ಪ್ರಕಾಶ್​ ರಾಜ್ 
ಬೆಂಗಳೂರು

ಸೆ.1ಕ್ಕೆ ಚುನಾವಣಾ ಆಯೋಗ ಚಲೋ

ಬೆಂಗಳೂರು: ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್​ಐಆರ್​) ಮೂಲಕ ಮತದಾರರ ಹಕ್ಕನ್ನು ರದ್ದುಗೊಳಿಸಿರುವುದನ್ನು ಖಂಡಿಸಿ, ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸೆಪ್ಟೆಬಂರ್​ 1ರಂದು "ಚುನಾವಣಾ ಆಯೋಗ ಚಲೋ' ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ನಟ ಪ್ರಕಾಶ್​ ರಾಜ್​ ಹೇಳಿದರು.
ನಗರದ ಪ್ರೆಸ್​ ಕ್ಲಬ್​ನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತರಾತುರಿಯಲ್ಲಿ ಚುನಾವಣಾ ಆಯೋಗವು ನಡೆಸಿದ ಪರಿಷ್ಕರಣೆಯ ಹಿಂದೆ ಹಲವು ಅನುಮಾನಗಳಿವೆ. ಇದಕ್ಕೆಲ್ಲ ಸ್ಪಷ್ಟನೆ ನೀಡಬೇಕು ಎಂದರು.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲು 2 ವರ್ಷ ಬಾಕಿ ಇದೆ, ಮತದಾರರಲ್ಲಿ ಯಾವುದೇ ಜಾಗೃತಿ ಮೂಡಿಸದೆ, ಮಾಹಿತಿ ನೀಡದೆ ಎಸ್​ಐಅರ್​ ನಡೆಸಲಾಗಿದೆ. ಆಯೋಗದ ಅಜೆಂಡಾ ಏನೆಂಬುದು ಅರ್ಥವಾಗುತ್ತಿಲ್ಲ. ಮತದಾರರ ಕರಡು ಪಟ್ಟಿಯಲ್ಲಿ 60 ಲಕ್ಷ ಮತದಾರರ ಹಕ್ಕನ್ನು ರದ್ದುಗೊಳಿಸುವ ಅಗತ್ಯವಿನಿತ್ತು ಎಂದು ಪ್ರಶ್ನಿಸಿದರು.
ಎಸ್​ಐಅರ್​ ನಡೆಸಿ ಚುನಾವಣೆ ಆಯೋಗವು ಬಿಡುಗಡೆ ಮಾಡಿರುವ ಅಂಕಿ ಸಂಖ್ಯೆ, ದೋಷಭರಿತ ಅನಾಗರಿಕ ಪ್ರಕ್ರಿಯೆಯನ್ನು ನಾಗರಿಕ ಸಮಾಜ ಒಪ್ಪಲು ಸಾಧ್ಯವಿಲ್ಲ. ಕೇಂದ್ರ ಚುನಾವಣಾ ಅಯೋಗವನ್ನು ಆಯ್ಕೆ ಮಾಡಲು ಕೇಂದ್ರ ಸರ್ಕಾರ ಮಾಡುತ್ತಿರುವ ತಿದ್ದುಪಡಿಯೇ ದುರುದ್ದೇಶದಿಂದ ಕೂಡಿದೆ ಎಂದು ದೂರಿದರು.
ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್​, ಎದ್ದೇಳು ಕರ್ನಾಟಕ ಸಂಟನೆಯ ನೂರ್​ ಶ್ರೀಧರ್​, ಕೆ.ಎಲ್​. ಅಶೋಕ್​, ರೈತ ಸಂದ ಕಾರ್ಯಧ್ಯಕ್ಷ ವೀರಸಂಗಯ್ಯ, ಎಎಪಿಯ ಸೀತಾರಾಮ್​ ಗುಂಡಪ್ಪ, ನಾಗೇಶ್​ ಇದ್ದರು.