ಮೆಟ್ರೋ 
ಬೆಂಗಳೂರು

ಹಸಿರು ಮಾರ್ಗದ ನಮ್ಮ ಮೆಟ್ರೋ ಸೇವೆಯಲ್ಲಿ ತಾತ್ಕಾಲಿಕ ಅಡಚಣೆ

ಪವನ್ ಆಚಾರ್ಯ ನೀರ್ಚಾಲು

ಪ್ರಮುಖ ಮುಖ್ಯಾಂಶಗಳು

  • ವಿದ್ಯುತ್​ ವ್ಯತ್ಯಯ ಹಿನ್ನೆಲೆ
  • 45 ನಿಮಿಷಗಳ ಬಳಿಕ ಸೇವೆ ಪುನರಾರಂಭ
  • ಪ್ರಯಾಣಿಕರಿಗೆ ಬಿಎಂಆರ್​ಸಿಎಲ್​ ಕ್ಷಮೆಯಾಚನೆ
ಬೆಂಗಳೂರು: ವಿದ್ಯುತ್​ ವ್ಯತ್ಯಯದ ಪರಿಣಾಮ ಸೋಮವಾರ ಬೆಳಗ್ಗೆ ನಮ್ಮ ಮೆಟ್ರೋದ ಹಸಿರು ಮಾರ್ಗದಲ್ಲಿ ಸುಮಾರು 45 ನಿಮಿಷಗಳ ಕಾಲ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ ಪ್ರಯಾಣಿಕರು ಪರದಾಡುವಂತಾಯಿತು.
ಬೆಳಗ್ಗೆ 8 ಗಂಟೆಯಿಂದ ಸಿಲ್ಕ್​ ಇನ್​ಸ್ಟಿಟ್ಯೂಟ್​ ಹಾಗೂ ಯಶವಂತಪುರ ನಿಲ್ದಾಣಗಳ ನಡುವೆ ಮಾತ್ರ ಮೆಟ್ರೋ ರೈಲುಗಳು ಶಾರ್ಟ್​-ಲೂಪ್​ ಸೇವೆಯಲ್ಲಿ ಸಂಚರಿಸಿದರೆ, ಯಶವಂತಪುರ&ಮಾದಾವರ ನಡುವಿನ ಮೆಟ್ರೋ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ವಿದ್ಯುತ್​ ಪೂರೈಕೆಯಲ್ಲಿ ಉಂಟಾದ ಸಮಸ್ಯೆಯಿಂದ ಈ ವ್ಯತ್ಯಯ ಸಂಭವಿಸಿದ್ದು, ಸೇವೆಯನ್ನು ಶೀಘ್ರದಲ್ಲಿ ಮರುಸ್ಥಾಪಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್​ಸಿಎಲ್​) ತಾಂತ್ರಿಕ ಸಿಬ್ಬಂದಿ ತುರ್ತು ಕಾರ್ಯಾಚರಣೆ ನಡೆಸಿದರು. ಬಳಿಕ ವಿದ್ಯುತ್​ ಪೂರೈಕೆ ಮರುಸ್ಥಾಪನೆಯಾದ ಹಿನ್ನೆಲೆಯಲ್ಲಿ ಬೆಳಗ್ಗೆ 8.45 ರಿಂದ ಮೆಟ್ರೋ ಸಂಚಾರವನ್ನು ಸಾಮಾನ್ಯ ಸ್ಥಿತಿಗೆ ತರಲಾಯಿತು. ಸೇವೆಯಲ್ಲಿ ಉಂಟಾದ ತಾತ್ಕಾಲಿಕ ವ್ಯತ್ಯಯದಿಂದ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ಬಿಎಂಆರ್​ಸಿಎಲ್​ ವಿಷಾದ ವ್ಯಕ್ತಪಡಿಸಿದೆ.