ಜಿಬಿಎ 
ಬೆಂಗಳೂರು

ಜಾಹೀರಾತು ನಿಯಮ ಉಲ್ಲಂಘನೆಗೆ ಕೆಎಸ್​ಸಿಎಗೆ ಕೇಂದ್ರ ಪಾಲಿಕೆ ನೋಟಿಸ್​ |gba

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಕ್ರೀಡಾಂಗಣದ ಒಳಗೆ ಮತ್ತು ಹೊರಗೆ ಬೋರ್ಡ್​ಗಳು ಮತ್ತು ಜಾಹೀರಾತು ಫಲಕಗಳನ್ನು ಅಳವಡಿಸಿದ ಹಿನ್ನೆಲೆಯಲ್ಲಿ -ಜಾಹೀರಾತು ನಿಯಮ ಉಲ್ಲಂಘನೆ ಆರೋಪದ ಮೇಲೆ ರಾಜ್ಯ ಕ್ರಿಕೆಟ್​ ಅಸೋಸಿಯೇಶನ್​ (ಕೆಎಸ್​ಸಿಎ) ವಿರುದ್ಧ ಕೇಂದ್ರ ಪಾಲಿಕೆ ನೋಟೀಸ್​ ಜಾರಿಗೊಳಿಸಿದೆ.
ಜಿಬಿಎ ಜಾಹೀರಾತು ವಿಭಾಗದ ಅಧಿಕಾರಿಗಳು 2020ರ ಕಾಯ್ದೆ ಹಾಗೂ ಬೈಲಾ ಪ್ರಕಾರ, ವಿಶೇಷವಾಗಿ ಸೆಕ್ಷನ್​ 158 ಅಡಿಯಲ್ಲಿ, ಕರ್ನಾಟಕ ರಾಜ್ಯ ಕ್ರಿಕೆಟ್​ ಅಸೋಸಿಯೇಶನ್​ಗೆ ಎರಡು ಪುಟಗಳ ನೋಟೀಸ್​ ನೀಡಿ, 7 ದಿನಗಳೊಳಗೆ ಸ್ಪಷ್ಟನೆ ನೀಡುವಂತೆ ಸೂಚಿಸಿದ್ದಾರೆ.
ಜಾಹೀರಾತು ಅಳವಡಿಸುವ ಮೊದಲು ಗ್ರೇಟರ್​ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಖ್ಯ ಆಯುಕ್ತರ ಲಿಖಿತ ಅನುಮತಿ ಇಲ್ಲದಿರವುದು, ಜಾಹೀರಾತು ಪ್ರದರ್ಶನಕ್ಕೆ ಅಗತ್ಯವಾದ ಶುಲ್ಕವನ್ನು ಪಾವತಿಸದಿರುವುದು ಪ್ರಮುಖ ಅರೋಪವಾಗಿದೆ.
ನಿಯಮಗಳೇನು?: ಸೆಕ್ಷನ್​ 158 ಪ್ರಕಾರ, ಯಾವುದೇ ಜಾಹೀರಾತು ಪ್ರದರ್ಶನಕ್ಕೆ ಮುಖ್ಯ ಆಯುಕ್ತರ ಲಿಖಿತ ಅನುಮತಿ ಕಡ್ಡಾಯವಾಗಿದೆ. ಅನುಮತಿ ಇಲ್ಲದೆ ಜಾಹೀರಾತು ಪ್ರದರ್ಶನ ಕಾನೂನುಬಾಹಿರವಾಗಿದೆ. ಉಲ್ಲಂಘನೆ ಮಾಡಿದರೆ 2 ಲಕ್ಷ ರೂ.ವರೆಗೆ ದಂಡ,1 ವರ್ಷದ ವರೆಗೆ ಜೈಲು ಶಿಕ್ಷೆ ನೀಡುವ ಸಾಧ್ಯತೆ ಇದೆ. 
ಏಳು ದಿನಗಳೊಳಗೆ ಅನಧಿಕೃತ ಬೋರ್ಡ್​ಗಳನ್ನು ತೆರವುಗೊಳಿಸಬೇಕು ಇಲ್ಲದಿದ್ದರೆ ಜಿಬಿಎಯೇ ತೆರವುಗೊಳಿಸಿ, ದಂಡ ವಿಧಿಸಲಾಗುವುದು, ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.