ತಾಪಂ ಜಿಪಂ ಸಮರಕ್ಕೆ ಚುನಾವಣಾಧಿಕಾರಿಗಳ ನೇಮಕ
ಬೆಂಗಳೂರು ತಾಲೂಕು- ಜಿಲ್ಲಾ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ನ. 16 ರೊಳಗೆ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳ ನೇಮಕಕ್ಕೆ ರಾಜ್ಯ ಚುನಾವಣೆ ಆಯೋಗ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ.
ಒಂದು ತಾಲೂಕು ವ್ಯಾಪ್ತಿಯ ಎಲ್ಲ ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಗೆ ಒಬ್ಬ ಉಪ ವಿಭಾಗಾಧಿಕಾರಿ ಅಥವಾ ತತ್ಸಮಾನ ಹುದ್ದೆಯ ಅಧಿಕಾರಿ ಗುರುತಿಸಿ ಚುನಾವಣಾಧಿಕಾರಿ ನೇಮಿಸಲು ಆಯೋಗ ತಿಳಿಸಿದೆ.
ಒಂದು ತಾಲೂಕಿನಲ್ಲಿ 10 ಕ್ಕಿಂತ ಹೆಚ್ಚು ಕ್ಷೇತ್ರಗಳಿದ್ದಲ್ಲಿ ಇಬ್ಬರು ಚುನಾವಣಾಧಿಕಾರಿಗಳ ನೇಮಕಕ್ಕೆ ಅವಕಾಶವಿದೆ. ಪ್ರತಿ ಅಧಿಕಾರಿಗೆ ಸಹಾಯಕ ತಹಸೀಲಾರ್ ಹುದ್ದೆಗೆ ತತ್ಸಮಾನರನ್ನು ಸಹಾಯಕ ಚುನಾವಣಾಧಿಕಾರಿ ಆಗಿ ನೇಮಿಸಬಹುದು (ತಾಲೂಕು ತಹಸೀಲ್ದಾರ್ ಹೊರತುಪಡಿಸಿ)
ಸರಾಸರಿ 15 ಕ್ಷೇತ್ರಗಳಿಗೆ ಒಬ್ಬರಂತೆ ತಾಲೂಕು ತಹಸೀಲ್ದಾರರು ಮತ್ತು ತತ್ಸಮಾನ ಹುದ್ದೆಯ ಅಧಿಕಾರಿಗಳನ್ನು ಗುರುತಿಸಿ ಚುನಾವಣಾಧಿಕಾರಿಯಾಗಿ ಹಾಗೂ ಉಪ ತಹಸೀಲ್ದಾರ್ ಅತವಾ ತತ್ಸಮಾನರನ್ನು ಸಹಾಯಕ ಚುನಾವಣಾಧಿಕಾರಿಯಾಗಿ ನೇಮಿಸಬಹುದು