ಪುಸ್ತಕ ಬಿಡುಗಡೆಯ ಕ್ಷಣ ಏಜೆನ್ಸಿ
ಬೆಂಗಳೂರು

'ಭಗವದ್ಗೀತೆ ಮತ್ತು ಕ್ರೀಡಾಪಟುವಿನ ಮನಸ್ಸು' ಪುಸ್ತಕ ಲೋಕಾರ್ಪಣೆ

ಮುಖ್ಯ ಅತಿಥಿಗಳಾಗಿ ಪ್ರಧಾನ ಅರಣ್ಯ ಸಂರಕ್ಷಣಾ ಅಧಿಕಾರಿ ಹಾಗೂ ಕರ್ನಾಟಕ ಟೈಗರ್​ ಪ್ರಾಜೆಕ್ಟ್​ನ ನಿರ್ದೇಶಕ ಡಾ. ಪಿ. ರಮೇಶ್​ ಕುಮಾರ್​ ಭಾಗವಹಿಸಿದ್ದರು.

ಬೆಂಗಳೂರು: ಎಂ.ಎನ್​. ವಿಶ್ವನಾಥ್​ ಅವರ "ಭಗವದ್ಗೀತೆ ಮತ್ತು ಕ್ರೀಡಾಪಟುವಿನ ಮನಸ್ಸು' ಪುಸ್ತಕವನ್ನು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಮೀಡಿಯಾ ಸೆಂಟರ್​ನಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು.

ಈ ಪುಸ್ತಕವು ಭಗವದ್ಗೀತೆಯ ಬೋಧನೆಗಳು ಕ್ರೀಡಾಪಟುವಿನ ಮನೋಭಾವಕ್ಕೆ ಹೇಗೆ ಪ್ರಸ್ತುತವಾಗಿವೆ ಎಂಬುದನ್ನು ಪರಿಶೀಲಿಸುತ್ತದೆ. ವಿಶೇಷವಾಗಿ ಶಿಸ್ತು, ಸ್ಥೈರ್ಯ, ಏಕಾಗ್ರತೆ ಮತ್ತು ಆಂತರಿಕ ಶಕ್ತಿಯ ಮಹತ್ವವನ್ನು ಇದು ವಿವರಿಸುತ್ತದೆ. ಪುಸ್ತಕದ ಲೇಖಕ ಎಂ.ಎನ್​. ವಿಶ್ವನಾಥ್​ ಅವರು ಕ್ರೀಡಾ ಮಾನಸಿಕ ತರಬೇತುದಾರರಾಗಿದ್ದಾರೆ.

ಮುಖ್ಯ ಅತಿಥಿಗಳಾಗಿ ಪ್ರಧಾನ ಅರಣ್ಯ ಸಂರಕ್ಷಣಾ ಅಧಿಕಾರಿ ಹಾಗೂ ಕರ್ನಾಟಕ ಟೈಗರ್​ ಪ್ರಾಜೆಕ್ಟ್​ನ ನಿರ್ದೇಶಕ ಡಾ. ಪಿ. ರಮೇಶ್​ ಕುಮಾರ್​, ಲೇಖಕ-ಅನುವಾದಕ ಕೆ. ನಟರಾಜನ್​, ಭಗವದ್ಗೀತೆಯ ಉಪನ್ಯಾಸಕಿ ಮೀರಾ ರಘೋತ್ತಮ, ಅಂತಾರಾಷ್ಟ್ರೀಯ ಟೇಬಲ್​ ಟೆನಿಸ್​ ಆಟಗಾರ್ತಿ ಯಶಸ್ವಿ ಘೋರ್ಪಡೆ ಮತ್ತು ಅಂತಾರಾಷ್ಟ್ರೀಯ ಟೆನಿಸ್​ ಆಟಗಾರ್ತಿ ಪದ್ಮಪ್ರಿಯ ರಮೇಶ್​ ಕುಮಾರ್​ ಉಪಸ್ಥಿತರಿದ್ದರು.