್ಲಿ ತೆರಿಗೆ ಲೆಕ್ಕಾಚಾರದಿಂದಲೇ 1,222.40 ಕೋಟಿ ರೂ. ಯೋಜನಾ ವೆಚ್ಚ ಹೆಚ್ಚಾಗಿದೆ. ಕೆಲ ಭೂಹಸ್ತಾಂತರ ವಿಳಂಬ 1,305 ದಿನಗಳವರೆಗೂ ಮುಂದುವರಿದಿತ್ತು ಎಂದು ವರದಿ ತಿಳಿಸಿದೆ.
ಬಿಎಂಟಿಸಿಯ ದೈನಂದಿನ ಪ್ರಯಾಣಿಕರ ಸಂಖ್ಯೆ 2014&15ರ 51.30 ಲಕ್ಷದಿಂದ 2022&23ರಲ್ಲಿ 27.49 ಲಕ್ಷಕ್ಕೆ ಕುಸಿದಿದೆ. ಹೀಗಾಗಿ ಮೆಟ್ರೋ ವಿಸ್ತರಣೆಯಷ್ಟೇ ಅಲ್ಲ, **ಮೆಟ್ರೋಗೆ ಪ್ರಯಾಣಿಕರನ್ನು ತಲುಪಿಸುವ ಬಸ್, ಪಾರ್ಕಿಂಗ್ ಹಾಗೂ ಫೀಡರ್ ವ್ಯವಸ್ಥೆ ಬಲಪಡಿಸುವುದೇ ಮುಂದಿನ ಪ್ರಮುಖ ಸವಾಲು ಎಂದು ವರದಿ ಸೂಚಿಸಿದೆ.
2013&14ರಿಂದ 2021&22ರವರೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ನಿರಂತರ ನಷ್ಟದಲ್ಲಿದ್ದು, ಸಾಲ ಮರುಪಾವತಿಗೆ ಸರ್ಕಾರದ ನೆರವನ್ನೇ ಅವಲಂಬಿಸಿತ್ತು. ನಿಲ್ದಾಣಗಳ 2.46 ಲಕ್ಷ ಚದರ ಅಡಿ ವಾಣಿಜ್ಯ ಸ್ಥಳದಲ್ಲಿ 2.23 ಲಕ್ಷ ಚದರ ಅಡಿ ಖಾಲಿಯೇ ಉಳಿದಿತ್ತು. ಇದರಿಂದ 2019&22ರ ಅವಧಿಯಲ್ಲಿ 38.53 ಕೋಟಿ ರೂ. ಬಾಡಿಗೆ ಆದಾಯ ನಷ್ಟವಾಗಿದೆ ಎಂದು ವರದಿ ತಿಳಿಸಿದೆ.