- ಇ-ಟೆಂಡರ್ ಆಹ್ವಾನಿಸಿದ ಬಿಎಂಆರ್ಸಿಎಲ್
- 4,187.41 ಕೋಟಿ ರೂ. ಅಂದಾಜು ವೆಚ್ಚ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಮ್ಮ ಮೆಟ್ರೋ 3ನೇ ಹಂತದ ಯೋಜನೆಯಡಿ ಮಂಗಳವಾರ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) 18.581 ಕಿ.ಮೀ. ಉದ್ದದ ಮೂರು ಪ್ಯಾಕೇಜ್ಗಳಿಗೆ 4,187.41 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಮುಕ್ತ ಇ&ಟೆಂಡರ್ಗಳನ್ನು ಆಹ್ವಾನಿಸಿದೆ. ಮೆಟ್ರೋ ವೈಯಾಡಕ್ಟ್ಗಳು, ರೈಲು& ರಸ್ತೆ ಡಬಲ್ ಡೆಕ್ಕರ್ ಮೇಲ್ಸೇತುವೆಗಳು ಹಾಗೂ ನಿಲ್ದಾಣಗಳ ನಿಮಾರ್ಣ ಈ ಪ್ಯಾಕೇಜ್ಗಳಲ್ಲಿ ಒಳಗೊಂಡಿವೆ. 2031ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಫೇಸ್&3ರಲ್ಲಿ ಒಟ್ಟು ಎಂಟು ಪ್ಯಾಕೇಜ್ಗಳಲ್ಲಿ ಟೆಂಡರ್ ಆಹ್ವಾನಿಸುವ ಯೋಜನೆ ಬಿಎಂಆರ್ಸಿಎಲ್ ಹೊಂದಿದ್ದು, ಇದರಲ್ಲಿ 6 ಪ್ಯಾಕೇಜ್ಗಳು ಹೊರವಲಯ ರಸ್ತೆ ವಿಭಾಗಕ್ಕೆ ಮತ್ತು ಎರಡು ಮಾಗಡಿ ರಸ್ತೆ ಮಾರ್ಗಕ್ಕೆ ಸೇರಿವೆ. ಉಳಿದ ಐದು ಪ್ಯಾಕೇಜ್ಗಳಿಗೆ ಜಪಾನ್ ಇಂಟರ್ನ್ಯಾಷನಲ್ ಕೋ& ಆಪರೇಶನ್ ಏಜೆನ್ಸಿಯೊಂದಿಗೆ (ಜೈಕಾ) ಸಾಲ ಒಪ್ಪಂದಕ್ಕೆ ಸಹಿ ಆದ ಬಳಿಕ ಮಾರ್ಚ್ ಅಥವಾ ಏಪ್ರಿಲ್ನಲ್ಲಿ ಟೆಂಡರ್ ಆಹ್ವಾನಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜೈಕಾ 6,775 ಕೋಟಿ ರೂ. ಸಾಲ ನೀಡಲಿದ್ದು, ಮೆಟ್ರೋ ಭಾಗಕ್ಕೆ 15,611 ಕೋಟಿ ರೂ. ಹಾಗೂ ಡಬಲ್ ಡೆಕ್ಕರ್ಗೆ 9,692.33 ಕೋಟಿ ರೂ. ವೆಚ್ಚವಾಗಲಿದೆ. ಡಬಲ್ ಡೆಕ್ಕರ್ ವೆಚ್ಚವನ್ನು ಸಂಪೂರ್ಣವಾಗಿ ರಾಜ್ಯ ಸರ್ಕಾರವೇ ಭರಿಸಲಿದೆ.
