ಕರ್ನಾಟಕ ಪರೀಕ್ಷಾ ಪ್ರಾಧಿಕಾರ  kea website
ಬೆಂಗಳೂರು

KEA: ಕೆಇಎ: ತೋಟಗಾರಿಕೆ ಪರೀಕ್ಷೆ ಮುಂದೂಡಿಕೆ

ಸೆ. 26ರಂದು ನಡೆಯಬೇಕಿದ್ದ ಕಲ್ಯಾಣ ಕರ್ನಾಟಕ ವೃಂದದ ಸಹಾಯಕ ತೋಟಗಾರಿಕೆ ನಿರ್ದೇಶಕರ ನೇಮಕಾತಿ ಪರೀಕ್ಷೆಯನ್ನು ಅ.6ಕ್ಕೆ ಮುಂದೂಡಲಾಗಿದೆ. ಹಾಗೆಯೇ ಸೆ.27ರಂದು ನಡೆಸಬೇಕಿದ್ದ ಪರೀಕ್ಷೆಗಳನ್ನು ವಿಭಜಿಸಿ ಸೆ.29 ಮತ್ತು 30 ರಂದು ನಡೆಸಲಾಗುವುದು.

  • - ಸೆ. 29ರಂದು ಉಳಿಕೆ ಮೂಲ ವೃಂದದ ಸಹಾಯಕ ತೋಟಗಾರಿಕೆ ನಿರ್ದೇಶಕರು ಮತ್ತು ಸಹಾಯಕ ತೋಟಗಾರಿಕೆ ಅಧಿಕಾರಿ ಹುದ್ದೆಗಳ ಸಾಮಾನ್ಯ ಜ್ಞಾನ- ಪತ್ರಿಕೆ- 1

  • ಸೆ.30ರಂದು ಉಳಿಕೆ ಮೂಲ ವೃಂದದ ಸಹಾಯಕ ತೋಟಗಾರಿಕೆ ಅಧಿಕಾರಿ ಹುದ್ದೆಗಳ ನಿರ್ದಿಷ್ಟ ಪತ್ರಿಕೆ- ಪತ್ರಿಕೆ- 2ರ ಪರೀಕ್ಷೆ ನಡೆಯಲಿದೆ

ಬೆಂಗಳೂರು: ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾಗೂ ಸಹಾಯಕ ತೋಟಗಾರಿಕೆ ಅಧಿಕಾರಿ ಹುದ್ದೆಗಳ ನೇಮಕಕ್ಕೆ ಸೆ.26 ಮತ್ತು 27ರಂದು ನಡೆಸಬೇಕಿದ್ದ ಪರೀಕ್ಷಾ ದಿನಾಂಕಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರಿಷ್ಕರಣೆ ಮಾಡಿದೆ.

ಈ ಎರಡೂ ದಿನಾಂಕಗಳಂದು ಎಸ್‌ಬಿಐ ಕ್ಲರ್ಕ್ ಮತ್ತು ಎಸ್‌ಎಚ್‌ಐಎಂಯುಎಲ್ ಸಂಸ್ಥೆಯ ನೇಮಕಾತಿ ಪರೀಕ್ಷೆಗಳು ನಿಗದಿಯಾಗಿದ್ದ ಕಾರಣ ಹಲವು ಅಭ್ಯರ್ಥಿಗಳು ಪರೀಕ್ಷೆಗಳನ್ನು ಮುಂದೂಡಲು ಮನವಿ ಮಾಡಿದ್ದರು.

ಸೆ. 26ರಂದು ನಡೆಯಬೇಕಿದ್ದ ಕಲ್ಯಾಣ ಕರ್ನಾಟಕ ವೃಂದದ ಸಹಾಯಕ ತೋಟಗಾರಿಕೆ ನಿರ್ದೇಶಕರ ನೇಮಕಾತಿ ಪರೀಕ್ಷೆಯನ್ನು ಅ.6ಕ್ಕೆ ಮುಂದೂಡಲಾಗಿದೆ. ಹಾಗೆಯೇ ಸೆ.27ರಂದು ನಡೆಸಬೇಕಿದ್ದ ಪರೀಕ್ಷೆಗಳನ್ನು ವಿಭಜಿಸಿ ಸೆ.29 ಮತ್ತು 30 ರಂದು ನಡೆಸಲಾಗುವುದು. ಸೆ. 29ರಂದು ಉಳಿಕೆ ಮೂಲ ವೃಂದದ ಸಹಾಯಕ ತೋಟಗಾರಿಕೆ ನಿರ್ದೇಶಕರು ಮತ್ತು ಸಹಾಯಕ ತೋಟಗಾರಿಕೆ ಅಧಿಕಾರಿ ಹುದ್ದೆಗಳ ಸಾಮಾನ್ಯ ಜ್ಞಾನ- ಪತ್ರಿಕೆ- 1 ಹಾಗೂ ಸೆ.30ರಂದು ಉಳಿಕೆ ಮೂಲ ವೃಂದದ ಸಹಾಯಕ ತೋಟಗಾರಿಕೆ ಅಧಿಕಾರಿ ಹುದ್ದೆಗಳ ನಿರ್ದಿಷ್ಟ ಪತ್ರಿಕೆ- ಪತ್ರಿಕೆ- 2ರ ಪರೀಕ್ಷೆ ನಡೆಯಲಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.

ಉಳಿದಂತೆ ಉಳಿಕೆ ಮೂಲ ವೃಂದದ ಸಹಾಯಕ ತೋಟಗಾರಿಕೆ ನಿರ್ದೇಶಕರ ಹುದ್ದೆಯ ನಿರ್ದಿಷ್ಟ ಪತ್ರಿಕೆ- 2 ಪರೀಕ್ಷೆ ನಿಗದಿಯಂತೆ ಸೆ.28ರಂದೇ ನಡೆಯಲಿದೆ ಎಂದು ಅವರು ವಿವರಿಸಿದ್ದಾರೆ.

ಅಭ್ಯರ್ಥಿಗಳು ಪರಿಷ್ಕೃತ ಪ್ರವೇಶ ಪತ್ರಗಳನ್ನು ಸೆ.23ರಂದು ಮಧ್ಯಾಹ್ನ 2ಗಂಟೆ ನಂತರ ಡೌನ್‌ಲೋಡ್ ಮಾಡಿಕೊಳ್ಳುವುದು ಎಂದು ಸಲಹೆ ನೀಡಿದ್ದಾರೆ.