- ಕೆಎಸ್ಆರ್-ಕೆಐಎ ಮಾರ್ಗಕ್ಕೆ ಕೇಂದ್ರ ರೈಲ್ವೆ ಇಲಾಖೆ ಅನುಮೋದನೆ
- 2030ರ ವೇಳೆಗೆ ಜನಬಳಕೆಗೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಗರದ ಕೆಎಸ್ಆರ್ ರೈಲು ನಿಲ್ದಾಣದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ನಿರ್ಮಾಣವಾಗಲಿರುವ ಉಪನಗರ ರೈಲು ಸಂಪರ್ಕ ಯೋಜನೆಗೆ ಕೇಂದ್ರ ರೈಲ್ವೆ ಇಲಾಖೆ ಅನುಮೋದನೆ ನೀಡಿದ್ದು, ಯೋಜನೆಯ ಅಂತಿಮ ವಿನ್ಯಾಸಕ್ಕೆ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕೆ-&ರೈಡ್) ಒಪ್ಪಿಗೆ ಸೂಚಿಸಿದೆ.
ಕೆಎಸ್ಆರ್ ರೈಲು ನಿಲ್ದಾಣದಿಂದ ಯಶವಂತಪುರ, ಯಲಹಂಕ ಮೂಲಕ ಟ್ರಂಪೆಟ್ ಇಂಟರ್ಚೇಂಜ್ ಬಳಿ ತಿರುವು ಪಡೆದು, ಬಿ.ಕೆ. ಹಳ್ಳಿ ಮತ್ತು ಏರೋಸ್ಪೇಸ್ ಪಾರ್ಕ್ ಮೂಲಕ ಕೆಂಪೇಗೌಡ ವಿಮಾನ ನಿಲ್ದಾಣವರೆಗೆ ರೈಲುಮಾರ್ಗ ನಿಮಾಣವಾಗಲಿದೆ. ಯೋಜನೆ 2030ರ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.
ಗುರಿ ನಿಗದಿ: 149 ಕಿ.ಮೀ. ಉದ್ದದ ಉಪನಗರ ರೈಲು ಜಾಲವನ್ನು ವೇಗವಾಗಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. 2&3 ವರ್ಷಗಳಲ್ಲಿ ಕಾರ್ಯಗತಗೊಳಿಸಲು ಸಿದ್ಧತೆ ನಡೆಸಲಾಗುತ್ತಿದೆ. ಅದರಂತೆ, ಬೈಯಪ್ಪನಹಳ್ಳಿ& ಚಿಕ್ಕಬಾಣಾವರ ನಡುವಿನ ಕಾರಿಡಾರ್&2 ಅನ್ನು 2028ರ ಡಿಸೆಂಬರ್ಗೆ, ಹೀಲಲಿಗೆ&ರಾಜಾನುಕುಂಟೆ ಕಾರಿಡಾರ್-&4 ಅನ್ನು 2029ರ ಮಾರ್ಚ್ ಅಥವಾ ಜೂನ್ಗೆ ಹಾಗೂ ಕೆಎಸ್ಆರ್ ಬೆಂಗಳೂರು-&ದೇವನಹಳ್ಳಿ ವಿಮಾನ ನಿಲ್ದಾಣ ಕಾರಿಡಾರ್&1 ಮತ್ತು ಕೆಂಗೇರಿ&ವೈಟ್ಫೀಲ್ಡ್ ಕಾರಿಡಾರ್&3 ಅನ್ನು 2030ರ ಮಾರ್ಚ್ಗೆ ಆರಂಭಿಸುವ ಗುರಿ ಹೊಂದಲಾಗಿದೆ.
ರ್ಟಮಿನಲ್ ನಿಮಾರ್ಣಕ್ಕೆ ಸಿದ್ಧತೆ: ನಗರ ಕೇಂದ್ರವನ್ನು ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಕಾರಿಡಾರ್&1ರ ಮಾರ್ಗ ಅನುಮೋದನೆಯಾದ ಬಳಿಕ, ಅಗತ್ಯ ಜಮೀನಿನ ಮೌಲ್ಯಮಾಪನ ಮತ್ತು ಸ್ವಾಧಿನ ಪ್ರಕ್ರಿಯೆ ಆರಂಭವಾಗಲಿದೆ. ಈ ಪ್ರಕ್ರಿಯೆಗೆ ಸುಮಾರು ಒಂದು ವರ್ಷ ಕಾಲ ನಡೆಯಲಿದೆ. ಯಶವಂತಪುರ, ಲೊಟ್ಟೆಗೊಳ್ಳಹಳ್ಳಿ ಮತ್ತು ಹೆಬ್ಬಾಳ ಪ್ರದೇಶಗಳಲ್ಲಿ ಪ್ರಾಥಮಿಕ ಕಾಮಗಾರಿಗಳು ಈಗಾಗಲೆ ನಡೆಯುತ್ತಿವೆ. ಕಾಂಟೋನ್ಮೆಂಟ್ನಲ್ಲಿ ಉಪನಗರ ರೈಲು ರ್ಟಮಿನಲ್ ನಿಮಾರ್ಣಕ್ಕೆ ಸಿದ್ಧತೆ ನಡೆದಿದೆ.
ಯೋಜನೆಯ ವೆಚ್ಚ ಹೆಚ್ಚಳ ಸಾಧ್ಯತೆ
ಯೋಜನೆಯ ವೆಚ್ಚವನ್ನು 15,767 ಕೋಟಿ ರೂ.ನಿಂದ 16,876 ಕೋಟಿ ರೂ.ಗೆ ಹೆಚ್ಚಿಸಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ವಿಳಂಬದಿಂದ ಮತ್ತಷ್ಟು ವೆಚ್ಚ ಏರಿಕೆಯಾಗುವ ಸಾಧ್ಯತೆ ಇದೆ. ಎಲ್ಲ ಟೆಂಡರ್ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಅಂತಿಮ ಅಂದಾಜು ನಿಗದಿಯಾಗಲಿದೆ. ಜರ್ಮನಿಯ ಕೆಎಫ್ಡಬ್ಲ್ಯೂ ಮತ್ತು ಯುರೋಪಿಯನ್ ಇನ್ವೆಸ್ಟ್ಮೆಂಟ್ ಬ್ಯಾಂಕ್ ಸೇರಿ ವಿದೇಶಿ ಹಣಕಾಸು ಸಂಸ್ಥೆಗಳು ದೊಡ್ಡ ಪ್ರಮಾಣದಲ್ಲಿ ಹಣಕಾಸು ನೆರವು ನೀಡಲಿದ್ದರೂ, ಪ್ರಸ್ತುತ ಸರ್ಕಾರದ ಬಂಡವಾಳ ಹೂಡಿಕೆಯಿಂದಲೇ ಕಾಮಗಾರಿ ಮುಂದುವರಿಯಲಿದೆ.
ಉಪನಗರ ರೈಲು ಸೇವೆ ಆರಂಭಕ್ಕೆ ಆರು ಕೋಚ್ಗಳ ರೈಲುಗಳನ್ನು ಬಳಸಲಾಗುತ್ತಿದ್ದು, ಪ್ರಯಾಣಿಕರ ಬೇಡಿಕೆಯಂತೆ ಒಂಬತ್ತು ಕೋಚ್ಗಳಿಗೆ ವಿಸ್ತರಣೆ ಮಾಡಲಾಗುತ್ತದೆ. ಕೆಎಸ್ಆರ್ ಉಪನಗರ ನಿಲ್ದಾಣವನ್ನು ಬಹುಮಾಧ್ಯಮ ಸಾರಿಗೆ ಕೇಂದ್ರವಾಗಿ ರೂಪಿಸುವ ಯೋಜನೆ ಇದ್ದು, ಮೆಟ್ರೋ ಮತ್ತು ಬಸ್ ನಿಲ್ದಾಣಗಳಿಗೆ ಸ್ಕೈವಾಕ್ ಹಾಗೂ ಎಸ್ಕಲೇಟರ್ಗಳ ಮೂಲಕ ಸಂಪರ್ಕ ಕಲ್ಪಿಸಲಾಗುತ್ತದೆ.