ರಸ್ತೆ ಜಾಗೃತಿ ಕಾರ್ಯಕ್ರಮ 
ಬೆಂಗಳೂರು

ಬಾಲಕರಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಮೂಡಿಸಿದ ಹೊಂಡಾ ಮೋಟಾರ್‌ಸೈಕಲ್ ಅಂಡ್ ಸ್ಕೂಟರ್ ಇಂಡಿಯಾ

ನರ್ಸಾಪುರ, 21 ನವೆಂಬರ್ 2025: ಹೊಂಡಾ ಮೋಟಾರ್‌ಸೈಕಲ್ ಅಂಡ್ ಸ್ಕೂಟರ್ ಇಂಡಿಯಾ (HMSI) ಇಂದು ಕರ್ನಾಟಕದ ನರ್ಸಾಪುರದಲ್ಲಿರುವ ತನ್ನ ಉತ್ಪಾದನಾ ಘಟಕದಲ್ಲಿ ಆಯೋಜಿಸಿದ ಬಣ್ಣ ಬಣ್ಣದ ಕಿಡ್ಸ್ ಕಾರ್ನಿವಲ್ ಕಾರ್ಯಕ್ರಮದೊಂದಿಗೆ ಮಕ್ಕಳ ತಿಂಗಳ ಆಚರಣೆಯನ್ನು ಸಮಾರೋಪಗೊಳಿಸಿದೆ. “ಸೇಫ್ಟಿ ಎಕ್ಸ್‌ಪ್ಲೋರರ್ಸ್: ಜರ್ನಿ ತ್ರೂ ಟ್ರಾಫಿಕ್ ಲ್ಯಾಂಡ್” ಎಂಬ ವಿಷಯಾಧಾರಿತ ಈ ಕಾರ್ಯಕ್ರಮವು ರಸ್ತೆ ಸುರಕ್ಷತಾ ಶಿಕ್ಷಣವನ್ನು ಮಕ್ಕಳಿಗೆ ಆಕರ್ಷಕ ಹಾಗೂ ಮನರಂಜನಾತ್ಮಕವಾಗಿ ಪರಿಚಯಿಸಿ, ಬಾಲ್ಯದಲ್ಲೇ ಸುರಕ್ಷತಾ ಅಭ್ಯಾಸಗಳನ್ನು ಬೆಳೆಸುವುದನ್ನು ಗುರಿಯಾಗಿಸಿಕೊಂಡಿದೆ.
ನರ್ಸಾಪುರದ ಕಾರ್ನಿವಲ್‌ನಲ್ಲಿ 9 ರಿಂದ 15 ವರ್ಷದ ಶಾಲಾ ಮಕ್ಕಳಿಗೆ ವಿವಿಧ ಸೃಜನಾತ್ಮಕ ಹಾಗೂ ಅನುಭವಾತ್ಮಕ ಕಲಿಕಾ ಚಟುವಟಿಕೆಗಳನ್ನು ಒದಗಿಸಲಾಯಿತು. ಮಕ್ಕಳು ಜೀಬ್ರಾ ಕ್ರಾಸಿಂಗ್ ಜೋನ್, ಹೆಲ್ಮೆಟ್ ಹಿಲ್ಸ್ ಮತ್ತು ಸಿಗ್ನಲ್ ಸಿಟಿ ಮುಂತಾದ ವಿಶೇಷ ಕಲಿಕಾ ಪ್ರದೇಶಗಳನ್ನು ಅನ್ವೇಷಿಸಿ, ಪ್ರಮುಖ ಟ್ರಾಫಿಕ್ ನಿಯಮಗಳನ್ನು ಸುಲಭವಾಗಿ ನೆನಪಿಸುವ ರೀತಿಯಲ್ಲಿ ಕಲಿಸಿದರು.
ಕಾರ್ಯಕ್ರಮದಲ್ಲಿ ರಸ್ತೆ ಸುರಕ್ಷತಾ ಕ್ವಿಜ್‌ಗಳು ಮತ್ತು ಸೃಜನಾತ್ಮಕ ಪ್ರದರ್ಶನಗಳೂ ಇದ್ದು, ಕಲಿಕೆಯನ್ನು ರಂಜಕವಾಗಿಸಿತು. ಸರ್ಕಾರಿ ಹಾಗೂ ಪ್ರಾಥಮಿಕ ಶಾಲೆಗಳ ಮಕ್ಕಳು ಉತ್ಸಾಹದಿಂದ ಭಾಗವಹಿಸಿ ಟ್ರಾಫಿಕ್ ನಿಯಮಗಳು, ರಸ್ತೆ ಚಿಹ್ನೆಗಳು ಮತ್ತು ಜವಾಬ್ದಾರಿಯುತ ರಸ್ತೆ ವರ್ತನೆ ಬಗ್ಗೆ ಪ್ರಾಯೋಗಿಕ ಜ್ಞಾನ ಪಡೆದರು.
