ನಗರದ ಗಾಂಧಿ ಭವನದಲ್ಲಿ ಶೂದ್ರ ಸೇವಾ ಸಂವನ್ನು ಬುಧವಾರ ನಿಟಕಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಸಂದ ರೇಖ ಜಗನ್ನಾಥ ಇದ್ದರು.
ಬೆಂಗಳೂರು: ಮನುಷ್ಯನಲ್ಲಿ ವೈಜ್ಞಾನಿಕ, ವೈಚಾರಿಕವಾಗಿ ಆಲೋಚನೆಗಳು ಇದ್ದಾಗ ಮಾತ್ರ ಸಮಾಜದಲ್ಲಿನ ಮೌಢ್ಯತೆಯನ್ನು ತೊಡೆದು ಹಾಕಲು ಸಾಧ್ಯ ಎಂದು ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಗಾಂಧಿ ಭವನದಲ್ಲಿ ಶೂದ್ರ ಸೇವಾ ಸಂಘವನ್ನು ಬುಧವಾರ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಬೇರೆಬೇರೆ ಜಾತಿ, ಧರ್ಮದವರು ಇದ್ದು ಒಬ್ಬರನ್ನು ಒಬ್ಬರು ದ್ವೇಷಿಸುವ ಪ್ರವೃತ್ತಿ ಬದಲಾಗಬೇಕು ಎಂದು ಎಚ್ಚರಿಸಿದರು.
ಸಮಾಜಕ್ಕೆ ಅಂಟಿಕೊಂಡಿರುವ ಜಾತಿ ಪೀಡುಗನ್ನು ತೊಡೆದು ಹಾಕಲು ಹಲವು ಮಾರ್ಗಗಳಿದ್ದು ಹೋರಾಟಗಳು ನಡೆಯುತ್ತಲೇ ಇವೆ. ಆದರೆ ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರೆ ಜಾತಿ ಆಚರಣೆ ಮಾಡುತ್ತಿರುವುದು ವಿಷಾದಕರ ಸಂಗತಿ. ಮನುಷ್ಯನಲ್ಲಿ ಮನುಷ್ಯತ್ವದ ಭಾವನೆ ಇದ್ದಾಗ ಮಾತ್ರ ಬದಲಾವಣೆ ಕಾಣಲು ಸಾಧ್ಯ ಎಂದು ತಿಳಿಸಿದರು.
ಮನುವಾದಿಗಳು ಉದ್ದೇಶ ಪೂರ್ವಕವಾಗಿಯೇ ಬ್ರಹ್ಮಣ, ಕ್ಷತ್ರಿಯ, ವೈಷ್ಯ ಹೀಗೆ ವರ್ಣ ಬೇಧ ಹುಟ್ಟಿ ಹಾಕಿದ್ದಾರೆ. ಈ ವ್ಯವಸ್ಥೆ ಹೋಗಬೇಕಾದರೆ ಸಮ ಸಮಾಜ ನಿರ್ಮಾಣ ಆಗಬೇಕು. ದೇಶದಲ್ಲಿ ಸಂವಿಧಾನ ಜಾರಿಗೆ ಬಂದು 80 ದಶಕಗಳು ಕಳೆದಿದ್ದು, ಅಸಮಾನತೆ ಹೋಗಬೇಕು ಎಂಬುದು ಮೂಲ ಉದ್ದೇಶವಾಗಿದೆ. ಬುದ್ಧ, ಬಸವಣ್ಣ, ಗಾಂಧಿಜೀ, ಡಾ.ಬಿ.ಆರ್.ಅಂಬೇಡ್ಕರ್ ಅವರು ಆಶಯವು ಇದೇ ಆಗಿತ್ತು, ಈಗಲೂ ಎಚ್ಚರಗೊಳ್ಳದೆ ಹೋದರೆ ದುಷ್ಪರಿಣಾಮ ಎದುರಿಸಬೇಕಾಗುತ್ತದೆ ಎಂದರು.
