ವೈಟ್‌ಫೀಲ್ಡ್ ರಸ್ತೆಯಲ್ಲಿರುವ ಮೆಡಿಕವರ್ ಆಸ್ಪತ್ರೆ ’ಉಚಿತ ಎರಡನೇ ಅಭಿಪ್ರಾಯ ಪದ್ದತಿಯನ್ನ ಪ್ರಾರಂಭಿಸಿರುವುದು
ಮಹದೇವಪುರ : ಇಂದಿನ ಜೀವನಶೈಲಿ ಮತ್ತು ಅತಿಯಾದ ಮಾನಸಿಕ ಒತ್ತಡದಿಂದ ಇಂದಿನ ದಿನಗಳಲ್ಲಿ, ಆರೋಗ್ಯಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಅನೇಕ ಬಾರಿ ಆತುರದಲ್ಲಿ ಅಥವಾ ಗೊಂದಲದಲ್ಲಿ ತೆಗೆದುಕೊಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಈ ಗಂಭೀರ ಅಂಶವನ್ನು ಪರಿಗಣಿಸಿ, ವೈಟ್‌ಫೀಲ್ಡ್ ರಸ್ತೆಯಲ್ಲಿರುವ ಮೆಡಿಕವರ್ ಆಸ್ಪತ್ರೆ ’ಉಚಿತ ಎರಡನೇ ಅಭಿಪ್ರಾಯ ಪದ್ದತಿಯನ್ನ ಪ್ರಾರಂಭಿಸಿರುವುದು ಸಂತಸದ ವಿಷಯ ಎಂದು ಆರ್.ಜೆ ರಾಪಿಡ್ ರಶ್ಮಿ ತಿಳಿಸಿದರು.
ವೈಟ್ ಫೀಲ್ಡ್ ನ ಮೆಡಿಕವರ್ ಆಸ್ಪತ್ರೆ ವತಿಯಿಂದ ಹಮ್ಮಿಕೊಂಡಿರುವ ಎ್ಲ ಪ್ರಮುಖ ಆರೋಗ್ಯ ಸಮಸ್ಯೆಗಳಿಗೆ ’ಉಚಿತ ಎರಡನೇ ಅಭಿಪ್ರಾಯ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಹೃದ್ರೋಗ ,ನರರೋಗ , ಮೂಳೆಚಿಕಿತ್ಸೆ , ದೀರ್ಘಕಾಲದ ಕಾಯಿಲೆಗಳು ಮತ್ತು ತಡೆಗಟ್ಟುವ ಆರೈಕೆ ಸೇರಿದಂತೆ ವಿವಿಧ ವೈದ್ಯಕೀಯ ಸಮಸ್ಯೆಗಳ ಬಗ್ಗೆ ರೋಗಿಗಳು ಮರುಚಿಂತನೆ ನಡೆಸಿ, ಆತ್ಮವಿಶ್ವಾಸದಿಂದ ಸರಿಯಾದ ಚಿಕಿತ್ಸಾ ಕ್ರಮವನ್ನು ಆಯ್ಕೆ ಮಾಡಿಕೊಳ್ಳಲು ಈ ಅಭಿಯಾನ ಸಹಕಾರಿಯಾಗಲಿದೆ ಎಂದು ಹೇಳಿದರು.
ಮೆಡಿಕವರ್ ಆಸ್ಪತ್ರೆಯ ಹಿರಿಯ ತಜ್ಞ ವೈದ್ಯರಾದ ಸಂಜಯ್ ಪ್ರಸಾದ್ ಹೆಗ್ಡೆ ಮಾತನಾಡಿ, ಬೆಂಗಳೂರಿನಂತಹ ಮಹಾನಗರಗಳಲ್ಲಿ, ವಿಶೇಷವಾಗಿ ತಾಂತ್ರಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರು ಅತಿಯಾದ ಅಂತರ್ಜಾಲ ಸಂಶೋಧನೆಯಿಂದಾಗಿ ಗೊಂದಲಕ್ಕೊಳಗಾಗುತ್ತಾರೆ ಅಥವಾ ಚಿಕಿತ್ಸೆಯ ನಿರ್ಧಾರಗಳನ್ನು ವಿಳಂಬ ಮಾಡುತ್ತಾರೆ. ತಜ್ಞರಿಂದ ಪಡೆಯುವ ಎರಡನೇ ಅಭಿಪ್ರಾಯವು ವೈದ್ಯಕೀಯ ಸ್ಪಷ್ಟತೆಯನ್ನು ನೀಡುತ್ತದೆ, ರೋಗಿಯ ಆತಂಕವನ್ನು ಕಡಿಮೆ ಮಾಡುತ್ತದೆ ಮತ್ತು ಸುರಕ್ಷಿತ ಹಾಗೂ ಕಡಿಮೆ ಆಕ್ರಮಣಕಾರಿ ಚಿಕಿತ್ಸಾ ಮಾರ್ಗಗಳನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ.ಈ ಸೌಲಭ್ಯವು ಮೇ 31, 2026 ರವರೆಗೆ ಲಭ್ಯವಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೆಡಿಕವರ್ ಆಸ್ಪತ್ರೆಯ ಪ್ರದೇಶಿಕೆ ನಿರ್ದೇಶಕರಾದ ಸಿದ್ಧ ರೆಡ್ಡಿ. ಕೆ, ಕೇಂದ್ರದ ಮುಖ್ಯಸ್ಥ ಕ್ರಿಷ್ಣ ಮೂರ್ತಿ. ಜಿ, ಮೂತ್ರಶಾಸ್ತ್ರಜ್ಞ ಡಾ. ದಿಲೀಪ್ ಜೊತೆಗೆ ವಿದ್ಯಾರ ಬಳಗವು ಉಪಸ್ಥಿತರಿದ್ದರು.