HMSI ಯ ಮಣೇಸರ್, ತಾಪುಕಾರೆ ಮತ್ತು ವಿಠ್ಠಲಾಪುರ ಘಟಕಗಳಲ್ಲಿ ಈಗಾಗಲೇ ಇಂತಹ ಮಕ್ಕಳ ಕಾರ್ನಿವಲ್ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ನರ್ಸಾಪುರವು ಈ ಆಚರಣೆಯ ಅಂತಿಮ ಹಂತವಾಗಿದೆ. ಈ ಎಲ್ಲಾ ಕಾರ್ಯಕ್ರಮಗಳ ಮೂಲಕ HMSI ಭಾರತಾದ್ಯಂತ 2,600 ಕ್ಕೂ ಹೆಚ್ಚು ಮಕ್ಕಳನ್ನು ತಲುಪಿದೆ.
ಹೊಂಡಾ ಕಂಪನಿಯ ಜಾಗತಿಕ ಸುರಕ್ಷತಾ ಧ್ಯೇಯವಾದ “Safety for Everyone” (ಎಲ್ಲರಿಗೂ ಸುರಕ್ಷತೆ) ಎನ್ನುವುದು ಪ್ರತಿಯೊಬ್ಬರ ಸುರಕ್ಷತೆ ಸಮಾಜದ ಸಮಗ್ರ ಸುರಕ್ಷತೆಗೆ ಕಾರಣವಾಗುತ್ತದೆ ಎಂಬ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ.
ಹೊಂಡಾ ಈಗಾಗಲೇ 2050 ರೊಳಗೆ—ಹೊಂಡಾ ಮೋಟಾರ್‌ಸೈಕಲ್‌ಗಳು ಮತ್ತು ವಾಹನಗಳು ಭಾಗವಹಿಸಿರುವ—ಟ್ರಾಫಿಕ್ ಅಪಘಾತಗಳಲ್ಲಿ ಶೂನ್ಯ ಸಾವುಗಳು ಎಂಬ ಜಾಗತಿಕ ಗುರಿಯನ್ನು ಘೋಷಿಸಿದೆ. ಈ ಉಪಕ್ರಮವು ಸುನಿಶ್ಚಿತ ಸುರಕ್ಷಿತ ಭವಿಷ್ಯ ನಿರ್ಮಾಣಕ್ಕೆ ಹೊಂಡಾದ ಸಾಮಾಜಿಕ ಬದ್ಧತೆಯ ಭಾಗವಾಗಿದೆ.
HMSI ಯ ರಸ್ತೆ ಸುರಕ್ಷತಾ ಶಿಕ್ಷಣ ಕಾರ್ಯಕ್ರಮವು ವಿಜ್ಞಾನಾಧಾರಿತ ಪಾಠ್ಯಕ್ರಮದ ಮೇಲೆ ನಿರ್ಮಾಣಗೊಂಡಿದ್ದು, ಸಿದ್ಧಾಂತ ಮತ್ತು practically learning ಎರಡನ್ನೂ ಒಟ್ಟುಗೂಡಿಸುತ್ತದೆ.
ಟ್ರಾಫಿಕ್ ಟ್ರೈನಿಂಗ್ ಪಾರ್ಕ್‌ಗಳು (TTP) ಮತ್ತು Safety Driving Education Centre (SDEC) ಗಳಲ್ಲಿ ಪ್ರತಿದಿನ ವರ್ಚುವಲ್ ರೈಡಿಂಗ್ ಸಿಮ್ಯುಲೇಟರ್‌ಗಳು, ಪರಸ್ಪರ ಕ್ರಿಯಾತ್ಮಕ ಆಟಗಳು ಮತ್ತು ಅಪಾಯ ಊಹಿಸುವ ತರಬೇತಿಗಳ ಮೂಲಕ ಕಲಿಕೆಯನ್ನು ಪರಿಣಾಮಕಾರಿಯನ್ನಾಗಿಸಲಾಗಿದೆ.
ಇಲ್ಲಿಯವರೆಗೂ HMSI ಯ ಸುರಕ್ಷತಾ ಉಪಕ್ರಮಗಳು ಭಾರತಾದ್ಯಂತ 1 ಕೋಟಿಗೂ ಹೆಚ್ಚು ಜನರನ್ನು ತಲುಪಿವೆ.