ನಟ ದಿವಂಗತ ಡಾ.ಪುನೀತ್ ರಾಜಕುಮಾರ್ ಸವಿ ನೆನಪಿಗಾಗಿ ಬೆಂಗಳೂರು ಪೂರ್ವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಿ.ಕೆ.ಮೋಹನ್ ,ಕಾಂಗ್ರೆಸ್ ಮುಖಂಡ ಡಿ.ಕೆ.ರಮೇಶ್ ನೇತೃತ್ವಲ್ಲಿ ನಡೆದ ಉಚಿತ ಆರೋಗಯ ಶಿಬಿರ.ಸಿ.ವಿ .ರಾಮನ ಆಸ್ಪತ್ರೆಯ ಅಧೀಕ್ಷಕ ರಾಜೇಶ್ ನಾಯಕ್ ಮುಖಂಡರಾದ ಚನ್ನಕೇಶವ, ಎಸ್.ಎಲ್.ವಿ.ವೆಂಕಟೇಶ್, ಡಿ.ಎಮ್.ನಾಗರಾಜ್, ಡಿ.ಸಿ.ತಿಮ್ಮೇಗೌಡ,ವೆಂಕಟೇಶ್ ಮೂರ್ತಿ,ಬ್ಯಾಂಕ್ ಮುನಿರಾಜು,ಡಿ.ಟಿ.ಕಾರ್ತಿಕ್,ಯುವ ಕಾಂಗ್ರೆಸ್ ಮುಖಂಡ ಭರತ್ ಯಾದವ್ ಭಾಗಿ.
ವಿಜಯವಾಣಿ ಸುದ್ದಿಜಾಲ ಕೆಆರ್‌ಪುರ: ಬಡವರ ಆರೋಗ್ಯ ದೃಷ್ಟಿಯಿಂದ ಆಯೋಜಿಸುವ ಆರೋಗ್ಯ ಶಿಬಿರದಲ್ಲಿ ಸಾರ್ವಜನಿಕರು ಭಾಗವಹಿಸಿ ಇದರ ಪ್ರಯೋಜನೆ ಪಡೆದರೆ ಆರೋಗ್ಯ ಸಮಸ್ಯೆಗಳು ದೂರವಾಗುವುದರ ಜತೆಗೆ ಮತ್ತಷ್ಟು ಶಿಬಿರಗಳು ಆಯೋಜಿಸಲು ಪ್ರೇರಣೆಯಾಗುತ್ತದೆ. ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಿ.ಕೆ.ಮೋಹನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಟ ದಿವಂಗತ ಡಾ.ಪುನೀತ್ ರಾಜಕುಮಾರ್ ಸವಿ ನೆನಪಿಗಾಗಿ ದೇವಸಂದ್ರದ ಭಾರತೀಯ ವಿದ್ಯಾನಿಕೇತನ್ ಪ್ರೌಢಶಾಲೆ ಹಾಗೂ ಚಿಕ್ಕದೇವಸಂದ್ರದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಬೆಂಗಳೂರು ಪೂರ್ವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಿ.ಕೆ.ಮೋಹನ್, ಕಾಂಗ್ರೆಸ್ ಮುಖಂಡ ಡಿ.ಕೆ.ರಮೇಶ್, ಲಯನ್ಸ್ ಕ್ಲಬ್ ಹಾಗೂ ಸಿ.ವಿ.ರಾಮನ್ ನಗರ ಜನರಲ್ ಆಸ್ಪತ್ರೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ ಮಾತನಾಡಿದರು.
ಪ್ರತಿ ವರ್ಷ ನವೆಂಬರ್‌ನಲ್ಲಿ ಪುನೀತ್ ರಾಜ್ ಕುಮಾರ್ ನೆನಪಿನಾರ್ಥ ಆರೋಗ್ಯ
ಶಿಬಿರ ನಡೆಸಿಕೊಂಡು ಬರುತ್ತಿದ್ದೇವೆ.ಕಳೆದ ವರ್ಷ ಕಾರಣಾಂತರಗಳಿಂದ ಆರೋಗ್ಯ ಶಿಬಿರ ಆಯೋಜನೆ ಮಾಡಲು ಸಾಧ್ಯವಾಗಲಿಲ್ಲ, ಈ ಬಾರಿ ಜನವರಿ ತಿಂಗಳಿಂದ ಆರೋಗ್ಯ ಶಿಬಿರ ಪ್ರಾರಂಭಿಸಿದ್ದೇವೆ. ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಹೆಚ್ಚಿನ ಹಣ ಖರ್ಚು ಮಾಡಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಆಗುವುದಿಲ್ಲ, ಇಂತವರಿಗಾಗಿ ಆರೋಗ್ಯ ಶಿಬಿರ ಅನುಕೂಲವಾಗಲಿದೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಡಿ.ಕೆ. ರಮೇಶ್ ಮಾತನಾಡಿ, ಕಳೆದ ಐದು ವರ್ಷಗಳಿಂದ ಈ ಭಾಗದಲ್ಲಿ ಆರೋಗ್ಯ ಶಿಬಿರ ಹಮ್ಮಿಕೊಂಡು ಬರಲಾಗುತ್ತಿದೆ, ನೂರಾರು ಜನರು ಶಿಬಿರದ ಉಪಯೋಗ ಪಡೆದುಕೊಂಡಿದ್ದಾರೆ. ನುರಿತ ವೈದ್ಯರ ತಂಡದಿಂದ ಸಾಮಾನ್ಯ ರೋಗ ತಪಾಸಣೆ, ಕಣ್ಣಿನ ತಪಾಸಣೆ,ಕಿವಿ ಸೇರಿದಂತೆ ವಿವಿಧ ತಪಾಸಣೆ ನಡೆಸಲಾಯಿತು.ಆಗತ್ಯವಿದ್ದವರಿಗೆ ಉಚಿತ ಔಷಧಿ ಮತ್ತು ಕನ್ನಡಕ ವಿತರಿಸಲಾಗುತ್ತಿದೆ ಎಂದರು.
ಸಿ.ವಿ.ರಾಮನ್ ಆಸ್ಪತ್ರೆಯ ಅಧೀಕ್ಷಕ ರಾಜೇಶ್ ನಾಯಕ್ ಮುಖಂಡರಾದ ಚನ್ನಕೇಶವ, ಎಸ್.ಎಲ್.ವಿ.ವೆಂಕಟೇಶ್, ಡಿ.ಎಮ್.ನಾಗರಾಜ್, ಡಿ.ಸಿ.ತಿಮ್ಮೇಗೌಡ,ವೆಂಕಟೇಶ್ ಮೂರ್ತಿ,ಬ್ಯಾಂಕ್ ಮುನಿರಾಜು,ಡಿ.ಟಿ.ಕಾರ್ತಿಕ್,ಯುವ ಕಾಂಗ್ರೆಸ್ ಮುಖಂಡ ಭರತ್ ಯಾದವ್ ಮತ್ತಿತರರಿದ್ದರು.