ಕೋರಮಂಗಲದ ಜೋಯಾಲುಕ್ಕಾಸ್ ಮಳಿಗೆ
ಬೆಂಗಳೂರು: ಕೋರಮಂಗಲದ ಜೋಯಾಲುಕ್ಕಾಸ್ ಮಳಿಗೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಬ್ರಿಲಿಯನ್ಸ್ ಡೈಮಂಡ್ ಜುವೆಲ್ಲರಿ ಶೋ’ಗೆ ಚಾಲನೆ ಸಿಕ್ಕಿದೆ. ಮೇ 31ವರಗೆ ಈ ವಜ್ರಾಭರಣ ಪ್ರದರ್ಶನ ಮುಂದುವರಿಯಲಿದೆ. ಪ್ರದರ್ಶನ ನಿಮಿತ್ತ 21 ಲಕ್ಷ ರೂ. ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ವಜ್ರಾಭರಣ ಖರೀದಿಸುವ ಗ್ರಾಹಕರಿಗೆ ಉಚಿತವಾಗಿ ಚಿನ್ನದ ನಾಣ್ಯ ಸಿಗಲಿದೆ.
ಜೋಯಾಲುಕ್ಕಾಸ್ ಸಮೂಹದ ಸಿಎಂಡಿ ಡಾ. ಜೋಯ್ ಆಲುಕ್ಕಾಸ್ ಮಾತನಾಡಿ, ಆಭರಣಗಳ ಪ್ರದರ್ಶನದಲ್ಲಿ ಅತ್ಯಾಧುನಿಕ ವಿನ್ಯಾಸದಿಂದ ತಯಾರಿಸಿರುವ ಆಭರಣಗಳು ನೋಡುಗರ ಗಮನ ಸೆಳೆಯುತ್ತಿವೆ. ಮದುವೆ ಸೇರಿ ಇತರ ಶುಭ ಸಮಾರಂಭಗಳಿಗೆ ಧರಿಸುವ ಆಭರಣಗಳನ್ನು ಗ್ರಾಹಕರು ಖರೀದಿಸಬಹುದು. ನಮ್ಮ ಸಂಸ್ಥೆಯು ಗ್ರಾಹಕರಿಗೆ ಉತ್ಕೃಷ್ಟ ಸೇವೆ ನೀಡುತ್ತಿದೆ. ವಧುವಿನ ಸೊಗಸಾದ ವಿನ್ಯಾಸಗಳನ್ನು ಹೊಂದಿರುವ ಈ ಪ್ರದರ್ಶನದಲ್ಲಿ ಕಾಲಾತೀತ ಕರಕುಶಲತೆ ಮತ್ತು ಅಧುನಿಕ ಸಂವೇದನೆ ಒಟ್ಟುಗೂಡಿಸಲಿದೆ ಎಂದರು.
ಬೆಂಗಳೂರು ನಮಗೆ ಯಾವಾಗಲೂ ವಿಶೇಷವಾಗಿದೆ. ಈ ವಿಶೇಷ ಸಂಗ್ರಹವನ್ನು ಗ್ರಾಹಕರಿಗೆ ಪ್ರಸ್ತುತಪಡಿಸಲು ಸಂತಸವಾಗುತ್ತಿದೆ. ಪ್ರದರ್ಶನದಲ್ಲಿ ವಜ್ರಾಭರಣಗಳಲ್ಲಿ ಕಲಾತ್ಮಕತೆ, ಸೊಬಗು ಮತ್ತು ನಾವೀನ್ಯತೆಯ ಅಸಾಧಾರಣ ಅನುಭವ ನೀಡಲಿದೆ ಎಂದರು.
ಪಾಕಶಾಲಾದ ಸಹ ಸಂಸ್ಥಾಪಕ ವಿನೋದ್ ವಿ. ಅಡಿಗ, ವಿವೇಕಾನಂದ ಇಂಟರ್‌ನ್ಯಾಷನಲ್ ಶಾಲೆಯ ಸಿಇಓ ಸಾಕಮ್ಮ ಶೆಟ್ಟಿ, ನಿರ್ಮಾಪಕ ಸೆವೆನ್ ರಾಜ್, ಜೋಯಾಲುಕ್ಕಾಸ್ ಮುಖ್ಯಸ್ಥ ರಾಜೇಶ್ ಕೃಷ್ಣನ್ ಹಾಜರಿದ್ದರು.