ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ತಮಿಳುನಾಡು ವಿಧಾನಸಭೆಯಲ್ಲಿ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿರುವ ಸಚಿವ ಉದಯನಿಧಿ ಸ್ಟಾಲಿನ್ ಅವರ ನಡೆಯನ್ನು ಬಿಜೆಪಿ ಮಹದೇವಪುರ ಕ್ಷೇತ್ರ ನಗರ ಮಂಡಲ ನಿಕಟಪೂರ್ವ ಅಧ್ಯಕ್ಷ ಮನೋಹರ್ ರೆಡ್ಡಿ ತೀವ್ರವಾಗಿ ಖಂಡಿಸಿದ್ದಾರೆ.
ಮಹದೇವಪುರ: ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ತಮಿಳುನಾಡು ವಿಧಾನಸಭೆಯಲ್ಲಿ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿರುವ ಸಚಿವ ಉದಯನಿಧಿ ಸ್ಟಾಲಿನ್ ಅವರ ನಡೆಯನ್ನು ಬಿಜೆಪಿ ಮಹದೇವಪುರ ಕ್ಷೇತ್ರ ನಗರ ಮಂಡಲ ನಿಕಟಪೂರ್ವ ಅಧ್ಯಕ್ಷ ಮನೋಹರ್ ರೆಡ್ಡಿ ತೀವ್ರವಾಗಿ ಖಂಡಿಸಿದ್ದಾರೆ.
ಉದಯನಿಧಿ ಅವರ ಹೇಳಿಕೆಗಿಂತಲೂ ಈ ವಿಚಾರದಲ್ಲಿ ತಮಿಳುನಾಡು ರಾಜಕೀಯ ನಾಯಕರು ಹಾಗೂ ಸಿಎಂ ತೋರುತ್ತಿರುವ ನಿರಾಸಕ್ತಿ ಆಘಾತಕಾರಿಯಾಗಿದೆ. ಸನಾತನ ಧರ್ಮದ ವಿರುದ್ಧ ಸರಣಿ ವಾಗ್ದಾಳಿಗಳು ನಡೆಯುತ್ತಿದ್ದರೂ, ಸಹ ತಮಿಳುನಾಡು ರಾಜಕೀಯಕ್ಕೆ ಪ್ರವೇಶಿಸಿರುವ ನಟ ಜೋಸೆಫ್ ವಿಜಯ್ ಅವರು ಮೌನವಾಗಿದ್ದಾರೆ ಎಂದು ಮನೋಹರ್ ರೆಡ್ಡಿ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ಉದಯನಿಧಿ ಅವರು ಕ್ರಿಶ್ಚಿಯನ್ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರೆ ವಿಜಯ್ ಅವರು ಇದೇ ರೀತಿ ಮೌನವಾಗಿರುತ್ತಿದ್ದರೇ?’ ಎಂದು ಪ್ರಶ್ನಿಸಿದರು.
ವಿಧಾನಸಭೆಯಲ್ಲಿ ಸನಾತನ ಧರ್ಮದ ಅವಹೇಳನ ಹೇಳಿಕೆ ನಡೆಯುತ್ತಿದ್ದರೂ ಅಲ್ಲಿನ ಉಳಿದ ಹಿಂದೂ ಶಾಸಕರು ಇದನ್ನು ವಿರೋಧಿಸದಿರುವುದು ದುರದೃಷ್ಟಕರ. ಬಹುಸಂಖ್ಯಾತ ಜನರ ನಂಬಿಕೆಯನ್ನು ಅವಮಾನಿಸುತ್ತಿದ್ದರೂ ರಾಜಕೀಯ ಕಾರಣಕ್ಕಾಗಿ ಮೌನಕ್ಕೆ ಶರಣಾಗಿರುವುದು ಖಂಡನೀಯ ಎಂದು ಬೇಸರ ವ್ಯಕ್ತಪಡಿಸಿದರು.
ಸನಾತನ ಧರ್ಮವು ಈ ದೇಶದ ಸಂಸ್ಕೃತಿಯ ತಳಹದಿಯಾಗಿದೆ. ಅದನ್ನು ನಿರ್ಮೂಲನೆ ಮಾಡುವ ಕುರಿತು ಮಾತನ್ನಾಡುವುದು ಕೋಟ್ಯಂತರ ಜನರ ಭಾವನೆಗಳಿಗೆ ಧಕ್ಕೆ ತಂದಂತೆ. ಇಂತಹ ಹೇಳಿಕೆಗಳ ವಿರುದ್ಧ ಪ್ರತಿಯೊಬ್ಬರು ದನಿ ಎತ್ತಬೇಕಿದೆ ಎಂದು ಹೇಳಿದರು.