kollapuri slippers 
ಬೆಂಗಳೂರು

ಕೊಲ್ಲಾಪುರಿ ಚಪ್ಪಲಿ ಮಾರಾಟ: ಪ್ರಾಡಾ ಜತೆ ಒಪ್ಪಂದಕ್ಕೆ ಲಿಡ್ಕರ್, ಲಿಡ್ಕಾಂ ಸಹಿ

ಪ್ರಮುಖ ಮುಖ್ಯಾಂಶಗಳು

  • ಪಾದರಕ್ಷೆ ವಿನ್ಯಾಸ ಉಳಿಸುವ ಹೋರಾಟದಲ್ಲಿ ಮಹತ್ವದ ಗೆಲುವು
  • ಮುಂದಿನ ಫೆಬ್ರವರಿಯಿಂದ ಜಗತ್ತಿನಾದ್ಯಂತ ಆಯ್ದ ಮಳಿಗೆಗಳಲ್ಲಿ ಮಾರಾಟ
ಬೆಂಗಳೂರು: ಕರ್ನಾಟಕದ ಅಸ್ಮಿತೆಯಾದ ಕೊಲ್ಲಾಪುರಿ ಚಪ್ಪಲಿ ಬ್ರ್ಯಾಂಡ್ ಉಳಿಸುವ ನಿರ್ಣಾಯಕ ಹೋರಾಟದಲ್ಲಿ ಡಾ. ಬಾಬು ಜಗಜೀವನ್ ರಾಮ್ ಚರ್ಮೋದ್ಯಮ ಅಭಿವೃದ್ಧಿ ನಿಗಮ (ಲಿಡ್ಕರ್) ಹಾಗೂ ಸಂತ ರೋಹಿದಾಸ್ ಚರ್ಮೋದ್ಯಮ ಹಾಗೂ ಚರ್ಮಕಾರ್ ಅಭಿವೃದ್ಧಿ ನಿಗಮ (ಲಿಡ್ಕಾಂ) ಯಶಸ್ವಿಯಾಗಿದೆ. ಈ ಎರಡೂ ನಿಗಮಗಳು ವಿಶ್ವ ಮಾನ್ಯವಾಗಿರುವ ಕೊಲ್ಲಾಪುರಿ ಪಾದರಕ್ಷೆಗಳನ್ನು ಜಾಗತಿಕ ಫ್ಯಾಷನ್ ಕ್ಷೇತ್ರದ ಮುಂಚೂಣಿ ಕಂಪನಿ ಇಟಲಿಯ ಪ್ರಾಡಾ ಜತೆ ಒಪ್ಪಂದಕ್ಕೆ ಸಹಿ ಮಾಡಿವೆ.
ಈ ಸಂಬಂಧ ಮುಂಬೈನ ಇಟಲಿ ಎಂಬೆಸ್ಸಿಯಲ್ಲಿ ಮಹತ್ವದ ಒಡಂಬಡಿಕೆಗೆ ಲಿಡ್ಕರ್ ವ್ಯವಸ್ಥಾಪಕ ನಿರ್ದೇಶಕಿ ಡಾ. ಕೆ.ಎಂ. ವಸುಂಧರಾ ಹಾಗೂ ಲಿಡ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಪ್ರೇರಣಾ ದೇಶ್‌ಭ್ರಾತರ್ ಅವರು ಪ್ರಾಡಾದ ಪ್ರಮುಖರ ಸಮ್ಮುಖದಲ್ಲಿ ಅಂಕಿತ ಹಾಕಿದರು. ಒಡಂಬಡಿಕೆಗೆ ಪ್ರಾಡಾ ಕಾರ್ಪೋರೇಟ್​ ಸೋಷಿಯಲ್​ ರೆಸ್ಪಾನ್ಸಿಬಿಲಿಟಿಯ ಗ್ರೂಪ್​​ ಹೆಡ್​ ಲೊರೆಂಝೂ ಬರ್ಟೆಲಿ ಸಾಕ್ಷಿಯಾದರು.
ಕೊಲ್ಲಾಪುರಿ ಚಪ್ಪಲಿ ವಿನ್ಯಾಸ ನಕಲು ಮಾಡಿದ ನಂತರ ಲಿಡ್ಕರ್ ಕಾನೂನು ಹೋರಾಟ ಆರಂಭಿಸಿ ನೋಟಿಸ್ ನೀಡಿತ್ತು. ನಂತರ ಹಲವು ಸುತ್ತಿನ ಸತತ ಮಾತುಕತೆಗಳ ಪರಿಣಾಮ ಷರತ್ತುಬದ್ಧ ಒಪ್ಪಂದಕ್ಕೆ ಬರಲಾಗಿದೆ ಎಂದು ಡಾ. ವಸುಂಧರಾ ತಿಳಿಸಿದ್ದಾರೆ.

