ವಾಸ್ಕ್ಯುಲರ್ ಶಸ್ತ್ರಚಿಕಿತ್ಸಕರಾದ ಡಾ. ಶ್ರೀರಾಮ್ ಹಾಗೂ ಡಾ. ಅರುಣ್ ರೆಡ್ಡಿ, ಕಾರ್ಡಿಯಾಕ್ ಅನಸ್ತೇಶಿಯಾಲಜಿಸ್ಟ್ ಡಾ. ಪಾಟೀಲ್, ಇಂಟೆನ್ಸಿವ್ ಕೇರ್ ತಜ್ಞೆ ಡಾ. ನಿತ್ಯ ಸೇರಿದಂತೆ ಬಹುಶಾಖಾ ತಜ್ಞರ ತಂಡ ಯಶಸ್ವಿಯಾಗಿ ಸಂಕೀರ್ಣ ಅಬ್ಡೊಮಿನಲ್ ಏರೋಟಿಕ್ ಸ್ಟೆಂಟ್ ಎಕ್ಸ್‌ಪ್ಲಾಂಟೇಶನ್ ಹಾಗೂ ಏರೋಟಿಕ್ ರೀಕನ್ಸ್ಟ್ರಕ್ಷನ್ ಶಸ್ತ್ರಚಿಕಿತ್ಸೆ ನಡೆಸಿದರು
ಮಹದೇವಪುರ: ಮೆಡಿಕವರ್ ಆಸ್ಪತ್ರೆಯ ಹಿರಿಯ ಹೃದಯ ತಜ್ಞ ಹಾಗೂ ಕಾರ್ಡಿಯೋವ್ಯಾಸ್ಕುಲರ್ ಸೈನ್ಸಸ್ ನಿರ್ದೇಶಕ ಡಾ. ನಾಗ ಶ್ರೀನಿವಾಸ್ ನೇತೃತ್ವದಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಗೆ ಹೈರಿಸ್ಕ್ಏಒವರ್‌ಟಿಕ್ ಸರ್ಜರಿ ನಡೆಸುವಲ್ಲಿ ಯಶಸ್ವಿಯಾಗಿದೆ.
ಎರಡು ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಗಳು ಆಗದು ಎಂದು ಕೈಚಲ್ಲಿದ್ದ ನಂತರ ರೋಗಿಯು ವೈಟ್‌ಫೀಲ್ಡ್ನ ಮೆಡಿಕವರ್ ಆಸ್ಪತ್ರೆಗೆ ಭೇಟಿ ನೀಡಿ ಸಲಹೆ ಪಡೆದರು. ರೋಗಿಗೆ ತಜ್ಞರ ತಂಡ ರೋಗಿಯ ಸ್ಥಿತಿಯನ್ನು ಸಮಗ್ರವಾಗಿ ಪರಿಶೀಲಿಸಿ. ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಿತು.
ವಾಸ್ಕ್ಯುಲರ್ ಶಸ್ತ್ರಚಿಕಿತ್ಸಕರಾದ ಡಾ. ಶ್ರೀರಾಮ್ ಹಾಗೂ ಡಾ. ಅರುಣ್ ರೆಡ್ಡಿ, ಕಾರ್ಡಿಯಾಕ್ ಅನಸ್ತೇಶಿಯಾಲಜಿಸ್ಟ್ ಡಾ. ಪಾಟೀಲ್, ಇಂಟೆನ್ಸಿವ್ ಕೇರ್ ತಜ್ಞೆ ಡಾ. ನಿತ್ಯ ಸೇರಿದಂತೆ ಬಹುಶಾಖಾ ತಜ್ಞರ ತಂಡ ಯಶಸ್ವಿಯಾಗಿ ಸಂಕೀರ್ಣ ಅಬ್ಡೊಮಿನಲ್ ಏಒವರ್‌ಟಿಕ್ ಸ್ಟೆಂಟ್ ಎಕ್ಸ್‌ಪ್ಲಾಂಟೇಶನ್ ಹಾಗೂ ಏರೋಟಿಕ್ ರೀಕನ್ಸ್ಟ್ರಕ್ಷನ್ ಶಸ್ತ್ರಚಿಕಿತ್ಸೆ ನಡೆಸಿದರು
ಈ ಶಸ್ತ್ರಚಿಕಿತ್ಸೆಯಲ್ಲಿ ಹಿಂದೆ ಅಳವಡಿಸಲಾಗಿದ್ದ ಸೋಂಕಿತ ಅಬ್ಡೊಮಿನಲ್ ಏರೋಟಿಕ್ ಸ್ಟೆಂಟ್ ಗ್ರಾಫ್ಟ್ೃ ಅನ್ನು ತೆರವುಗೊಳಿಸಿ, ಹಾನಿಗೊಳಗಾದ ಭಾಗವನ್ನು ಮರುನಿರ್ಮಾಣ ಮಾಡಲಾಯಿತು. ದೇಹದ ಪ್ರಮುಖ ಅಂಗಗಳು ಹಾಗೂ ಕಾಲುಗಳಿಗೆ ರಕ್ತ ಪೂರೈಸುವ ಮುಖ್ಯ ರಕ್ತನಾಳವಾದ ಏಒರ್ಟಾದ ಮೇಲೆ ಮರುಶಸ್ತ್ರಚಿಕಿತ್ಸೆ ನಡೆಸುವುದು ಅತ್ಯಂತ ಸವಾಲಿನದ್ದಾಗಿದ್ದು, ಹೆಚ್ಚಿನ ರಕ್ತಸ್ರಾವ ಹಾಗೂ ಅಂಗಾಂಗ ಹಾನಿಯ ಅಪಾಯವಿರುವ ಕಾರಣ ಬಹಳ ಸೂಕ್ಷ್ಮವಾಗಿ ಶ್ರಸ ಚಿಕಿತ್ಸೆ ನಡೆಸಿದ್ದೇವೆ ಎಂದು ವೈದ್ಯರ ತಂಡ ತಿಳಿಸಿದೆ.
ಸುಧಾರಿತ ಇಮೇಜಿಂಗ್ ತಂತ್ರಜ್ಞಾನ ಮತ್ತು ವಿಶೇಷ ವಾಸ್ಕ್ಯುಲರ್ ಶಸ್ತ್ರಚಿಕಿತ್ಸಾ ವಿಧಾನಗಳನ್ನು ಬಳಸಿ ಸುರಕ್ಷಿತವಾಗಿ ಶಸ್ತ್ರಚಿಕಿತ್ಸೆಯನ್ನು ಪೂರ್ಣಗೊಳಿಸಲಾಗಿದೆ. ಶಸ್ತ್ರಚಿಕಿತ್ಸೆಯ ನಂತರ ರೋಗಿ ಉತ್ತಮವಾಗಿ ಚೇತರಿಸಿಕೊಂಡಿದ್ದು, ಪ್ರಸ್ತುತ ಸ್ಥಿರ ಸ್ಥಿತಿಯಲ್ಲಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.