ನಗರದದಲ್ಲಿ ರಾಜ್ಯ ದೇವಾಂಗ ನೌಕರರ ಸಂ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮರಂಭದಲ್ಲಿ ಉಮಾಶ್ರೀ, ಶ್ರೀ ದಯಾನಂದಪುರಿ ಸ್ವಾಮೀಜಿ, ಡಾ.ಜಿ. ರಮೇಶ್​, ಜನಾರ್ಧನ ಇತರರಿದ್ದರು. 
ಬೆಂಗಳೂರು

ಉನ್ನತ ಸಾಧನೆಗೆ ಶಿಕ್ಷಣವೇ ಅಸ್ತ್ರವಾಗಲಿ

ಬೆಂಗಳೂರು: ಪಾಲಕರು ನೇಕಾರಿಕೆಯನ್ನೇ ನಂಬಿ ಮಕ್ಕಳಿಗೆ ವಿದ್ಯೆ ಕೊಡಿಸಿದ್ದಾರೆ. ಅವರ ಕನಸನ್ನು ನನಸಾಗಿರುವ ನಿಟ್ಟಿನಲ್ಲಿ ಉನ್ನತ ಅಧಿಕಾರಿಗಳಾಗಬೇಕು. ಸಾಧನೆಗೆ ಶಿಕ್ಷಣವೇ ಅಸ್ತ್ರ ಎಂದು ವಿಧಾನಪರಿಷತ್​ನ ಉಪ ಸಭಾಪತಿ ಉಮಾಶ್ರೀ ಹೇಳಿದ್ದಾರೆ.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯ ದೇವಾಂಗ ನೌಕರರ ಸಂಘ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ 2025-26ರ ಶೈಕ್ಷಣಿಕ ವರ್ಷದ ಪರೀಕ್ಷಾ ಫಲಿತಾಂಶದನ್ವಯ ಶೇ. 90ಕ್ಕಿಂತ ಹೆಚ್ಚು ಅಂಕ ಗಳಿಸಿದ ದೇವಾಂಗ ಜನಾಂಗದ ಎಸ್​ಎಸ್​ಎಲ್​ಸಿ, ಸಿಬಿಎಸ್​ಇ, ಐಸಿಎಸ್​ಇ, ದ್ವೀತಿಯ ಪಿಯುಸಿ ವಿದ್ಯಾರ್ಥಿ& ವಿದ್ಯಾರ್ಥಿನಿಯರಿಗೆ, ವಿವಿಧ ವಿವಿಗಳಿಂದ ರ್ಯಾಂಕ್​/ ಚಿನ್ನದ ಪದಕ ಪಡೆದ ಪದವೀಧರರು, ಐಟಿಐ ಸ್ನಾತಕೋತ್ತರ ಪದವೀಧರರಿಗೆ ಹಾಗೂ ಪಿಎಚ್​.ಡಿ. ಪುರಸತರಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು.
ವಿಶಾಲ ಜಗತ್ತಿನಲ್ಲಿ ಬಹಳ ಮುಖ್ಯವಾಗಿ ಬೇಕಾದುದು ನಮ್ಮ ಬದುಕನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವ ಶಿಕ್ಷಣ. ಹೀಗಾಗಿ ಇದು ಪ್ರತಿಯೊಬ್ಬರ ಪ್ರಮುಖ ಆದ್ಯತೆಯಾಗಬೇಕು ಎಂದರು.
