ಬೆಂಗಳೂರು: ಮುಂದುವರಿದ ದೇಶಗಳಿಗೆ ಹೋಲಿಸಿದರೆ ದೇಶದಲ್ಲಿ ಸರ್ಕಾರ ಮತ್ತು ಉದ್ಯಮಗಳು ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಆೃಂಡ್ ಡಿ) ಯಲ್ಲಿ ಹಿಂದುಳಿದಿದ್ದು, ದೇಶದ ಜಿಡಿಪಿಯ ಕೇವಲ ಶೇ.0.2ರಷ್ಟು ಮಾತ್ರ ಆದ್ಯತೆ ನೀಡಲಾಗುತ್ತಿದೆ ಎಂದು ಬಿಟ್ಸ್ ಪಿಲಾನಿ ಕುಲಪತಿ ಪ್ರೊ. ವಿ. ರಾಮಗೋಪಾಲ್ ರಾವ್ ತಿಳಿಸಿದರು.
ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಆರ್‌ಐಟಿ) ಸೋಮವಾರ ಆಯೋಜಿಸಿದ್ದ 7ನೇ ಆವೃತ್ತಿಯ ಡಾ. ಎಂ.ಎಸ್. ರಾಮಯ್ಯ ಸ್ಮಾರಕ ಉಪನ್ಯಾಸ’ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಆರ್ ಆೃಂಡ್ ಡಿಗೆ ದಕ್ಷಿಣ ಕೊರಿಯಾ ಶೇ.3.9, ಯುಎಸ್ ಶೇ.2.7, ಯುಕೆ ಶೇ.2.1 ಆದ್ಯತೆ ನೀಡುತ್ತಿದ್ದರೆ, ಭಾರತವು ಕೇವಲ ಶೇ.0.2 ಇದೆ. ಅದೇ ರೀತಿ ವೈಜ್ಞಾನಿಕ ಪ್ರಕಟಣೆಗಳಲ್ಲಿ ಜಾಗತಿಕವಾಗಿ ಚೀನಾ ಶೇ.20.67 ಆದ್ಯತೆ ನೀಡುತ್ತಿದೆ. ಯುಎಸ್ ಶೇ.16.54 ರಷ್ಟಿದ್ದರೆ, ಭಾರತವು ಶೇ.5.31ರಷ್ಟಿದೆ. ಜಾಗತಿಕವಾಗಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಸಂಖ್ಯೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆದರೆ, ಸಂಶೋಧನೆ ಲಿತಾಂಶದಲ್ಲಿ ಮೂರನೇ ಸ್ಥಾನ, ಪೇಟೆಂಟ್‌ನಲ್ಲಿ 6ನೇ ಸ್ಥಾನ, ನಾವೀನ್ಯತೆಯಲ್ಲಿ 38, ಆರ್ ಆೃಂಡ್ ಡಿಯಲ್ಲಿ 54, ಶೈಕ್ಷಣಿಕ ಮತ್ತು ಉದ್ಯಮಗಳ ಸಹಯೋಗದಲ್ಲಿ 91ನೇ ಸ್ಥಾನದಲ್ಲಿದೆ ಎಂದು ವಿಶ್ಲೇಷಿಸಿದರು.
ಕಾರ್ಯಕ್ರಮದಲ್ಲಿ ಆರ್‌ಐಟಿ ಗೌರವ ನಿರ್ದೇಶಕರಾದ ಸಂಪಂಗಿರಾಯಮ್ಮ, ಎಂ.ಆರ್. ಕೋದಂಡರಾಮ್, ಉಪಾಧ್ಯಕ್ಷ ಎಂ.ಆರ್. ಜಾನಕೀರಾಮ್, ಕಾರ್ಯದರ್ಶಿ ಎಂ.ಆರ್. ಆನಂದರಾಮ್, ಕಾರ್ಯನಿರ್ವಾಹಕ ಎಚ್.ವಿ. ಪಾರ್ಶ್ವನಾಥ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಮತ್ತು ಕಲಿಕೆಗೆ ಪೂರಕ ವಾತಾವರಣ ಕಲ್ಪಿಸುವ ದೃಷ್ಟಿಯಿಂದ ಉಪನ್ಯಾಸ, ಕೌಶಲ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ. ಇಲ್ಲಿನ ಅನುಭವಗಳನ್ನು ಪಡೆದು ಭವಿಷ್ಯ ರೂಪಿಸಿಕೊಳ್ಳಲು ಅನುಕೂಲವಾಗಲಿದೆ. - ಡಾ. ಎಂ.ಆರ್. ಸೀತಾರಾಂ, ಗೋಕುಲ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