- ಡಿಸಿಎಂ ಡಾ. ಪರಮೇಶ್ವರ ಅವರಿಂದ ಕ್ರೀಡಾಪಟುಗಳಿಗೆ ಗೌರವ
ಬೆಂಗಳೂರು: ಇತ್ತೀಚೆಗೆ ನಡೆದ ವಿವಿಧ ರಾಷ್ಟ್ರೀಯ ಬಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ಗಳಲ್ಲಿ ಸಾಲು ಸಾಲು ಪದಕಗಳನ್ನು ಮುಡಿಗೇರಿಸಿಕೊಂಡಿರುವ ರಾಜ್ಯದ ಜೂನಿಯರ್, ಯೂತ್ ಹಾಗೂ ಯು-23 ವಯೋಮಾನದ ಬಾಸ್ಕೆಟ್‌ಬಾಲ್ ತಂಡಗಳ ಆಟಗಾರರಿಗೆ ಕರ್ನಾಟಕ ರಾಜ್ಯ ಬ್ಯಾಸ್ಕೆಟ್‌ಬಾಲ್ ಸಂಸ್ಥೆ (ಕೆಎಸ್‌ಬಿಬಿಎ) ಕಂಠೀರವ ಒಳಾಂಗಣ ಕ್ರೀಡಾಂಗಣದ ಸಂಕೀರ್ಣದಲ್ಲಿರುವ ಕೆಒಎ ಭವನದಲ್ಲಿ ಭಾನುವಾರ (ಆ.16) ಮಧ್ಯಾಹ್ನ 3.30ಕ್ಕೆ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ.
ಸಮಾರಂಭದಲ್ಲಿ ಡಿಸಿಎಂ ಡಾ. ಜಿ.ಪರಮೇಶ್ವರ ಮುಖ್ಯ ಅತಿಥಿಗಳಾಗಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಎಂ.ಎನ್. ಅನುಚೇತ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ ಎಂದು ಕೆಒಎ ಗೌರವ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಗೋವಿಂದರಾಜ್ ತಿಳಿಸಿದ್ದಾರೆ.
ಕರ್ನಾಟಕ ತಂಡಗಳ ಸಾಧನೆ ವಿವರ:
* ಚಿನ್ನದ ಪದಕ: 76ನೇ ಜೂನಿಯರ್ ರಾಷ್ಟ್ರೀಯ ಬಾಸ್ಕೆಟ್‌ಬಾಲ್ ಚಾಂಪಿಯನ್‌ಷಿಷ್-2026 (ಬಾಲಕರ ತಂಡ)
* ಬೆಳ್ಳಿ ಪದಕ: 40ನೇ ಯೂತ್ ರಾಷ್ಟ್ರೀಯ ಬಾಸ್ಕೆಟ್‌ಬಾಲ್ ಚಾಂಪಿಯನ್‌ಷಿಷ್-2025 (ಬಾಲಕಿಯರ ತಂಡ)
* ಬೆಳ್ಳಿ ಪದಕ: 1ನೇ ಯು-23 ರಾಷ್ಟ್ರೀಯ ಬಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್-2025 (ಮಹಿಳಾ ತಂಡ)
* ಬೆಳ್ಳಿ ಪದಕ: 1ನೇ 3X3 ಯು-23 ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಷ್-2025 (ಮಹಿಳಾ ತಂಡ)
* ಕಂಚಿನ ಪದಕ: 1ನೇ ಯು-23 ರಾಷ್ಟ್ರೀಯ ಬಾಸ್ಕೆಟ್‌ಬಾಲ್ ಚಾಂಪಿಯನ್‌ಷಿಷ್-2025 (ಪುರುಷರ ತಂಡ).