ಒಂದೇ ಸಂಸ್ಥೆ ನಿರ್ವಹಣೆ: 2024ರ ಆಗಸ್ಟ್ನಲ್ಲಿ ಹಂತ&3ಕ್ಕೆ ಎಲ್ಲ ಕಾನೂನುಬದ್ಧ ಅನುಮತಿಗಳು ದೊರೆತಿದ್ದರೂ, 37.12 ಕಿ.ಮೀ. ಡಬಲ್ ಡೆಕ್ಕರ್ ಯೋಜನೆ ಪರಿಷ್ಕರಣೆಯಿಂದ ಟೆಂಡರ್ ಪ್ರಕ್ರಿಯೆ ವಿಳಂಬವಾಗಿತ್ತು. ಇದಕ್ಕಾಗಿ ಬಿಎಂಆರ್ಸಿಎಲ್ ವಿವರವಾದ ವಿನ್ಯಾಸ ಸಲಹಾ (ಡಿಡಿಸಿ) ವರದಿ ಸಿದ್ಧಪಡಿಸಿ, ಭೂಸ್ವಾಧಿನ ವೆಚ್ಚ ಅಂದಾಜುಗಳನ್ನು ಪರಿಷ್ಕರಿಸಬೇಕಾಯಿತು. ನಿಮಾರ್ಣ ಕಾರ್ಯ ವೇಗಗೊಳಿಸುವ ಉದ್ದೇಶದಿಂದ ಮೆಟ್ರೋ ಮತ್ತು ಡಬಲ್ ಡೆಕ್ಕರ್ ಕಾಮಗಾರಿಯನ್ನು ಒಂದೇ ಸಂಸ್ಥೆಗೆ ನೀಡಲು ತೀಮಾರ್ನಿಸಲಾಗಿದೆ. ಈ ಹಂತದಲ್ಲಿ ಏಳು ಇಂಟರ್ಚೇಂಜ್ ನಿಲ್ದಾಣಗಳಿರಲಿವೆ. ಜೆ.ಪಿ.ನಗರ 4ನೇ ಹಂತ (ಪಿಂಕ್ ಲೈನ್), ಜೆಪಿ ನಗರ (ಗ್ರೀನ್ ಲೈನ್), ಮೈಸೂರು ರಸ್ತೆ (ಪರ್ಪಲ್ ಲೈನ್), ಸುಮನಹಳ್ಳಿ ಕ್ರಾಸ್ (ಸಿ1 ಮತ್ತು ಸಿ2), ಗೊರಗುಂಟೆಪಾಳ್ಯ (ಗ್ರೀನ್ ಲೈನ್), ಕೆಂಪಾಪುರ (ಬ್ಲು ಲೈನ್) ಮತ್ತು ಹೊಸಹಳ್ಳಿ (ಪರ್ಪಲ್ ಲೈನ್) ಇಲ್ಲಿ ಇಂಟರ್ಚೇಂಜ್ ನಿಲ್ದಾಣಗಳಿ ತಲೆಯೆತ್ತಲಿವೆ.
ಮೆಟ್ರೋ ಹಂತ&1 ಪ್ರಸ್ತುತ ಕಾರ್ಯಾಚರಣೆಯಲ್ಲಿರುವ ಮಾರ್ಗಗಳನ್ನು ಒಳಗೊಂಡಿದೆ (ನೇರಳೆ ಮತ್ತು ಹಸಿರು). ಹಂತ 1ರ ವಿಸ್ತರಣೆಗಳು ಮತ್ತು ಹೊಸ ಮಾರ್ಗ (ಹಳದಿ ಮತ್ತು ಗುಲಾಬಿ) ಹಂತ 2ರ ಭಾಗವಾಗಿದೆ. ಹಳದಿ ಮಾರ್ಗವು ಕೆ.ಆರ್.ಪುರದಿಂದ ಸೆಂಟ್ರಲ್ ಸಿಲ್ಕ್ಬೋರ್ಡ್ವರೆಗೆ (ನೀಲಿ ಮಾರ್ಗ&- ಹಂತ 2ಎ) ಮತ್ತು ಬೊಮ್ಮಸಂದ್ರದವರೆಗೆ ವಿಸ್ತರಿಸಿದೆ. ಗುಲಾಬಿ ಮಾರ್ಗವು ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಇರಲಿದೆ. ಹಂತ&3ರಲ್ಲಿ ಎರಡು ಮುಖ್ಯ ಕಾರಿಡಾರ್ಗಳನ್ನು ಒಳಗೊಂಡಿದ್ದು, ಕಿತ್ತಳೆ ಮಾರ್ಗ ಕಾರಿಡಾರ್&1 ಜೆ.ಪಿ.ನಗರ 4ನೇ ಹಂತದಿಂದ ಕೆಂಪಾಪುರದವರೆಗೆ (ಹೊರವರ್ತುಲ ರಸ್ತೆ ) 32.15 ಕಿ.ಮೀ. ಉದ್ದದ ಮಾರ್ಗ ಹಾಗೂ ಕಾರಿಡಾರ್&2 ಮಾಗಡಿ ರಸ್ತೆಯ ಹೊಸಹಳ್ಳಿಯಿಂದ ಕಡಬಗೆರೆಯವರೆಗೆ 12.5 ಕಿ.ಮೀ. ಉದ್ದದ ಮಾರ್ಗವಾಗಿದೆ.
ಇದಲ್ಲದೆ, ಹಂತ 3ಎ ಹೆಬ್ಬಾಳ ಮತ್ತು ಸರ್ಜಾಪುರ ನಡುವಿನ ಸುಮಾರು 36.6 ಕಿ.ಮೀ. ಉದ್ದದ ಮಾರ್ಗವನ್ನು ಯೋಜಿಸಲಾಗಿದೆ. ಹಂತ 4ರಲ್ಲಿ ಬೆಂಗಳೂರು&-ತುಮಕೂರು (59.60 ಕಿ.ಮೀ.) ಮತ್ತು ಜಿಗಣಿ, ಆನೇಕಲ್, ಅತ್ತಿಬೆಲೆ, ಸರ್ಜಾಪುರ, ವರ್ತೂರು ಪ್ರದೇಶಗಳನ್ನು ಒಳಗೊಂಡಿರುವ ಅಂತರ ಜಿಲ್ಲಾ ಕಾರಿಡಾರ್ ನಿರ್ಮಾಣಕ್ಕೆ ಬಿಎಂಆರ್ಸಿಎಲ್ ಯೋಜನೆ ರೂಪಿಸುತ್ತಿದೆ.