- 449 ಕೋಟಿ ರೂ. ವೆಚ್ಚದ ಯೋಜನೆ
ಬೆಂಗಳೂರು: "ರಾಜಧಾನಿಯ ಮೊದಲ ಡಬಲ್ ಡೆಕ್ಕರ್ ಮೇಲ್ಸೇತುವೆ' ಖ್ಯಾತಿ ಪಡೆದ ನಗರದ ಸಿಲ್ಕ್ಬೋರ್ಡ್ ಜಂಕ್ಷನ್ನಲ್ಲಿರುವ ಫ್ಲೈಓವರ್ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು,ಫೆಬ್ರವರಿ ಅಂತ್ಯದೊಳಗೆ ಸಂಪೂರ್ಣ ಸಂಚಾರಮುಕ್ತವಾಗುವ ನಿರೀೆ ಇದೆ.
ನಗರದ ಸಂಚಾರ ಸಿಕ್ಕಿನ ಸಮಸ್ಯೆಯನ್ನು ಕಡಿಮೆಗೊಳಿಸವ ನಿಟ್ಟಿನಲ್ಲಿ 449 ಕೋಟಿ ರೂ. ವೆಚ್ಚದ ಈ ಯೋಜನೆಯ ಶ್ರೀ ಕಾರ್ಯಾರಂಭಕ್ಕೆ ಸಿದ್ಧತೆಗಳು ನಡೆಯುತ್ತಿದೆ. ಇದು ಸೆಂಟ್ರಲ್ ಸಿಲ್ಕ್ಬೋರ್ಡ್ ಜಂಕ್ಷನ್ನಿಂದ ಬಿಟಿಎಂ ಲೇಔಟ್, ಎಚ್ಎಸ್ಆರ್ ಲೇಔಟ್ ಮತ್ತು ಬೆಳ್ಳಂದೂರುವರೆಗಿನ ಸಂಚಾರ ಸಿಕ್ಕಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲಿದೆ.
2024ರಲ್ಲೇ ಮೇಲ್ಸೇತುವೆಯ ಒಂದು ಬದಿಯ ಭಾಗ ತೆರೆದಿತ್ತು. ಆದರೆ ಅಸ್ತಿತ್ವದಲ್ಲಿರುವ ರಸ್ತೆ ಮಾರ್ಗದ ಮೇಲೆ 42 ಮೀಟರ್ ಉಕ್ಕಿನ ಸೇತುವೆಯನ್ನು ಅಳವಡಿಸಿದ್ದರಿಂದ ಒಂದು ಭಾಗ ವಿಳಂಬವಾಗಿತ್ತು. ಕಾರ್ಮಿಕರು ಈಗ ಕಾಂಕ್ರೀಟ್ ಚಪ್ಪಡಿ ಹಾಕುವ ಕೆಲಸವನ್ನು ಪೂರ್ಣಗೊಳಿಸುತ್ತಿದ್ದಾರೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಅಧಿಕಾರಿಗಳು ಫೆಬ್ರವರಿ ಅಂತ್ಯದ ವೇಳೆಗೆ ಸಿವಿಲ್ ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿ ಹೊಂದಿದ್ದಾರೆ.
ಎಚ್ಎಸ್ಆರ್ ಲೇಔಟ್ ಅನ್ನು ಬಿಟಿಎಂ ಲೇಔಟ್ ಜತೆ ಸಂಪರ್ಕಿಸುವ ಮೇಲ್ಸೇತುವೆ, ಸ್ಟೀಲ್ ಗಿರ್ಡರ್ ಅಳವಡಿಸುವಲ್ಲಿ ವಿಳಂಬವನ್ನು ಎದುರಿಸಿತ್ತು. ಸದ್ಯ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿದ್ದು, ಶ್ರೀ ಉದ್ಘಾಟನೆಯ ದಿನಾಂಕ ಘೋಷಣೆಯಾಗಲಿದೆ. ಕೆಲವು ಪರಿಶೀಲನೆಗಳು ಬಾಕಿ ಇದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. ಗುತ್ತಿಗೆದಾರರು ಫೈನಲ್ಟಚ್ ನೀಡಿದ ನಂತರ, ಸಂಚಾರ ಪೊಲೀಸರು ಸಾರ್ವಜನಿಕರಿಗೆ ಸಂಚಾರಮುಕ್ತ ಮಾಡುವ ಮೊದಲು ರಚನೆಯನ್ನು ಪರಿಶೀಲಿಸುತ್ತಾರೆ ತಿಳಿಸಿದ್ದಾರೆ. ಫೆಬ್ರವರಿ ಅಂತ್ಯದ ವೇಳೆಗೆ ಕಾಮಗಾರಿ, ಪರಿಶೀಲನೆ ಎಲ್ಲವೂ ಮುಗಿಯಲಿದ್ದು, ನಗರದ ಮೊದಲ ಡಬಲ್ ಡೆಕ್ಕರ್ ಸಂಪೂರ್ಣವಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.