ಹಿಂದೆ ಶಿಕ್ಷಣ ಎಂಬುದು ಕೆಲವರ ಸ್ವತ್ತು ಆಗಿತ್ತು, ಶೂದ್ರರು ವಿದ್ಯೆ ಪಡೆದುಕೊಳ್ಳಲು ಮುಂದಾದಾಗ ಮಾತ್ರ ಬಹುಸಂಖ್ಯಾತರು ವಿದ್ಯಾವಂತರಾಗುವಂತಾಯಿತು. 2013ರಲ್ಲಿ ಮೌಢ್ಯಗಳ ನಿವಾರಣ ಕಾಯ್ದೆ ಜಾರಿಗೆ ತರಲಾಗಿದ್ದು, ಅದು ಎಷ್ಟರ ಮಟ್ಟಿಗೆ ಕಾರ್ಯಗತಗೊಂಡಿದೆ ಎಂದು ನೋಡಿದಾಗ ವಿದ್ಯಾವಂತ ವೈದ್ಯರು, ಇಂಜಿನಿಯರ್ಗಳೇ ಆಚರಣೆಯಲ್ಲಿ ತೊಡಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ನನ್ನ 8 ವರ್ಷಗಳ ಆಡಳಿ ಅವಧಿಯಲ್ಲಿ ಅನೇಕ ಜನಪರ ಕಾರ್ಯಕ್ರಮಗಳು, ಗ್ಯಾರೆಂಟಿ ಯೋಜನೆ ಅನುಷ್ಠಾನಕ್ಕೆ ಮಾಡಿದ್ದು ಸಮಾನತೆ ಬರಬೇಕು ಎಂಬ ಉದ್ದೇಶದಿಂದ. ಸಂಘ ಕಟ್ಟಿ ನಡೆಸಿಕೊಂಡು ಹೋಗುವುದು ಸುಲಭವಲ್ಲ. ಆಗಿರುವ ತಪ್ಪುಗಳನ್ನು ಅರಿತು ವ್ಯವಸ್ಥೆಯನ್ನು ಬದಲಾಯಿಸಲು ಮುಂದಾಗ ಉದ್ದೇಶ ಈಡೇರಲು ಸಾಧ್ಯ. ಸಂದ ಹೋರಾಟಕ್ಕೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ತಿಳಿಸಿದರು.
- ಜಾಗೃತಿಗೊಳಿಸುವುದು ಸಂಘ
ದ
ಉದ್ದೇಶ
ಸಂದ ಅಧ್ಯಕ್ಷ ರಾಮೇಗೌಡ ಮಾತನಾಡಿ, ಶೂದ್ರರು ಹಿಂದೆ ಗುಲಾಮರಾಗಿದ್ದರು, ಅದರಿಂದ ಮುಕ್ತಿಗೊಳಿಸಲು ಹಲವು ದಶಕಗಳೇ ಬೇಕಾಯಿತು. ಜಾಗೃತಿಗೊಳಿಸುವ ಉದ್ದೇಶದಿಂದ ಸಂಘ ರಚನೆ ಮಾಡಿದ್ದು, ಇದಕ್ಕೆ ಎಲ್ಲರು ಸಹಕಾರ ನೀಡಬೇಕು ಎಂದು ಕೋರಿದರು.
ಸಮಾಜದಲ್ಲಿ ಬಹು ಸಂಖ್ಯಾತರಾಗಿ ಶೂದ್ರರು ಇದ್ದರು ಸಹ ಬ್ರಹ್ಮಣರು ಯಜಮಾನಗಾರಿಕೆ ಮಾಡುತ್ತಿದ್ದರು. ಕೆಸ್ತರು, ಮುಸ್ಲಿಂರು ಧರ್ಮ ಗ್ರಂಥಗಳನ್ನು ಓದಲು ಕೊಡುತ್ತಾರೆ. ಆದರೆ ಹಿಂದೂ ಧರ್ಮ ಗ್ರಂಥ ವೇದವನ್ನು ಕೊಡುವುದಿಲ್ಲ. ಅವರೆಲ್ಲ ಸನಾತನ ಧರ್ಮದ ಯಜಮಾನರು, ಇದರಿಂದ ಮುಕ್ತಿ ಪಡೆಯಬೇಕಾಗಿದೆ ಎಂದರು.
ಕ್ಷತ್ರಿಯ, ಬ್ರಹ್ಮಣರಲ್ಲಿ ಜಾತಿಗಳು ಇಲ್ಲ. ನಮ್ಮಲ್ಲಿರುವ ಅಸೂಯೆ, ದ್ವೇಷ ಬಿಟ್ಟು ಸಂಘಟಿತರಾಗಿ ಬಾಳಬೇಕು. ದೇಶದ ಪ್ರಧಾನಿಗಳಲ್ಲಿ ಅತಿ ಹೆಚ್ಚು ಬ್ರಹ್ಮಣ ಸಮುದಾದಯವರೇ ಅಧಿಕಾರ ಅನುಭವಿಸಿದ್ದಾರೆ. ಸಂಘದ ನಾಯಕತ್ವವನ್ನು ಸಿದ್ದರಾಮಯ್ಯ ಅವರು ವಹಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಸಮುದಾಯದವರನ್ನು ಜಾಗೃತಿಗೊಳಿಸುವ ಉದ್ದೇಶದಿಂದ ಸಂ ಸ್ಥಾಪನೆ ಮಾಡಿದ್ದು, ರಾಜ್ಯಾದ್ಯಂತ ಪ್ರವಾಸ ಮಾಡಿ ಡಿಸೆಂಬರ್ ತಿಂಗಳಲ್ಲಿ ಒಂದು ಲಕ್ಷ ಮಂದಿಯನ್ನು ಸೇರಿ ಬೃಹತ್ ಸಮಾವೇಶ ಮಾಡಲಾಗುವುದು.
- ಮುರಳೀಧರ ಹಾಲಪ್ಪ, ಸಂಘದ ಸಂಚಾಲಕ.