- ಕಂದಾಯ ಸಚಿವ ಕೃಷ್ಣಬೈರೇಗೌಡ ಮಹತ್ವದ ಮಾಹಿತಿ
- ಆಧಾರ್ ಆಧಾರಿತವಾದ ಆನ್‌ಲೈನ್ ಸೇವೆ
- ಪಾರದರ್ಶಕತೆಗೆ ಒತ್ತು, ದುರ್ಬಳಕೆಗೆ ಕಡಿವಾಣ
ಬೆಂಗಳೂರು: ಮನೆ ಬಾಗಿಲಿಗೆ ಆಡಳಿತ, ಬೆರಳ ತುದಿಯಲ್ಲೇ ಮಾಹಿತಿ, ಆನ್‌ಲೈನ್ ಮುಖೇನ ಆಸ್ತಿವಹಿವಾಟು, ದಾಖಲೆಗಳ ಲಭ್ಯತೆ ಆಗುಮಾಡಿದ ಸರ್ಕಾರ, ಡಿಜಿಟಲ್ ಇ-ಸ್ಟಾೃಂಪ್‌ನ್ನು (Digital e-stamp) ಪರಿಚಯಿಸಿದೆ.
ಕಳೆದ ಒಂದು ತಿಂಗಳ ಕಾಲ ಈ ವ್ಯವಸ್ಥೆಯನ್ನು ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಿದೆ. ಸೇವೆಯು ಅತ್ಯಂತ ಸುರಕ್ಷಿತ, ನಾಗರಿಕರಿಗೆ ಅನುಕೂಲವೆಂದು ಖಚಿತಪಡಿಸಿಕೊಂಡು, ನಂತರ ಜಾರಿಗೊಳಿಸಿದೆ.
ವಿಕಾಸಸೌಧದಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಈ ವಿಷಯ ಪ್ರಕಟಿಸಿದರು. ನಾಗರಿಕ ಸ್ನೇಹಿ ಕ್ರಮವಾಗಿ ಡಿಜಿಟಲ್ ಇ-ಸ್ಟಾೃಂಪ್ ಸೇವೆ ಒದಗಿಸಲು ನಿರ್ಧರಿಸಲಾಗಿದೆ ಎಂದರು.
ಇ-ಗವರ್ನನ್ಸ್ ಮೂಲಕ ಕಾಗದರಹಿತ, ತ್ವರಿತ ಆಡಳಿತಕ್ಕೆ ವ್ಯವಸ್ಥೆಯಾಗಿದೆ. ಸರ್ಕಾರದ ಹಲವಾರು ಸೇವೆಗಳನ್ನು ಆನ್‌ಲೈನ್ ಮುಖೇನ ನಾಗರಿಕರಿಗೆ ಒದಗಿಸಲಾಗುತ್ತಿದೆ.
ಮತ್ತೊಂದು ಹೆಜ್ಜೆ
ಕಾಗದರಹಿತ ಆಡಳಿತದ ಮತ್ತೊಂದು ಹೆಜ್ಜೆ, ನಾಗರಿಕರ ಸಬಲೀಕರಣಕ್ಕೆ ಅತ್ಯಾಧುನಿಕ ತಂತ್ರಜ್ಞಾನದ ಉಪಯೋಗಿಸಿಕೊಂಡಿದ್ದು, ಕೇಂದ್ರ ಸರ್ಕಾರವು ಡಿಜಿಟಲೀಕರಣಕ್ಕೆ ಒತ್ತು ನೀಡಬೇಕು ಎಂದು ಎಲ್ಲ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ ಎಂದರು.
ಡಿಜಿಟಲ್ ಸ್ಟಾೃಂಪ್ ಕೂಡ ಅತ್ಯಂತ ಭದ್ರತೆ, ಸುರಕ್ಷಿತ. ವಿರೂಪಗೊಳಿಸಲು ಸಾಧ್ಯವಿಲ್ಲದ ಹಾಗೆ ತಾಂತ್ರಿಕ ಬಲ ಒದಗಿಸಿದ್ದು, ಆಧಾರ್ ಆಧಾರಿತ ಆನ್‌ಲೈನ್ ಸೇವೆಯಿದಾಗಿದೆ.
