- ಎಂ. ಮಹೇಶ್ವರ ರಾವ್ ಹೇಳಿಕೆ
- ಭಾರತೀಯ ಪೌರತ್ವವುಳ್ಳವರಿಗೆಲ್ಲ ಮತದಾನದ ಹಕ್ಕು
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಹೊರದೇಶಗಳಿಂದ ಬಂದು ನೆಲೆಸಿರುವ ಅನರ್ಹ ವ್ಯಕ್ತಿಗಳನ್ನು ಮತದಾರರ ಪಟ್ಟಿಯಿಂದ ಹೊರಗಿಡಲು ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ನೆರವಾಗಲಿದೆ. ಆದರೆ ಭಾರತೀಯ ಪೌರತ್ವ ಹೊಂದಿರುವ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ಕಲ್ಪಿಸುವುದು ಆಯೋಗದ ಉದ್ದೇಶ ಎಂದು ಜಿಬಿಎ ಮುಖ್ಯ ಆಯುಕ್ತ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಂ. ಮಹೇಶ್ವರ ರಾವ್ ಹೇಳಿದ್ದಾರೆ.
ಜಿಬಿಎ ಕೇಂದ್ರ ಕಚೇರಿಯಲ್ಲಿ ಎಸ್ಐಆರ್ ಸಂಬಂಧ ರಾಜಕೀಯ ಪಗಳ ಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಬುಧವಾರ ಏರ್ಪಡಿಸಿದ್ದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಕಂಡುಬಂದ ವ್ಯತ್ಯಾಸಗಳಿಗೆ ಸಂಬಂಧಿಸಿದಂತೆ ಈಗಾಗಲೇ 26 ಲ ಜನರಿಗೆ ನೋಟಿಸ್ ನೀಡಲಾಗಿದೆ. ಇವುಗಳ ಇತ್ಯರ್ಥಕ್ಕಾಗಿ 76 ಎಇಆರ್ಒಗಳು ಹಾಗೂ 1,200 ಹೆಚ್ಚುವರಿ ಎಇಆರ್ಒಗಳು ಸೇರಿ ಒಟ್ಟು 1,300 ಗ್ರೂಪ್ "ಎ' ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಪ್ರತಿದಿನ ಬೆಳಗ್ಗೆ 10ರಿಂದ ಸಂಜೆ 5 ರವರೆಗೆ ಕಚೇರಿಗಳಲ್ಲಿ ಬ್ಯಾಚ್ಗಳ ಆಧಾರದ ಮೇಲೆ ದಾಖಲೆಗಳ ಪರಿಶೀಲನೆ ಮತ್ತು ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದರು.
ಸುಮಾರು 6 ರಿಂದ 6.5 ಲ ಪ್ರಕರಣಗಳಲ್ಲಿ ಪಾಲಕರು ಮತ್ತು ಮಕ್ಕಳ ವಯಸ್ಸಿನ ವ್ಯತ್ಯಾಸ, ಹೆಸರಿನ ಅರ ದೋಷ ಹಾಗೂ ನಮೂನೆಗಳಲ್ಲಿನ ತಾಂತ್ರಿಕ ಅಸಮಾನತೆಗಳು ಕಂಡುಬಂದಿವೆ. ಹನುಮಂತನಗರದ ಗಾಳಿ ಆಂಜನೇಯ ಸ್ವಾಮಿ ದೇವಾಲಯದ ವಾರ್ಡ್ನಲ್ಲಿ 700 ಮತದಾರರನ್ನು "ಸ್ಥಳಾಂತರಗೊಂಡವರು' ಎಂದು ಗುರುತಿಸಿರುವ ಬಗ್ಗೆ ಸ್ಪಷ್ಟನೆ ನೀಡಿದ ಮಹೇಶ್ವರ್ ರಾವ್, ರಾಜಕೀಯ ಪಗಳ ಏಜೆಂಟರ ಸಮ್ಮುಖದಲ್ಲಿ ಪಂಚನಾಮೆ ಮತ್ತು ಪರಿಶೀಲನೆ ನಡೆಸಿಯೇ ಈ ಪಟ್ಟಿ ಪ್ರಕಟಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಬೂತ್ ಮಟ್ಟದ ಸಮಸ್ಯೆಗಳನ್ನು ಪರಿಹರಿಸಲು ಎಡಿಒಗಳು ವಿಶೆಷ ಗಮನ ಹರಿಸುವಂತೆ ಸೂಚನೆ ನೀಡಲಾಗಿದೆ. ಮನೆಯಿಂದ ಹೊರಬರಲಾಗದ ಹಿರಿಯ ನಾಗರಿಕರು, ಗಂಭೀರ ಅನಾರೋಗ್ಯಪಿಡಿತರು, ಗಾಲಿಕುರ್ಚಿ ಅವಲಂಬಿತರು ವಿಚಾರಣೆಗೆ ಕಚೇರಿಗೆ ಬರುವುದು ಕಡ್ಡಾಯವಲ್ಲ. ಅವರ ಪರವಾಗಿ ಕುಟುಂಬ ಸದಸ್ಯರು ಅಥವಾ ಬಿಎಲ್ಎ ಅಥವಾ ಬಿಎಲ್ಒಗಳ ಮೂಲಕ ಮಾಹಿತಿ ನೀಡಬಹುದು. ಇಲ್ಲವೇ ಅಧಿಕಾರಿಗಳೇ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಸಿ.ಎನ್.ಆರ್. ರಾವ್ಗೆ ನೋಟಿಸ್ ನೀಡಿಲ್ಲ
"ಭಾರತ ರತ್ನ' ಪುರಸತ ಹಿರಿಯ ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್ ಅವರಿಗೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ಯಾವುದೇ ನೋಟಿಸ್ ಜಾರಿ ಮಾಡಿಲ್ಲ ಎಂದು ಮಹೇಶ್ವರ ರಾವ್ ಸ್ಪಷ್ಟಪಡಿಸಿದರು. ಮತದಾರರ ಪಟ್ಟಿಯಲ್ಲಿನ ಹೆಸರಿನ ವ್ಯತ್ಯಾಸದ ಹಿನ್ನೆಲೆಯಲ್ಲಿ ರಾವ್ ಹಾಗೂ ಕುಟುಂಬ ಸದಸ್ಯರಿಗೆ ಮನೆಗೆ ತೆರಳಿ ಗಣತಿ ನಮೂನೆಗಳನ್ನು ನೀಡಿ, ಅಗತ್ಯ ಮಾಹಿತಿ ಭರ್ತಿ ಮಾಡಲಾಗಿದೆ. 2002ರ ಮತದಾರರ ಪಟ್ಟಿಯಲ್ಲಿ "ರಾಮ' ಎಂಬ ಹೆಸರಿದ್ದರೆ, ಪ್ರಸ್ತುತ ಪಟ್ಟಿಯಲ್ಲಿ ಪ್ರೊ. ಸಿ.ಎನ್. ರಾವ್ ಎಂ. ಎಂದು ನೋಂದಣಿಯಾಗಿದೆ. ಹೆಸರಿನ ವ್ಯತ್ಯಾಸ ಹಿನ್ನೆಲೆಯಲ್ಲಿ ಬೂತ್ ಮಟ್ಟದ ಅಧಿಕಾರಿ (ಬಿಎಲ್ಒ) ಯಾವುದೇ ನೋಟಿಸ್ ನೀಡದೆ, ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಶಿಫಾರಸು ಮಾಡಿದ್ದಾರೆ. ಅದರಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಹಿರಿಯ ನಟ ಶಿವರಾಜ್ ಕುಮಾರ್ ಪ್ರಕರಣವನ್ನು ಬಗೆಹರಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ಮುಖ್ಯಾಂಶಗಳು
* ಸೆ. 19 ಮತ್ತು 20 ರಂದು ಮತಗಟ್ಟೆಗಳು, ವಾರ್ಡ್ ಹಾಗೂ ತಾಲೂಕು ಕಚೇರಿಗಳಲ್ಲಿ ವಿಶೇಷ ಕ್ಯಾಂಪ್ ಆಯೋಜನೆ.
* ಬೂತ್ ಮಟ್ಟದ ಸಮಸ್ಯೆಗಳನ್ನು ಶ್ರೀದಲ್ಲೆ ಸಹಾಯವಾಣಿ ನೀಡುವ ಮೂಲಕ ಸ್ಪಂದಿಸಲಾಗುವುದು.
* ಆಯೋಗ ಸೂಚಿಸಿರುವ 11 ದಾಖಲೆಗಳನ್ನು ಪರಿಶೀಲಿಸಲಾಗುವುದು.