ಜಿಬಿಎ 
ಬೆಂಗಳೂರು

ಆ.1ರಿಂದ ಲಾರಿ ಮುಷ್ಕರದ ಎಚ್ಚರಿಕೆ

ಪವನ್ ಆಚಾರ್ಯ ನೀರ್ಚಾಲು

ಪ್ರಮುಖ ಮುಖ್ಯಾಂಶಗಳು

  • ಸರಕು ಸಾಗಣೆ ವಲಯದ ಬೇಡಿಕೆ ಈಡೇರಿಕೆಗೆ ಆಗ್ರಹ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಲಾರಿ ಮತ್ತು ಸರಕು ಸಾಗಣೆ ವಲಯಕ್ಕೆ ಸಂಬಂಧಿಸಿದ ವಿವಿಧ ಬೇಡಿಕೆಗಳನ್ನು ಈಡೇರಿಸದಿದ್ದರೆ ಆ.1ರಿಂದ ದಣ ಭಾರತದಾದ್ಯಂತ ಲಾರಿಗಳನ್ನು ಸ್ಥಗಿತಗೊಳಿಸಿ, ಅರ್ನಿದಿಷ್ಟಾವಧಿ ಮುಷ್ಕರ ಕೈಗೊಳ್ಳುವುದಾಗಿ ದಣ ಭಾರತ ಲಾರಿ ಮಾಲೀಕರ ಸಂದ ಪ್ರಧಾನ ಕಾರ್ಯದರ್ಶಿ ಜಿ.ಆರ್​. ಷಣ್ಮುಗಪ್ಪ ಎಚ್ಚರಿಸಿದ್ದಾರೆ.
ಗಡಿ ಚೆಕ್​ ಪೋಸ್ಟ್​ಗಳ ರದ್ದು, ಜಿಪಿಎಸ್​ ಪ್ಯಾನಿಕ್​ ಬಟನ್​ ಕಡ್ಡಾಯ ಸೇರಿ ದಕ್ಷಿಣ ಭಾರತದ ಲಾರಿ ಮತ್ತು ಸರಕು ಸಾಗಣೆ ವಲಯಕ್ಕೆ ಸಂಬಂಧಿಸಿದ ವಿವಿಧ ಸಮಸ್ಯೆಗಳಿಗೆ ಜು.30ರ ಒಳಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಮತ್ತು ಪುದುಚೇರಿಯಲ್ಲಿ ಲಾರಿ ಸಂಚಾರವನ್ನು ಸ್ಥಗಿತಗೊಳಿಸಿ, ಮುಷ್ಕರ ನಡೆಸಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದಲ್ಲಿ 7 ಲ ಲಾರಿಗಳಿದ್ದು, ದಣ ಭಾರತದಾದ್ಯಂತ ಸುಮಾರು 24 ಲ ಲಾರಿಗಳಿವೆ. ಈ ಮುಷ್ಕರದಲ್ಲಿ ದಣ ಭಾರತದ ಎಲ್ಲ ಲಾರಿ ಮಾಲೀಕರು ಭಾಗವಹಿಸಲಿವೆ ಎಂದು ಮಾಹಿತಿ ನೀಡಿದರು.
2012ರ ನಿರ್ಭಯಾ ಪ್ರಕರಣದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ವಾಣಿಜ್ಯ ವಾಹನಗಳಿಗೂ ಜಿಪಿಎಸ್​ ಹಾಗೂ ಪ್ಯಾನಿಕ್​ ಬಟನ್​ ಕಡ್ಡಾಯಗೊಳಿಸಿತ್ತು. ಆದರೆ, ಇವುಗಳ ಅಳವಡಿಕೆಗೆ ಒಂದು ರಾಜ್ಯದಲ್ಲಿ 3 ಸಾವಿರ ರೂ. ಇದ್ದರೆ, ಮತ್ತೊಂದು ರಾಜ್ಯದಲ್ಲಿ 15 ಸಾವಿರ ರೂ. ವಸೂಲಿ ಮಾಡಲಾಗುತ್ತಿದೆ. ಸಾರಿಗೆ (ಪ್ಯಾಸೆಂಜರ್​) ವಾಹನಗಳಲ್ಲಿ ಇದನ್ನು ಅಳವಡಿಸಲಾಗಿದೆ. ಆದರೂ ಇಲ್ಲಿಯವರೆಗೆ ಯಾವುದೇ ಅಹಿತಕರ ಟನೆಗಳು ನಡೆದಿಲ್ಲ. ಹೀಗಿರುವಾಗ ಸರಕು ಸಾಗಣೆ (ಗೂಡ್ಸ್​) ವಾಹನಗಳಿಗೆ ಇದರ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿದ್ದಾರೆ. ಈ ಅಕ್ರಮವನ್ನು ಪತ್ತೆಹಚ್ಚಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ಬೇಡಿಕೆಗಳೇನು?
* ಸರಕು ವಾಹನಗಳಿಗೆ ವಾಹನ ಸ್ಥಳ ಟ್ರಾಕಿಂಗ್​ ಸಾಧನ (ವಿಎಲ್​ಟಿಡಿ) ಕಡ್ಡಾಯ ಬೇಡ
* ದಕ್ಷಿಣ ರಾಜ್ಯಗಳಲ್ಲಿ ಎಲ್ಲ ಗಡಿ ಚೆಕ್​ಪೋಸ್ಟ್​ಗಳನ್ನು ರದ್ದು
* ಇತ್ತೀಚಿನ ಟೋಲ್​ ಹೆಚ್ಚಳವನ್ನು ಹಿಂಪಡೆದು ಪಾರದರ್ಶಕ ದರ ನಿಗದಿ ವ್ಯವಸ್ಥೆ ಜಾರಿ ಮಾಡಬೇಕು
* ವಿಎಲ್​ಟಿಡಿ ಅಳವಡಿಸದ ವಾಹನಗಳಿಗೆ ರಾಷ್ಟ್ರೀಯ ಪರವಾನಗಿ ನವೀಕರಣ, ಫಿಟ್ನೆಸ್​ ಪ್ರಮಾಣಪತ್ರ ಸಿಗದಿರುವುದರಿಂದ ಕೃಷಿ, ಔಷಧಿ, ಕೈಗಾರಿಕಾ ಸರಕುಗಳ ಸಾಗಣೆ ಮೇಲೆ ಗಂಭೀರ ಪರಿಣಾಮ