ಕೆಆರ್ ಪುರ ಕ್ಷೇತ್ರದ ಹೆಚ್.ಎ.ಎಲ್ ಹೌಸಿಂಗ್ ಕಾಂಪ್ಲೆಕ್ಸೃ್ ನಿಂದ ವಿಭೂತಿಪುರ ಕೆರೆಗೆ 600 ಎಂಎಂ ವ್ಯಾಸದ ಆರ್‌ಸಿಸಿ ಎನ್‌ಪಿ3 ಕೊಳವೆ ಮಾರ್ಗ ಮತ್ತು 1200 ಎಂಎಂ ವ್ಯಾಸದ ಕೊಳವೆ ಮಾರ್ಗ ಕಗ್ಗದಾಸಪುರ ಮುಖ್ಯರಸ್ತೆಯಿಂದ ದೊಡ್ಡನೆಕ್ಕುಂದಿ ಕೆರೆಯ ವರೆಗೆ ಅಳವಡಿಸುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ
ಕೆಆರ್ ಪುರ: ನೀರಿನ ಕೊರತೆ ನೀಗಿಸುವುದರ ಜತೆಗೆ ಮುಂದಿನ ಪೀಳಿಗೆಗೆ ಜಲಮೂಲಗಳು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಶಾಸಕ ಬೈರತಿ ಬಸವರಾಜ ತಿಳಿಸಿದರು.
ಕೆಆರ್ ಪುರ ಕ್ಷೇತ್ರದ ಹೆಚ್.ಎ.ಎಲ್ ಹೌಸಿಂಗ್ ಕಾಂಪ್ಲೆಕ್ಸೃ್ ನಿಂದ ವಿಭೂತಿಪುರ ಕೆರೆಗೆ 600 ಎಂಎಂ ವ್ಯಾಸದ ಆರ್‌ಸಿಸಿ ಎನ್‌ಪಿ3 ಕೊಳವೆ ಮಾರ್ಗ ಮತ್ತು 1200 ಎಂಎಂ ವ್ಯಾಸದ ಕೊಳವೆ ಮಾರ್ಗ ಕಗ್ಗದಾಸಪುರ ಮುಖ್ಯರಸ್ತೆಯಿಂದ ದೊಡ್ಡನೆಕ್ಕುಂದಿ ಕೆರೆಯ ವರೆಗೆ ಅಳವಡಿಸುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಕ್ಷೇತ್ರದಲ್ಲಿ ಈಗಾಗಲೇ ಸಾಕಷ್ಟು ಕೆರೆಗಳು ಅಭಿವೃದ್ಧಿಯಾಗಿವೆ, ಮುಂದಿನ ಪೀಳಿಗೆಗೆ ನೀರಿನ ಸಮಸ್ಯೆ ಬರದಂತೆ ನೋಡಿಕೊಳ್ಳಬೇಕು,ಕೆರೆಗಳ ಅಭಿವೃದ್ಧಿ ಹೆಚ್ಚಿನ ಒತ್ತು ನೀಡಲಾಗಿದೆ. ಜಲಮೂಲಗಳನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಬೇಸಿಗೆ ಕಾಲದಲ್ಲಿ ಕೆರೆಗಳಲ್ಲಿ ನೀರು ಬತ್ತಿ ಹೋಗುತ್ತಿದೆ. ಅಂತರ್ಜಲ ಮಟ್ಟ ಕುಸಿದು ನೀರಿನ ಸಮಸ್ಯೆ ಉಂಟಾಗಬಹುದು. ಇದನ್ನು ತಡೆಯುವ ನಿಟ್ಟಿನಲ್ಲಿ ಟ್ರೀಟ್ ಮಾಡಿದ ನೀರನ್ನು ಬಿಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದರು.
ವಿಭೂತಿ ಪುರ ಕೆರೆಗೆ ಟ್ರೀಟ್ ಮಾಡಿದ ನೀರು ಬಿಟ್ಟು ಕೆರೆಗಳನ್ನು ಕಾಪಾಡುವ ಕೆಲಸ ಮಾಡಲಾಗುವುದು. ಸಾರ್ವಜನಿಕರು ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ತಿಳಿಸಿ ಅದನ್ನು ಕೂಡಲೇ ಬಗೆಹರಿಸುವ ಕೆಲಸ ಮಾಡಲಾಗುತ್ತದೆ. ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿಟ್ಟುಕೊಳ್ಳಬೇಕು. ಎಲ್ಲೆಂದರಲ್ಲಿ ಕಸ ಹಾಕುವುದನ್ನು ತಡೆಯಬೇಕಿದೆ ಎಂದರು.
ಈ ವೇಳೆ ಪಾಲಿಕೆ ಮಾಜಿ ಸದಸ್ಯರಾದ ಸಿದ್ದಲಿಂಗಯ್ಯ, ಗೀತಾ ವಿವೇಕಾನಂದ, ಎಸ್. ಜಿ.ನಾಗರಾಜ್, ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಮೇಶ್, ಮುಖಂಡರಾದ ಕೃಷ್ಣಪ್ಪ , ರಾಮ ಲಕ್ಷ್ಮಣ, ಸುಬ್ಬು ಮತ್ತಿತರರಿದ್ದರು.