ಉದ್ಯಮದಲ್ಲಿ ಲಕ್ಷ ಮಂದಿ ಸಕ್ರಿಯ:

ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ಧಾರವಾಡ, ವಿಜಾಪುರ ಜಿಲ್ಲೆಗಳಲ್ಲದೆ ಮಹಾರಾಷ್ಟ್ರದ ಕೊಲ್ಲಾಪುರ, ಸೊಲ್ಲಾಪುರ, ಸಾಂಗ್ಲಿ ಹಾಗೂ ಸತಾರ ಜಿಲ್ಲೆಗಳಲ್ಲಿ ಕೊಲ್ಲಾಪುರಿ ಚಪ್ಪಲಿ ತಯಾರಿಸುವ ಕುಶಲಕರ್ಮಿಗಳಿದ್ದಾರೆ. ಇವರ ಸಂಖ್ಯೆ ಅಂದಾಜು ಒಂದು ಲಕ್ಷ ಇದೆ. ಆಯ್ದ ಕುಶಲಕರ್ಮಿಗಳಿಗೆ ಆಗ್ರಾದ ಪ್ರಾಡಾ ಕೇಂದ್ರದಲ್ಲಿ ಈಗಾಗಲೇ ತಾಂತ್ರಿಕ ತರಬೇತಿ ನೀಡುವ ಪ್ರಕ್ರಿಯೆ ಆರಂಭವಾಗಿದೆ. ಲಿಡ್ಕರ್ ಕುಶಲಕರ್ಮಿಗಳ ಕಾರ್ಯಚಟುವಟಿಕೆಗಳನ್ನು ಚಿತ್ರೀಕರಿಸಿ ತಮ್ಮ ಜಾಹೀರಾತುಗಳಲ್ಲಿ ಬಳಸಲು ಪ್ರಾಡಾ ಮುಂದಾಗಿದೆ. ಇದಕ್ಕಾಗಿ ಅಥಣಿಯ ಕುಶಲಕರ್ಮಿಗಳ ನಿವಾಸಗಳಿಗೆ ಪ್ರಾಡಾ ತಂಡ ಭೇಟಿ ನೀಡಿದೆ.

ಫೆಬ್ರವರಿಯಿಂದ ಜಾಗತಿಕ ಮಟ್ಟದಲ್ಲಿ ಮಾರಾಟ:

"

ಕೊಲ್ಲಾಪುರಿ ಚಪ್ಪಲಿಗಳ ಪರಂಪರೆಯು ಕರ್ನಾಟಕ ಹಾಗೂ ಮಹಾರಾಷ್ಟ್ರಗಳಲ್ಲಿ ತಲೆಮಾರುಗಳಿಂದ ಸಾಗಿ ಬಂದ ಶತಮಾನಗಳ ಕರಕುಶಲತೆಯನ್ನು ಬಿಂಬಿಸುತ್ತದೆ. ಈ ಜಿಐ ಟ್ಯಾಗ್​ ಪಡೆದ ಕಲೆಯನ್ನು ರಕ್ಷಿಸುವುದು ಮತ್ತು ಕಲಾವಿದರನ್ನು ಪ್ರಶಂಸಿಸುವುದು ಸಾಂಪ್ರದಾಯಿಕ ಮತ್ತು ಆರ್ಥಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ಮುಖ್ಯವಾಗಿದೆ. ಪ್ರಾಡಾ ಜತೆ ನಮ್ಮ ಸಹಯೋಗವು ಕರ್ನಾಟಕದ ಕುಶಲಕರ್ಮಿಗಳಿಗೆ ಲಿಡ್ಕರ್​ ಮೂಲಕ ಹೊಸ ಜಾಗತಿಕ ಅವಕಾಶವನ್ನು ತೆರೆದಿಟ್ಟಿದೆ.

- ಡಾ. ಕೆ.ಎಂ. ವಸುಂಧರಾ, ಲಿಡ್ಕರ್ ಎಂಡಿ