ನಾಗರಿಕರು ತಮ್ಮ ಮನೆಯಲ್ಲಿ ಕುಳಿತು ಡಿಜಿಟಲ್ ಇ-ಸ್ಟಾೃಂಪ್ ಪಡೆಯಲು ಅವಕಾಶವಿದೆ ಎಂದು ಸಚಿವ ಕೃಷ್ಣಬೈರೇಗೌಡ ವಿವರಿಸಿದರು.
ಛಾಪಾ ಕಾಗದ ವಂಚನೆ ಹಗರಣ 2002ರಲ್ಲಿ ಬಹಿರಂಗವಾದ ನಂತರ ಇ-ಸ್ಟಾೃಂಪ್ ಜಾರಿಗೆ ತರಲಾಯಿತು. ಈ ವ್ಯವಸ್ಥೆಯಲ್ಲೂ ೆಟೊಕಾಪಿ ಯಂತ್ರಗಳ ಮೂಲಕ ನಕಲು ಅಥವಾ ಅಸಲಿ ಪ್ರತಿಯಂತೆ ಸೃಷ್ಟಿಸಿ ಮೋಸ ಮಾಡುವುದು.
ಒಂದು ಉದ್ದೇಶಕ್ಕೆ ಇ-ಸ್ಟಾೃಂಪ್ ಖರೀದಿಸಿ ಬೇರೆ ರೀತಿಯ ದಸ್ತಾವೇಜಿಗೆ ಬಳಸಿ ಮುದ್ರಾಂಕ ಶುಲ್ಕ ವಂಚನೆ ಮತ್ತಿತರ ಲೋಪಗಳು ದೊಡ್ಡ ಪ್ರಮಾಣದಲ್ಲಿ ಕಂಡು ಬಂದಿವೆ. ನಿರ್ದಿಷ್ಟವಾಗಿ ಇಂತಿಷ್ಟೇ ಪ್ರಕರಣಗಳು, ಮೊತ್ತದ ಪ್ರಮಾಣ ಹೇಳುವುದು ಕಷ್ಟ ಸಾಧ್ಯವೆಂದರು.
ದುರ್ಬಳಕೆಗೆ ಕಡಿವಾಣ
ಮಧ್ಯವರ್ತಿಗಳ ನೆರವಿಲ್ಲದೆ ಇಂಟರ್ನೆಟ್ ಸಂಪರ್ಕದಿಂದ ಡಿಜಿಟಲ್ ಇ-ಸ್ಟಾೃಂಪ್ ಪಡೆಯಲು ಅವಕಾಶವಿದೆ. ನಕಲು ಪ್ರತಿ ಸೃಷ್ಟಿ, ತಪ್ಪು ವರ್ಗಾವಣೆ, ಮುದ್ರಾಂಕ ಶುಲ್ಕ ವಂಚನೆ, ಬದಲಾವಣೆ, ಆಧಾರ್ ಆಧಾರಿತ ಡಿಜಿಟಲ್ ಸಹಿ ಹೊಂದಿರುವ ಕಾರಣ ವಿಶ್ವಾಸಾರ್ಹವಾಗಿದೆ.
ನಾಗರಿಕರಿಗೆ ಪಾರದರ್ಶಕ ಸೇವೆಯನ್ನು ಖಾತರಿಪಡಿಸುತ್ತದೆ. ಸದ್ಯಕ್ಕೆ ಕಾವೇರಿ ಪೋರ್ಟಲ್ ಮೂಲಕ ಡಿಜಿಟಲ್ ಇ-ಸ್ಟಾೃಂಪ್ ಪಡೆಯಲು ಅವಕಾಶವಿದೆ. ಒಪ್ಪಂದ, ದೃಢೀಕರಣ ಮಾದರಿ ಕೂಡ ಒದಗಿಸಲಾಗುತ್ತದೆ.
ಈ ಮಾದರಿ ನಾಗರಿಕರಿಗೆ ಇಷ್ಟವಿಲ್ಲದಿದ್ದರೆ ಸಿದ್ಧವಾದ ಡಿಜಿಟಲ್ ಇ-ಸ್ಟಾೃಂಪ್ ಪಡೆದು ತಮಗೆ ಬೇಕಾದಂತೆ ದಸ್ತಾವೇಜು ತಯಾರು ಮಾಡಿಸಿಕೊಳ್ಳಬಹುದಾಗಿದ್ದು, ಆಯಾ ಸೇವೆಗೆ ತಕ್ಕಂತೆ ಮುದ್ರಾಂಕ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದರು.