ತಾವರೆಕೆರೆ ಗ್ರಾಮದಲ್ಲಿ ಆಯೋಜಿಸಿದ್ದ ಕೆಂಪೇಗೌಡ ಜಯಂತೋತ್ಸವದಲ್ಲಿ ಶ್ರೀ ನಂಜಾವಧೂತ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿದರು. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಇತರರಿದ್ದರು. 
ಬೆಂಗಳೂರು

ರೈತರನ್ನು ಒಕ್ಕಲೆಬ್ಬಿಸಬೇಡಿ : ಶ್ರೀ ನಂಜಾವಧೂತ ಸ್ವಾಮೀಜಿ ಸಲಹೆ|kempegowda jayanthi

ಯಶವಂತಪುರ : ಅನ್ನ ನೀಡುವ ರೈತ ಉಳಿದರೆ ಮಾತ್ರ ದೇಶ ಉಳಿಯುತ್ತದೆ ಅಭಿವೃದ್ಧಿಯ ಹೆಸರಿನಲ್ಲಿ ಸರ್ಕಾರಗಳು ರೈತರನ್ನು ಒಕ್ಕಲೆಬ್ಬಿಸಬಾರದು ಎಂದು ಪಟ್ಟನಾಯಕನಹಳ್ಳಿಯ

ಶ್ರೀ ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದರು.
ಕ್ಷೇತ್ರದ ತಾವರೆಕೆರೆ ಗ್ರಾಮದಲ್ಲಿ ಶ್ರೀ ನಾಡಪ್ರಭು ಕೆಂಪೇಗೌಡ ಸಮಿತಿ ಆಯೋಜಿಸಿದ್ದ ಕೆಂಪೇಗೌಡರ ಜಯಂತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿ ಮಾತನಾಡಿದರು.
ಅತ್ಯಂತ ಮುಂದುವರೆದ ಜಪಾನ ದೇಶದ ಪ್ರಮುಖ ನಗರ ಒಂದರ ಹೃದಯ ಭಾಗದಲ್ಲಿ ರೈತನೋರ್ವ ತನ್ನ ಜಮೀನನ್ನು ನಗರೀಕರಣ, ಕೈಗಾರಿಕರಣಕ್ಕೆ ಒಳಪಡಿಸದೆ ಭತ್ತ ಬೆಳೆಯಲು ಗದ್ದೆಯಾಗಿ ಉಳಿಸಿಕೊಳ್ಳುವುದಕ್ಕೆ ಜಪಾನ್ ಸರ್ಕಾರ ಸಂಪೂರ್ಣ ಸಹಕಾರ ನೀಡಿದೆ. ವ್ಯವಸಾಯದ ಭೂಮಿಯನ್ನು 30 ವರ್ಷ ಪರಭಾರೆ ಮಾಡದಂತೆ, ಕೃಷಿಯೇತರ ಚಟುವಟಿಕೆಗಳಿಗೆ ಅವಕಾಶವಿಲ್ಲದಂತೆ ಷರತ್ತು ವಿಧಿಸಿ ವ್ಯವಸಾಯಕ್ಕೆ ಅನುವು ಮಾಡಿಕೊಟ್ಟಿದೆ. ರೈತರನ್ನು ಉಳಿಸುವಂತಹ ದಿಟ್ಟ ಐತಿಹಾಸಿಕ ನಿರ್ದರ್ಶನಗಳನ್ನು ವ್ಯವಸ್ಥೆ, ಸರ್ಕಾರ ಮಾದರಿಯಾಗಿ ಪರಿಗಣಿಸಬೇಕು ಎಂದರು.
ಕೆಂಪೇಗೌಡರ ಸಮಾಧಿ ಸ್ಥಳವಿರುವ ಕೆಂಪಾಪುರ ಗ್ರಾಮದ ರೈತರಿಗೆ ಅನ್ಯಾಯವಾಗಬಾರದು
ರೈತರು ಕೇಳುವ ಎ್ಲ ಪರಿಹಾರಗಳನ್ನು ಸರ್ಕಾರ ಒದಗಿಸಿದ ನಂತರವಷ್ಟೇ
ಕೆಂಪೇಗೌಡರ ಸಮಾಧಿ ಸ್ಥಳವನ್ನು ಸಮಗ್ರವಾಗಿ ಕಾಲಮಿತಿಯಲ್ಲಿ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದರು.
ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ತಾವರೆಕೆರೆಯ ಶ್ರೀ ಕಾಳಪ್ಪ ಹಠಯೋಗಿ ಮಠದ ಶಿವಪುತ್ರ ಸ್ವಾಮೀಜಿ, ಮಾಗಡಿಯ ಸಿದ್ದಲಿಂಗ ಸ್ವಾಮೀಜಿ, ಸಮಾಜ ಸೇವಕ ಎಚ್.ಎಂ ಕೃಷ್ಣಮೂರ್ತಿ, ರಾಜ್ಯ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಡಿ. ಹನುಮಂತಯ್ಯ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಎಲ್ ಕೆಂಪೇಗೌಡ, ಬೆಂಗಳೂರು ಜಿಪಂ ಮಾಜಿ ಅಧ್ಯಕ್ಷ ಟಿ.ಜಿ ನರಸಿಂಹಮೂರ್ತಿ,ತಾವರೆಕೆರೆ ಹೋಬಳಿ ಜೆಡಿಎಸ್ ಅಧ್ಯಕ್ಷ ಶಂಕರೇಗೌಡ, ಸಮಿತಿ ಪದಾಧಿಕಾರಿಗಳಾದ ವೆಂಕಟೇಶ್, ಜೈಕುಮಾರ್, ಗಿರೀಶ್, ಆಕರ್ಷಣೆ ಮೂರ್ತಿ ಇತರರಿದ್ದರು.