ಕೆಆರ್ ಪುರದಲ್ಲಿರುವ ಕೇಂಬ್ರಿಡ್ಜ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪ್ರವೇಶ ತರಗತಿಗಳ ಕಾರ್ಯಕ್ರಮವನ್ನು ಉದ್ಘಾಟಿಸಿದರು
ಕೆ.ಆರ್.ಪುರ: ದೇಶದಲ್ಲಿ ಅರ್ಹತೆ ಮತ್ತು ಕೌಶಲ್ಯದ ಕೊರತೆಯಿಂದಾಗಿ ಪ್ರಸ್ತುತ ಶೇಕಡಾ 85% ಇಂಜಿನಿಯರಿಂಗ್ ವಿದ್ಯಾರ್ಥಿಗಳು ನಿರುದ್ಯೋಗಿಗಳಾಗಿದ್ದಾರೆ ಎಂದು ತುಮಕೂರಿನ ರಾಮಕೃಷ್ಣಾಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಕೆಆರ್ ಪುರದಲ್ಲಿರುವ ಕೇಂಬ್ರಿಡ್ಜ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪ್ರವೇಶ ತರಗತಿಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮೊದಲು ಮನಷ್ಯರಾಗಲು ಅಧ್ಯಯನ ಮಾಡಬೇಕು,ವಿದ್ಯಾರ್ಥಿಗಳು ಕೇವಲ ಪದವಿಗಷ್ಟೇ ಸೀಮಿತವಾಗದೆ ಕೌಶಲ್ಯದ ಶಿಕ್ಷಣ ಕಲಿಯಲು ಹೆಚ್ಚಿನ ಆಸಕ್ತಿ ಹೊಂದಬೇಕು.ಅಲ್ಲದೆ,ದೊಡ್ಡ ದೊಡ್ಡ ಗುರಿಗಳು ದೊಡ್ಡ ತ್ಯಾಗವನ್ನೇ ಬಯಸುತ್ತವೆ,ಜೀವನದಲ್ಲಿ ಸೋಲುವುದು ಅಪರಾಧವಲ್ಲ, ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಲ್ಲಲು ಪ್ರಯತ್ನ ಮಾಡದಿರುವುದು ನಿಜವಾದ ಅಪರಾಧ ಎಂದು ಸಲಹೆ ನೀಡಿದರು.
ಉಪಕಾರ ಸ್ಮರಣೆ ಗುರುಸ್ಮರಣೆ ನಿಜವಾದ ಶಿಕ್ಷಣ ಶಿಕ್ಷಣದ ಆತ್ಮಶಕ್ತಿಯ ಮೇಲೆ ನಂಬಿಕೆಯಿಡಿ,ಆತ್ಮಶಕ್ತಿಯು ಜಗತ್ತಿನ ಖಡ್ಗ ಶಕ್ತಿಯನ್ನೇ ಸೋಲಿಸಿದೆ. ನಿಜವಾದ ಶಿಕ್ಷಣ ಎಂದರೆ ಕಲಿಕೆಯು ನಿಮ್ಮನ್ನು ಬೆಳಕಿನೆಡೆಗೆ ಕೊಂಡೊಯ್ಯುವುದು, ಅದೇ ನಿಜವಾದ ಶಿಕ್ಷಣ. ಚಕ್ರವರ್ತಿಯು ಕೂಡ ಪೂಜಿಸುವುದು ವಿದ್ಯೆಯನ್ನೇ ಹೊರತು ಹಣವನ್ನಲ್ಲ. ಮನುಷ್ಯ ಸಂಕುಲದ ಪ್ರತಿಯೊಂದು ಸಮಸ್ಯೆಗೂ ಪರಿಹಾರ ಶಿಕ್ಷಣ ಎಂದು ಹೇಳಿದರು.
ಭಾರತ ರಾಷ್ಟ್ರ ಹುಟ್ಟಿನಿಂದ ಬಡತನವಾಗಿಲ್ಲ ಹುನ್ನಾರದಿಂದ ಬಡತನದಲ್ಲಿ ಇದೆ.ಒಂದು ದೇಶದ ಬುದ್ಧಿವಂತಿಕೆಯು ಆ ದೇಶದ ಶಿಕ್ಷಕರ ಬುದ್ದಿವಂತಿಕೆಯನ್ನು ಮೀರಿಸಲಾಗುವುದಿಲ್ಲ. ಸ್ವಾವಲಂಬನೆಯ ಸುಖ, ಪರಾವಲಂಬನೆಯೆ ದುಃಖ ಎಂದರು.
ಕೇಂಬ್ರಿಡ್ಜ್ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಿ.ಕೆ.ಮೋಹನ್ ಮಾತನಾಡಿ, ಕನಸುಗಳು ನನಸಾದಾಗಲೆಲ್ಲ ಜವಾಬ್ದಾರಿಗಳು ಜಾಸ್ತಿಯಾಗುತ್ತವೆ. ನೀವು ಉದ್ಯೋಗಿಗಳಾಗದೆ, ಉದ್ಯೋಗದಾತರಾಗಿ ಅದೇ ನೀವು ದೇಶಕ್ಕೆ ಕೊಡುವ ಕೊಡುಗೆ. ಜೀವನದಲ್ಲಿ ಸಾಧನೆಗೆ ಶಿಸ್ತು ಪ್ರಮುಖ ಅಸ್ತ್ರ. ಉನ್ನತ ಸಂಶೋಧನೆ, ಕೌಶಲ್ಯ ನೀಡುವುದೇ ಸಂಸ್ಥೆಯ ಬದ್ದತೆ ಎಂದರು.
ಈ ವೇಳೆ ಕೇಂಬ್ರಿಡ್ಜ್ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ರವಿಶಂಕರ್ ,ಸಂಸ್ಥೆಯ ಸಲಹೆಗಾರ ಡಾ. ಕೆ. ಎನ್. ಬಾಲಸುಬ್ರಮಣ್ಯ ಮೂರ್ತಿ, ಉಪ ಪ್ರಾಂಶುಪಾಲ ಡಾ.ನಾಗೇಶ್, ಪ್ರಥಮ ವರ್ಷದ ಡೀನ್ ಡಾ. ಶಾಂತಿ, ಎಸ್. ಆರ್ ಉಪಸ್ಥಿತರಿದ್ದರು. ಎಲ್ಲಾ ವಿಭಾಗಗಳ ಮುಖ್ಯಸ್ಥರು, ಬೋಧಕ, ಬೋಧಕೇತರ ಸಿಬ್ಬಂದಿ, ಪ್ರಥಮ ವರ್ಷದ ವಿಧ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಹಾಗು ಪೋಷಕರು ಉಪಸ್ಥಿತರಿದ್ದರು.