ಹುಬ್ಬಳ್ಳಿಯ ರಾಜ್‌ನಗರದಲ್ಲಿರುವ Maharaja Trophy ಕೆಎಸ್‌ಸಿಎ ಮೈದಾನದ ನೋಟ. 
ಬೆಂಗಳೂರು

Maharaja Trophy ಹುಬ್ಬಳ್ಳಿಯಲ್ಲಿ ಮಹಾರಾಜ ಟ್ರೋಫಿ ಕಲರವ

ಹುಬ್ಬಳ್ಳಿ: ಇಲ್ಲಿಯ ರಾಜ್‌ನಗರದ ಕೆಎಸ್‌ಸಿಎ ಮೈದಾನದಲ್ಲಿ ಜೂ. 27ರಿಂದ ಜು. 3ರವರೆಗೆ ಮಹಾರಾಜ ಟ್ರೋಫಿ Maharaja Trophy ಕ್ರಿಕೆಟ್ ಕಲರವ ನಡೆಯಲಿದೆ.
ನಗರದಲ್ಲಿ ಕೆಎಸ್‌ಸಿಎ ಧಾರವಾಡ ವಲಯ ನಿಮಂತ್ರಕ ವೀರಣ್ಣ ಸವಡಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಕ್ರೀಡಾಂಗಣದಲ್ಲಿ ಎಲ್ಲ ರೀತಿಯ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ ಎಂದರು.
ನಂ. 1 ಗೇಟ್‌ನಲ್ಲಿ ಆಟಗಾರರು, ಬಿಸಿಸಿಐ, ಫ್ರಾಂಚೈಸಿ ಗೆಸ್ಟ್‌ಗಳು ಸೇರಿದಂತೆ ಪ್ರಮುಖರು ಆಗಮಿಸುವರು. 3ನೇ ಗೇಟ್‌ನಲ್ಲಿ 1500 ಸೀಟ್‌ಗಳಿದ್ದು, 150 ಸೀಟ್‌ಗಳನ್ನು ಸ್ಪಾನ್ಸರ್‌ಗಳಿಗೆ ಮೀಸಲಿರಿಸಲಾಗಿದೆ. 4ನೇ ಗೇಟ್‌ನಲ್ಲಿ ಪ್ರೇಕ್ಷಕರಿಗೆ ಸೀಟ್‌ಗಳಿವೆ. ಅದರಲ್ಲಿ 300 ಸೀಟ್‌ಗಳನ್ನು ವಿವಿಧ ಕ್ಲಬ್‌ನವರಿಗೆ ಮೀಸಲಿರಿಸಲಾಗಿದೆ. ಎಲ್ಲ ಸೇರಿ ಒಟ್ಟು 8 ಸಾವಿರ ಸೀಟ್‌ಗಳು ಇವೆ ಎಂದರು.
ಮಳೆ ಬಂದರೆ ತಕ್ಷಣ ಇಡೀ ಮೈದಾನಕ್ಕೆ ಹೊದಿಕೆ ಹಾಕಲಾಗುವುದು. ಇದಕ್ಕಾಗಿ 50 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪಂದ್ಯಾವಳಿ ನೇರ ವೀಕ್ಷಣೆಗೆ ಟಿವಿ ಪರದೆ ಇದೆ. ಸೋನಿ ಚಾನಲ್‌ನಲ್ಲಿ ನೇರ ಪ್ರಸಾರವಾಗಲಿದೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಕಮೆಂಟ್ರಿ ಹೇಳಲಿದ್ದಾರೆ. ಧಾರವಾಡ ಎಸ್‌ಡಿಎಂ ಮೆಡಿಕಲ್ ಕಾಲೇಜ್ ವತಿಯಿಂದ ವೈದ್ಯರು, ಶುಶ್ರೂಷಕರು, ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಸಂಚಾರಿ ಶೌಚಗೃಹ, 4 ಸಾರ್ವಜನಿಕ ಶೌಚಗೃಹ ಇವೆ. ಪೊಲೀಸ್ ಸಿಬ್ಬಂದಿ ಜತೆಗೆ ಹೆಚ್ಚುವರಿ ಸೆಕ್ಯೂರಿಟಿಗಳನ್ನು ನಿಯೋಜಿಸಲಾಗುತ್ತಿದೆ. ಕ್ರಿಕೆಟ್ ವೀಕ್ಷಣೆಗೆ ಆನ್‌ಲೈನ್‌ನಲ್ಲಿಯೇ ಟಿಕೆಟ್ ಬುಕಿಂಗ್ ಮಾಡಬಹುದು. ಕ್ರೀಡಾಂಗಣಕ್ಕೆ ಪ್ರೇಕ್ಷಕರು ಆಗಮಿಸಿದ್ದ ವೇಳೆಯೂ ಕ್ಯೂಆರ್ ಕೋಡ್ ಮೂಲಕ ಟಿಕೆಟ್ ಖರೀದಿ ಮಾಡಬಹುದು. ಒಂದು ಪಂದ್ಯ ವೀಕ್ಷಣೆಗೆ ಮಾತ್ರ ಟಿಕೆಟ್ ಅನ್ವಯವಾಗುತ್ತದೆ ಎಂದರು.
ಕೆಎಸ್‌ಸಿಎ ಧಾರವಾಡ ವಲಯ ಚೇರ್ಮನ್ ಅಲ್ತಾಫ್ ನವಾಜ್ ಕಿತ್ತೂರ, ಮಹಾರಾಜ ಟ್ರೋಫಿ ಜಿಸಿ ಸದಸ್ಯ ಎ.ವಿ. ಶಶಿಧರ ಸುದ್ದಿಗೋಷ್ಠಿಯಲ್ಲಿದ್ದರು.