- ದೇಶದ 2ನೇ ಅತಿ ದೊಡ್ಡ ಜಾಲ ಎನಿಸಲಿರುವ ನಮ್ಮ ಮೆಟ್ರೋ
ಬೆಂಗಳೂರು: ನಮ್ಮ ಮೆಟ್ರೋದ ಗುಲಾಬಿ ಮಾರ್ಗ ರೈಲುಗಳ ಸಂಚಾರಕ್ಕೆ ಅಗತ್ಯವಿರುವ ರೋಲಿಂಗ್ ಸ್ಟಾಕ್ ಅನುಮೋದನೆಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಸೋಮವಾರ ಪಡೆದುಕೊಂಡಿದೆ.
ರೈಲು ಸಂಚಾರಕ್ಕೆ ಅಂತಿಮ ಅನುಮೋದನೆ ನೀಡುವ ಪ್ರಕ್ರಿಯೆಯಲ್ಲಿ ರೋಲಿಂಗ್ ಸ್ಟಾಕ್ ಅನುಮತಿ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (ಸಿಎಂಆರ್ಎಸ್) ಈ ಅನುಮತಿ ನೀಡಿದ್ದಾರೆ.
ಇದೀಗ ಗುಲಾಬಿ ಮಾರ್ಗದ ಉದ್ಘಾಟನೆಗೆ ಇನ್ನೆರಡು ಪ್ರಮುಖ ಹಂತಗಳು ಮಾತ್ರ ಬಾಕಿ ಉಳಿದಿವೆ. ಸಿಗ್ನಲಿಂಗ್ ವ್ಯವಸ್ಥೆ ಹಾಗೂ ಇತರ ಉಪವ್ಯವಸ್ಥೆಗಳ ನಡುವಿನ ಸಂಪರ್ಕದ "ಆಂತರಿಕ ಸುರಕ್ಷತಾ ಮೌಲ್ಯಮಾಪನ (ಐಎಸ್ಎ) ಹಾ ಸಿಎಂಆರ್ಎಸ್ ವತಿಯಿಂದ ಮಾರ್ಗದ ಕಡ್ಡಾಯ ಸುರಕ್ಷತಾ ಪರಿಶೀಲನೆ ನಡೆಯಬೇಕಿದೆ.
ಫ್ರಾನ್ಸ್ನ ಬಹುರಾಷ್ಟ್ರೀಯ ಕಂಪನಿ ಅಲ್ಸಾ ್ಟಂ ಕಳೆದ ವಾರ ಗ್ರೇಡ್ ಆಫ್ ಆಟೊಮೇಷನ್-&2 ಆಧಾರಿತ ಸುರಕ್ಷತಾ ವರದಿಯನ್ನು ಜೋಡೋವಾ ಟೆಕ್ನಾಲಜೀಸ್ಗೆ ಸಲ್ಲಿಸಿದೆ. ಜೋಡೋವಾ ವಾರದೊಳಗೆ ಐಎಸ್ಎ ಪ್ರಮಾಣಪತ್ರ ನೀಡುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಕಳೇನ ಅಗ್ರಹಾರ, ಜಯದೇವ ಆಸ್ಪತ್ರೆ ಹಾಗೂ ತಾವರೆಕೆರೆ ನಿಲ್ದಾಣಗಳಲ್ಲಿ ಪರಿಶೀಲನೆ ನಡೆಯುತ್ತಿದೆ.
ಐಎಸ್ಎ ಪ್ರಮಾಣಪತ್ರ ದೊರೆತ ಬಳಿಕ ಸಿಎಂಆರ್ಎಸ್ಗೆ ಸುರಕ್ಷತಾ ಪರಿಶೀಲನೆ ನಡೆಸುವಂತೆ ಬಿಎಂಆರ್ಸಿಎಲ್ ಆಹ್ವಾನಿಸಲಿದೆ. ಈ ತಿಂಗಳ ಮಧ್ಯಭಾಗದ ಬಳಿಕ ಈ ತಪಾಸಣೆ ನಡೆಯುವ ಸಾಧ್ಯತೆ ಇದೆ. ನಂತರ ರೈಲುಗಳ ಸಂಚಾರಕ್ಕೆ ಅಧಿಕೃತ ಅನುಮತಿ ನೀಡುವ ರೈಲ್ವೆ ಮಂಡಳಿ ಮಂಜೂರಾತಿಯೂ ದೊರೆಯುವ ನಿರೀಕ್ಷೆಯಿದೆ.
7.5 ಕಿ.ಮೀ ಉದ್ದದ ಎತ್ತರಿಸಿದ ಗುಲಾಬಿ ಮಾರ್ಗದಲ್ಲಿ ಕಳೇನ ಅಗ್ರಹಾರ, ಹುಳಿಮಾವು, ಜೆ.ಪಿ. ನಗರ 4ನೇ ಹಂತ, ಐಐಎಂಬಿ, ಜಯದೇವ ಆಸ್ಪತ್ರೆ ಹಾಗೂ ತಾವರೆಕೆರೆ ಸೇರಿ ಆರು ನಿಲ್ದಾಣಗಳಿವೆ. ಮಾರ್ಗ ಸಂಚಾರಕ್ಕೆ ಬಂದ ಬಳಿಕ ಬೆಂಗಳೂರಿನ ಮೆಟ್ರೋ ಜಾಲ 103.6 ಕಿ.ಮೀಗೆ ವಿಸ್ತರಣೆಯಾಗಲಿದ್ದು, ದೇಶದಲ್ಲೇ ಎರಡನೇ ಅತಿ ಉದ್ದದ ಮೆಟ್ರೋ ಜಾಲವಾಗಲಿದೆ. 416 ಕಿಮೀ ಜಾಲ ಹೊಂದಿರುವ ದೆಹಲಿ ಪ್ರಥಮ ಸ್ಥಾನದಲ್ಲಿದೆ.