- ಮೂರ್ನಾಲ್ಕು ವರ್ಷದಲ್ಲೇ ರೈತರ ಕೈಗೆಟುಕಲಿದೆ ಫಸಲು
- ರಾಜ್ಯದಲ್ಲಿ ತೆಂಗಿನ ಮೌಲ್ಯವರ್ಧನೆಯ ಉತ್ಪನ್ನಗಳಿಗೆ ಬೇಡಿಕೆ
ಬೆಂಗಳೂರು: ಇದು ಹೇಳಿ ಕೇಳಿ ಜೆನ್ ಜಿ ಜಮಾನ. ಎಲ್ಲವೂ ಸುಲಭ, ಶೀಘ್ರವಾಗಿ ಆಗಬೇಕೆಂಬುದು ಹೊಸ ಪೀಲಿಗೆಯ ತುಡಿತ. ಈ ಮೇನಿಯಾ ಕೃಷಿ ಕ್ಷೇತ್ರಕ್ಕೂ ಕಾಲಿಟ್ಟಿದೆ. ಬೇಗನೆ ಫಸಲು ನೀಡುವ ಹೈಬ್ರಿಡ್ ತಿಳಿಗಳು ದಿನೇ ದಿನೆ ರಾಜ್ಯದಲ್ಲಿ ಆಕರ್ಷಣೆ ಹೆಚ್ಚಿಸಿಕೊಳ್ಳುತ್ತಿದ್ದು, ಈ ಸಾಲಿಗೆ ತೆಂಗು ಕೂಡ ಸೇರಿದೆ.
ಕಡಿಮೆ ಅವಧಿಯಲ್ಲಿ ಹಚ್ಚು ಆದಾಯದ ದಾರಿ ತೋರಿರುವ ಕುಬ್ಬ ಅಥವಾ ಗಿಡ್ಡ ಕಲ್ಪತರು ಎಲ್ಲೆಡೆ ಜನಪ್ರಿಯವಾಗತೊಡಗಿದೆ. 3-4 ವರ್ಷದಲ್ಲೇ ಇಳುವರಿ ನೀಡುವ ಇಂತಹ ತೆಂಗು ತಳಿಯ ಸಸಿಗಳು ಭರ್ಜರಿ ಮಾರಾಟವಾಗುತ್ತಿವೆ.
ರೈತರಿಗೆ ಕಲ್ಪವೃಕ್ಷವಾಗಿ ಪರಿಣಮಿಸಿರುವ ತೆಂಗು ಕೃಷಿ ನಿಶ್ಚಿತ ಆದಾಯ ತಂದುಕೊಡುವ ಬೆಳೆ. ಈ ಮರದ ಎಲ್ಲ ಭಾಗಗಳೂ ಉಪಯೋಗಕ್ಕೆ ಬರುವುದರಿಂದ ತೆಂಗನ್ನು ವಾಣಿಜ್ಯ ಬೆಳೆಯಾಗಿ ಪರಿಗಣಿಸಲಾಗಿದೆ. ಮೌಲ್ಯವರ್ಧನೆಗೆ ವಿಪುಲ ಅವಕಾಶವಿರುವ ಕಾರಣ ಕೃಷಿಕರು ತಮ್ಮ ಹೊಲ-ತೋಟಗಳಲ್ಲಿ ಬೆಳೆಯುತ್ತಾರೆ. ದಶಕದಿಂದೀಚಿಗೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ಇಳುವರಿ ನೀಡುವ ತಳಿಗಳತ್ತ ರೈತರು ದೃಷ್ಟಿಹರಿಸಿದ್ದಾರೆ. ಇದಕ್ಕೆ ಒತ್ತಾಸೆಯಾಗಿ ವಿಜ್ಞಾನಿಗಳು ಸಂಶೋಧಿಸಿ ಕಡಿಮೆ ಎತ್ತರ ಬೆಳೆಯುವ ತೆಂಗನ್ನು ಸಂಶೋಧಿಸಿ ಯಶಸ್ವಿಯಾಗಿದ್ದಾರೆ.
