ನಗರದ ನೈಋತ್ಯ ರೈಲ್ವೆ ಕೋಚಿಂಗ್​ ಘಟಕಕ್ಕೆ ರೈಲ್ವೆ ಪ್ರಧಾನ ವ್ಯವಸ್ಥಾಪಕ ಪಿ. ಅನಂತ್​ ಸೋಮವಾರ ಭೇಟಿ ನೀಡಿ ಚಟುವಟಿಕೆಗಳ ಕುರಿತು ಪರಿಶೀಲಿಸಿದರು.  
ಬೆಂಗಳೂರು

ನೈರುತ್ಯ ರೈಲ್ವೆ ಕೋಚಿಂಗ್​ ಘಟಕ ಪರಿಶೀಲನೆ

ಬೆಂಗಳೂರು: ನಗರದ ನೈಋತ್ಯ ರೈಲ್ವೆ ಕೋಚಿಂಗ್​ ಘಟಕಕ್ಕೆ ರೈಲ್ವೆ ಪ್ರಧಾನ ವ್ಯವಸ್ಥಾಪಕ ಪಿ. ಅನಂತ್​ ಸೋಮವಾರ ಭೇಟಿ ನೀಡಿ, ಚಟುವಟಿಕೆಗಳ ಕುರಿತು ಪರಿಶೀಲಿಸಿದರು. ಸಿಕ್​ ಲೈನ್​, ಐಸಿಎ್​, ಎಲ್​ಎಚ್​ಬಿ ಕೋಚ್​ಗಳಿಗೆ ಓವರ್​ ಹಾಲಿಂಗ್​, ಎಸ್​ಎಸ್​-1 ಮಾರ್ಗ, ಉಗ್ರಾಣ, ಸಿಬ್ಬಂದಿ ಕುಂದುಕೊರತೆ ಅಲಿಸಿ, ಮೂಲಸೌಕರ್ಯ ಕುರಿತು ವೀಸಿದರು. ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಿವಿಧ ಹೊಸ ರೈಲು ಮಾರ್ಗ ಯೋಜನೆಗಳು, ನಿಲ್ದಾಣಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಭೂಸ್ವಾಧಿನದ ಪ್ರಗತಿಯ ಕುರಿತು ಚರ್ಚಿಸಿ, ಕಾರ್ಯಕ್ರಮಗಳನ್ನು ಕೈಗೊಳ್ಳಲು ಸೂಚಿಸಿದರು.
ಲೋಕಸಭಾ ಸದಸ್ಯರ ಎಂ. ಮಲ್ಲೇಶ್​ ಬಾಬು ಅವರು ಪ್ರಧಾನ ವ್ಯವಸ್ಥಾಪಕ ಪಿ. ಅನಂತ್​ ಅವರನ್ನು ಭೇಟಿ ಮಾಡಿ, ಕೋಲಾರ ಲೋಕಸಭಾ ವ್ಯಾಪ್ತಿಯಲ್ಲಿ ಆಗಬೇಕಾಗಿರುವ ರೈಲ್ವೆ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಕುರಿತು ಮನವಿ ಸಲ್ಲಿಸಿ ಚರ್ಚಿಸಿದರು. ವಿಭಾಗೀಯ ವ್ಯಸ್ಥಾಪಕ ಆಶುತೋಷ್​ ಕುಮಾರ್​ ಸಿಂಗ್​, ಪ್ರಧಾನ ಮುಖ್ಯ ಇಂಜಿನಿಯರ್​ ಸುನೀಲ್​ ಎನ್​.ಮಸ್ಕೆ, ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಪರಿತ್​ ಮೋಹನ್​ ಪುರಿಯಾ, ಪ್ರವಿಣ್​ ಮಾಥುತ್​, ಪ್ರದಿಪ್​ ಪುರಿ, ಮುಖ್ಯ ಇಂಜಿನಿಯರ್​ ಶುಭೇಶ್​ ವಮಾರ್, ಹಿರಿಯ ವಿಭಾಗೀಯ ಮೆಕ್ಯಾನಿಕಲ್​ ರಾವ್​ ಉತ್ಸವ್​ ದೀಪಕ್​ ಭಾಯಿ ಉಪಸ್ಥಿತರಿದ್ದರು.