ಜೆನ್​ಜೀ ಗುಂಪಿನಲ್ಲಿ ಇರುವವರೆಲ್ಲ ಯುವಕರೇ. ಅವರೆಲ್ಲ 25 ವರ್ಷ ವಯೋಮಾನವರಾಗಿದ್ದಾರೆ. ಸಮುದಾಯದ ಯುವಕರು ಕುಟುಂಬ, ಬದುಕಿಗೆ ಸಮೀತಗೊಳ್ಳದೆ, ಸಮುದಾಯವನ್ನು ಮುನ್ನಡೆಸಿಕೊಂಡು ಹೋಗಲು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅದಾಯ ತೆರಿಗೆ ಇಲಾಖೆ ಆಯುಕ್ತ ಜನಾರ್ಧನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಿರಿಯ ಸಹಾಯಕ ಅಧಿಕಾರಿ ಎಲ್​. ಮೋಹನ್​ ಕುಮಾರ್​, ಎಆರ್​ಟಿಒ ಶ್ರೀನಿವಾಸ್​, ಕಲಾವಿದ ಬಿ.ಜಿ. ಶ್ರೀಧರ್​, ರಾಜ್ಯ ದೇವಾಂಗ ನೌಕರರ ಸಂದ ಅಧ್ಯಕ್ಷ ಡಿ. ನಾಗೇಶ್​ಕುಮಾರ್​, ಉದ್ಯಮಿಗಳಾದ ವಿ.ಟಿ. ಸೋಮಶೇಖರ್​, ವೆಂಕಟೇಶ್​ ಉಪಸ್ಥಿತರಿದ್ದರು.
ಐಎಎಸ್​, ಐಪಿಎಸ್​ಗಳಾಗಲು ಮುಂದಾಗಿ
ಅಲ್ಪ ಸಂಖ್ಯೆಯಲ್ಲಿರುವ ದೇವಾಂಗ ಸಮುದಾಯದ ಮುಖಂಡರು ಸಂಟಿತರಾಗುವ ಮೂಲಕ ತಮಗೆ ದೊರೆಯುವ ಅವಕಾಶಗಳ ಸದ್ಬಳಕೆ ಮಾಡಿಕೊಳ್ಳಬೇಕು. ಪಾಲಕರು ತಮ್ಮ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಬೇಕು ಎಂದು ಹಂಪಿಯ ಹೇಮಕೂಟದ ಶ್ರೀ ಗಾಯತ್ರಿ ಪೀಠ ಮಹಾಸಂಸ್ಥಾನದ ಶ್ರೀ ದಯಾನಂದಪುರಿ ಸ್ವಾಮೀಜಿ ಹೇಳಿದರು. ಇಂಜಿನಿಯರ್​, ವೈದ್ಯ ಹುದ್ದೆಗಳಿಗೆ ಸೀಮಿತರಾಗದೆ ಯುಪಿಎಸ್​ಸಿ ಪರೀೆಯಲ್ಲಿ ಯಶಸ್ಸು ಸಾಧಿಸಬೇಕು ಎಂದರು. ಸಮುದಾಯದವರು ಸಮವಸ್ತ್ರ ತಯಾರಿಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ವಿದ್ಯುತ್​, ಕಚ್ಚಾ ವಸ್ತುಗಳ ಹಾಗೂ ಮಾರುಕಟ್ಟೆ ಸಮಸ್ಯೆ ಎದುರಾಗಿದ್ದು, ನೇಕಾರರ ಗೋಳನ್ನು ಹೇಳಿಕೊಳ್ಳಲಾಗದ ಪರಿಸ್ಥಿತಿಯಲ್ಲಿದೆ. ನೇಕಾರರ ಅಭಿವೃದ್ಧಿಗೆ ಅಳುವ ಸರ್ಕಾರಗಳು ಕಾಳಜಿ ತೋರಬೇಕು ಎಂದು ಒತ್ತಾಯಿಸಿದರು.
ಕೋಟ್​:
ಸಮುದಾಯದ ಮಕ್ಕಳು ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮುಂದೆ ಬರಬೇಕು ಎಂಬ ಉದ್ದೇಶದಿಂದ ಪ್ರೋತ್ಸಾಹಿಸಿಕೊಂಡು ಬರುವುದು ವಾಡಿಕೆಯಾಗಿದೆ. ಮಕ್ಕಳು ವಿದ್ಯಾವಂತರಾಗುವ ಜತೆಗೆ ಪಾಲಕರನ್ನು ವೃದ್ಧಾಶ್ರಮಕ್ಕೆ ದೂಡುತ್ತಿರುವುದು ವಿಷಾದಕರ ಸಂಗತಿ.
- ಡಾ.ಜಿ. ರಮೇಶ್​, ರಾಜ್ಯ ದೇವಾಂಗ ಸಂಘದ ಅಧ್ಯಕ್ಷ