ವಾರ್ಷಿಕ 20 ಲಕ್ಷ ಸಸಿಗಳ ಮಾರಾಟ:
ರಾಜ್ಯದಲ್ಲಿ ಬೆಳೆಯುವ ತೆಂಗು ಬೆಳೆಯಲ್ಲಿ ತುಮಕೂರು, ಮಂಡ್ಯ ಹಾಗೂ ಹಾಸನ ಜಿಲ್ಲೆಗಳು ಶೇ.80 ಪಾಲು ಹೊಂದಿವೆ. ಅದರಲ್ಲೂ ತಿಪಟೂರು ಹಾಗೂ ಅರಸೀಕರೆ ವ್ಯಾಪ್ತಿಯಲ್ಲಿನ ತೆಂಗು ಸಾಗರದಾಚೆಗೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ಅಂದಾಜು 6 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆಯುತ್ತಿದ್ದು, ಕೋವಿಡ್ ಸಾಂಕ್ರಾಮಿಕದ ಬಳಿಕ ತೆಂಗು ಬೇಡಿಕೆ ಹೆಚ್ಚಿಸಿಕೊಂಡಿದೆ. ವಯಸ್ಸಾದ ಮರಗಳ ತೆರವು, ನುಸಿ ಸೇರಿದಂತೆ ಕೀಟ ಬಾಧೆಯಿಂದ ನೆಲಕ್ಕುರುಳುವ ಮರಗಳಿಗೆ ಬದಲಿಯಾಗಿ ಹೊಸ ಸಸಿಗಳನ್ನು ನೆಡಲಾಗುತ್ತದೆ. ಹಾಗಾಗಿ ಪ್ರತೀವರ್ಷ 20-25 ಲಕ್ಷ ತೆಂಗಿನ ಸಸಿಗಳು ಮಾರಾಟವಾಗುತ್ತಿವೆ.
ತೆಂಗು ಬೆಳೆಯುವ ದೇಶದ ಟಾಪ್ 10 ರಾಜ್ಯ:
ತೆಂಗು ಬೆಳೆಯುವ ರಾಜ್ಯದ ಟಾಪ್ 10 ಜಿಲ್ಲೆ:
ಭಾರತಕ್ಕೆ ಇಂಡೋನೇಷ್ಯಾ ಪೈಪೋಟಿ:
ತೆಂಗು ಕೃಷಿಯಲ್ಲಿ ಭಾರತ ಮುಂಚೂಣಿಯಲ್ಲಿದ್ದು, ಆಗ್ನೇಯ ರಾಷ್ಟ್ರಗಳಾದ ಇಂಡೋನೇಷ್ಯಾ ಹಾಗೂ ಪಿಲಿಪೇನ್ಸ್ ರಾಷ್ಟ್ರಗಳು ತೀವ್ರ ಸ್ಪರ್ಧೆ ಒಡ್ಡಿವೆ. ಈ ಎರಡೂ ರಾಷ್ಟ್ರಗಳು ಪ್ರವಾಸೋದ್ಯಮದ ಮೂಲಕ ಹೆಚ್ಚು ಗ್ರಾಹಕರನ್ನು ಸೆಳೆಯುತ್ತಿದೆ. ಭಾರತವು ಕೂಡ ತನ್ನ 19 ರಾಜ್ಯಗಳಲ್ಲಿ ತೆಂಗು ಕೃಷಿಯನ್ನು ವಿಸ್ತರಿಸುವತ್ತ ದೃಷ್ಟಿ ಹರಿಸಿದೆ.
ತೆಂಗು ಅಭಿವೃದ್ಧಿ ಮಂಡಳಿಯಿಂದ ಉತ್ತೇಜನ:
ಕಲ್ಪತರು ನಾಡು ತುಮಕೂರು ಜಿಲ್ಲೆಯ ರೈತರು ಉತ್ಕ ೃಷ್ಟವಾದ ತೆಂಗಳನ್ನು ಬೆಳೆಯುತ್ತಿದ್ದು, ಸಾಂಪ್ರದಾಯಿಕ ಬೇಸಾಯವನ್ನು ಅನುಸರಿಸುತ್ತಿದೆ. ಕೆಲ ಜಿಲ್ಲೆಗಳಲ್ಲಿ ಕಡಿಮೆ ವರಮಾನದಿಂದಾಗಿ ತೆಂಗು ಬದಲು ಅಡಿಕೆ ಬೆಳೆಯತ್ತ ದೃಷ್ಟಿ ಹರಿಸಲಾಗಿದೆ. ಇದರ ಹೊರತಾಗಿಯೂ ತೆಂಗು ಕೃಷಿ ವಿಸ್ತರಣೆಗೆ ರಾಷ್ಟ್ರೀಯ ತೆಂಗು ಅಭಿವೃದ್ಧಿ ಮಂಡಳಿಯು (ಎನ್‌ಸಿಡಿಸಿ) ವಿವಿಧ ಕಾರ್ಯಕ್ರಮಗಳ ಮೂಲಕ ವಿಸ್ತರಣಾ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಿದೆ.
ತೆಂಗು ಬೆಳೆಗಾರರಿಂದ ಬೇಡಿಕೆ ಏನು?:
* ರಾಜ್ಯ ಸರ್ಕಾರ ಎನ್‌ಸಿಡಿಸಿ ಮಾದರಿಯಲ್ಲಿ ಹೊಸ ಕಾಯಕ್ರಮಗಳನ್ನು ಹಮ್ಮಿಕೊಳ್ಳಬೇಕು
* ನುಸಿ ಸಹಿತ ಕೀಟಬಾಧೆಗೆ ಒಳಗಾದ ತೆಂಗಿನ ತೋಟದ ಮಾಲೀಕರಿಗೆ ಪರಿಹಾರ ನೀಡಬೇಕು
* ಸಣ್ಣ ಹಿಡುವಳಿ ಹೊಂದಿರುವ ರೈತರಿಗೆ ಉಚಿತವಾಗಿ ತೆಂಗು ಸಸಿಗಳನ್ನು ವಿತರಿಸಬೇಕು
* ಬೆಳೆಗಾರ ಮಕ್ಕಳಿಗೆ ತೆಂಗು ಮೌಲ್ಯವರ್ಧನೆ ಉತ್ಪನ್ನಗಳ ತರಬೇತಿ, ಘಟಕ ಸ್ಥಾಪನೆಗೆ ಸಾಲಸೌಲಭ್ಯ ಒದಗಿಸಬೇಕು
* ವಿವಿಧ ಜಿಲ್ಲೆಗಳಲ್ಲಿ ತೆಂಗು ಬೆಳೆ ವಿಸ್ತರಣೆಗೆ ಸಬ್ಸಿಡಿ ಒದಗಿಸಬೇಕು.
ರಾಜ್ಯದಲ್ಲಿ 2-3 ವರ್ಷದಿಂದ ತೆಂಗು ಕೃಷಿ ವಿಸ್ತರಣೆಯಾಗುತ್ತಿದೆ. ಇತರ ಬೆಳೆಯತ್ತ ರೈತರು ದೃಷ್ಟಿ ಹರಿಸಿದ್ದರೂ, ನಿರಂತರ ಆದಾಯ ಹಾಗೂ ಮೌಲ್ಯವರ್ಧನೆಗೆ ಬೇಕಾದ ವಿಪುಲ ಅಕವಾಶದಿಂದಾಗಿ ತೆಂಗು ಕೃಷಿಯಿಂದ ವಿಮುಖರಾಗಿಲ್ಲ. ಇತ್ತೀಚಿಗೆ ಕುಬ್ಬ ತಳಿಗಳತ್ತ ರೈತರು ಗಮನ ಹರಿಸುತ್ತಿದ್ದಾರೆ. ತೋಟಗಾರಿಕೆ ಇಲಾಖೆಯು ಕೃಷಿಕರಿಗೆ ಅಗತ್ಯ ಮಾರ್ಗದರ್ಶನ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಲ್ಲಿ ನಿರತವಾಗಿದೆ. ಇಲಾಖೆಯಿಂದ ಬೆಳೆಗಾರರಿಗೆ ಕಡಿಮೆ ದರದಲ್ಲಿ ತೆಂಗು ಸಸಿಗಳನ್ನು ವಿತರಿಸಲಾಗುತ್ತಿದೆ.
- ಪರಶಿವಮೂರ್ತಿ, ಕಾರ್ಯನಿರ್ವಾಹಕ ನಿರ್ದೇಶಕ, ತೋಟಗಾರಿಕೆ ಇಲಾಖೆ