book-launch 
ಬೆಂಗಳೂರು

‘ಲೀಲಮ್ಮ... ನಿನ್ನ ಗಂಡ ಯಾರಮ್ಮ...?’ ಕೃತಿ ಬಿಡುಗಡೆ

ಆರ್.ತುಳಸಿಕುಮಾರ್
ಬೆಂಗಳೂರು: ನಟ ಡಾ. ರಾಜ್‌ಕುವಾರ್ ಅವರ ವೈಯಕ್ತಿಕ ಬದುಕಿನ ಕುರಿತು ಹಲವು ದಶಕಗಳಿಂದ ನಡೆಯುತ್ತಿರುವ ಅಪಪ್ರಚಾರಗಳಿಗೆ ದಾಖಲೆ ಆಧಾರಿತ ಉತ್ತರ ನೀಡುವ ಉದ್ದೇಶದಿಂದ ಅಖಿಲ ಕರ್ನಾಟಕ ಡಾ. ರಾಜ್‌ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ಗೌರವಾಧ್ಯಕ್ಷ ಎನ್.ಆರ್. ರಮೇಶ್ ಅವರು ರಚಿಸಿದ ‘ಲೀಲಮ್ಮ... ನಿನ್ನ ಗಂಡ ಯಾರಮ್ಮ...?’ ಕೃತಿಯನ್ನು ಬೆಂಗಳೂರಿನಲ್ಲಿ ಲೋಕಾರ್ಪಣೆಗೊಳಿಸಲಾಯಿತು.
ಲೇಖಕರು ಕಳೆದ 3-4 ವರ್ಷಗಳಿಂದ ಸರ್ಕಾರಿ ದಾಖಲೆಗಳನ್ನು ಸಂಗ್ರಹಿಸಿ, ಡಾ. ರಾಜ್‌ಕುವಾರ್, ದಿ. ನಟಿ ಲೀಲಾವತಿ, ನಟ ವಿನೋದ್ ರಾಜ್ ಹಾಗೂ ದಿ. ಮಹಾಲಿಂಗ ಭಾಗವತರ್ ಅವರ ಕುರಿತು ಲಭ್ಯವಿರುವ ವಿವಿಧ ದಾಖಲೆಗಳನ್ನು ಅಧ್ಯಯನ ವಾಡಿದ್ದಾರೆ. ಚೆನ್ನೈ ಹಾಗೂ ಚಂಗಲ್ಪಟ್ಟು ಜಿಲ್ಲೆಗಳಲ್ಲಿನ ಸ್ವತ್ತುಗಳಿಗೆ ಸಂಬಂಧಿಸಿದ ತೀರುವಳಿ ಪತ್ರ, ಕ್ರಯಪತ್ರ, ದಾನಪತ್ರ, ಪಟ್ಟಾ ಸೇರಿ ಇತರ ಅಧಿಕೃತ ದಾಖಲೆಗಳನ್ನು ಕಲೆಹಾಕಿ, ಕಳೆದ ಫೆಬ್ರವರಿಯಲ್ಲಿ ವಾಧ್ಯಮಗಳ ಮುಂದೆ ಬಿಡುಗಡೆ ವಾಡಲಾಗಿತ್ತು. ಅದೇ ದಾಖಲೆಗಳ ಆಧಾರದಲ್ಲಿ ಈ ಕೃತಿ ರಚಿಸಲಾಗಿದೆ ಎಂದು ತಿಳಿಸಲಾಯಿತು.
ಯಡಿಯೂರು ಕೆರೆ ಮುಂಭಾಗದ ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುವಾರ್ ಸಭಾಂಗಣದಲ್ಲಿ ನಡೆದ ಸವಾರಂಭದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಡಾ. ಸಿ.ಸೋಮಶೇಖರ್, ಹಿರಿಯ ಪತ್ರಕರ್ತ ಬಿ. ಗಣಪತಿ, ಹಿರಿಯ ಲೇಖಕರಾದ ದೊಡ್ಡಹುಲ್ಲೂರು ರುಕ್ಕೋಜಿ, ಜಗನ್ನಾಥ್ ಬಹುಳೆ ಹಾಗೂ ಚಲನಚಿತ್ರ ನಿರ್ದೇಶಕ ಪ್ರವೀಣ್ ನಾಯಕ್ ಕೃತಿಯನ್ನು ಲೋಕಾರ್ಪಣೆಗೊಳಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 500ಕ್ಕೂ ಹೆಚ್ಚು ಡಾ. ರಾಜ್‌ಕುವಾರ್ ಅಭಿವಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.