- ಜಿಬಿಎ ಅಧಿಕಾರಿಗಳ ಸಭೆ
- ಹವಾಮಾನ ವೈಪರೀತ್ಯ ಎದುರಿಸಲು ಪ್ರಕೃತಿ ಆಧಾರಿತ ಪರಿಹಾರ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಜಿಬಿಎ ವ್ಯಾಪ್ತಿಯಲ್ಲಿ ಪ್ರವಾಹ ನಿಯಂತ್ರಣ ಮತ್ತು ಪರಿಸರ ಸಂರಣೆಗಾಗಿ ಯೋಜನೆ ರೂಪಿಸಲಾಗಿದ್ದು, ಬಳಕೆಯಾಗದ ಕೆರೆಗಳನ್ನು ಪ್ರವಾಹ ನಿರೋಧಕ ಭೂದೃಶ್ಯಗಳನ್ನಾಗಿ ಪರಿವರ್ತಿಸುವ ಕುರಿತು ವಿಸ್ತಾರವಾದ ನೀಲಿನೆಯನ್ನು ಸಿದ್ಧಪಡಿಸಲಾಗಿದೆ.
ಈ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನಿರ್ದೇಶನದ ಮೇರೆಗೆ ಜಿಬಿಎ ಮುಖ್ಯ ಆಯುಕ್ತರ ಅಧ್ಯತೆಯಲ್ಲಿ ಉನ್ನತ ಮಟ್ಟದ ಪರಾಮರ್ಶನಾ ಸಭೆಯನ್ನು ನಡೆಸಲಾಗಿದೆ.
ಬೆಂಗಳೂರಿನಲ್ಲಿ ಮಳೆಗಾಲದಲ್ಲಿ ಉಂಟಾಗುವ ಪ್ರವಾಹದ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಮತ್ತು ಹವಾಮಾನ ವೈಪರೀತ್ಯಕ್ಕೆ ತಕ್ಕಂತೆ ನಗರವನ್ನು ಸಜ್ಜುಗೊಳಿಸಲು ಪ್ರಕೃತಿ ಆಧಾರಿತ ಪರಿಹಾರಗಳಿಗೆ ಜಿಬಿಎ ಮುಂದಾಗಿದೆ. ಜಿಬಿಎ ವ್ಯಾಪ್ತಿಯಲ್ಲಿರುವ ಸಮೀಕ್ಷೆ ಮಾಡಲಾದ ಬಳಕೆಯಾಗದ 19 ಕೆರೆಗಳ ಪ್ರಸ್ತುತ ಸ್ಥಿತಿಗತಿಯನ್ನು ಸಭೆಯಲ್ಲಿ ಚರ್ಚಿಸಲಾಗಿದೆ. ಇವುಗಳ ಮರುಬಳಕೆಗಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಮೀಕ್ಷೆ ಮಾಡಲಾದ 19 ಕೆರೆಗಳಲ್ಲಿ 8 ಕೆರೆಗಳನ್ನು ಈಗಾಗಲೇ ವಿವಿಧ ವಸತಿ ಬಡಾವಣೆಗಳು ಮತ್ತು ವಸತಿ ಯೋಜನೆಗಳಿಗಾಗಿ ಮಾರ್ಪಡಿಸಲಾಗಿದೆ. 5 ಕೆರೆಗಳು ಆಟದ ಮೈದಾನಗಳು, ಉದ್ಯಾನವನಗಳು ಮತ್ತು ಕ್ರೀಡಾಂಗಣಗಳಾಗಿ ಬದಲಾಗಿವೆ. ಇದಕ್ಕೆ ಉದಾಹರಣೆಯಾಗಿ ಹೆಣ್ಣೂರು ಕೆರೆಯನ್ನು ವೃ ಉದ್ಯಾನವನವನ್ನಾಗಿ ಹಾಗೂ ಸಂಪಂಗಿರಾಮ ಕೆರೆಯನ್ನು ಕಂಠೀರವ ಕ್ರೀಡಾಂಗಣವನ್ನಾಗಿ ಪರಿವರ್ತಿಸಲಾಗಿದೆ. ಇನ್ನುಳಿದ 6 ಕೆರೆಗಳು ಪ್ರಸ್ತುತ ಒತ್ತುವರಿಯಾಗಿದ್ದು, ಇವುಗಳಲ್ಲಿ ಕೆಲವು ಭಾಗಗಳಲ್ಲಿ ಮಾತ್ರ ಮರುಸ್ಥಾಪನೆಗೆ ಯೋಗ್ಯವಾದ ಮುಕ್ತ ಭೂಮಿ ಲಭ್ಯವಿದೆ ಎಂದು ಸರ್ಕಾರದ ವರದಿಯ ಮೂಲಕ ತಿಳಿದು ಬಂದಿದೆ.
ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ:
ಈಗ ಇರುವ ಎಲ್ಲ ಮುಕ್ತ ಕೆರೆ ಜಾಗಗಳನ್ನು ತಣವೇ ಸಮೀೆ ನಡೆಸಿ, ಸುತ್ತಲೂ ರಕ್ಷಣಾ ಬೇಲಿ ಹಾಕಬೇಕು. ಗುರುತಿಸಲಾದ ಪ್ರವಾಹ ನಿರೋಧಕ ಭೂದೃಶ್ಯಗಳ ಅಭಿವೃದ್ಧಿಗಾಗಿ ಒಂದು ತಿಂಗಳ ಒಳಗಾಗಿ ವಿವರವಾದ ಯೋಜನಾ ವರದಿ ಸಿದ್ಧಪಡಿಸಬೇಕು. ರಣೆ ಮತ್ತು ಅರಣ್ಯ ಇಲಾಖೆಗಳಂತಹ ವಿವಿಧ ಸಂಸ್ಥೆಗಳ ಅಧೀನದಲ್ಲಿರುವ, ಇದುವರೆಗೆ ಅಭಿವೃದ್ಧಿಗೊಳ್ಳದ ಕೆರೆಗಳನ್ನು ಗುರುತಿಸಿ, ಅವುಗಳನ್ನು ಜಿಬಿಎಗೆ ಹಸ್ತಾಂತರಿಸುವ ಮತ್ತು ಅಭಿವೃದ್ಧಿಪಡಿಸುವ ಸಾಧ್ಯತೆಗಳ ಬಗ್ಗೆ ವರದಿ ನೀಡಬೇಕೆಂದು ಅಧಿಕಾರಿಗಳಿಗೆ ಜಿಬಿಎ ಮುಖ್ಯ ಆಯುಕ್ತರು ಸೂಚನೆ ನೀಡಿದ್ದಾರೆ.
ಪ್ರವಾಹ ನಿರೋಧಕ ಭೂದೃಶ್ಯ ಪರಿಕಲ್ಪನೆ
ಜಿಬಿಎಯ ಅರಣ್ಯ, ಪರಿಸರ ಮತ್ತು ಹವಾಮಾನ ವೈಪರೀತ್ಯ (ಎಫ್ಇಸಿಸಿ) ವಿಭಾಗವು ಅಭಿವೃದ್ಧಿಪಡಿಸಿರುವ ನೂತನ ಪರಿಕಲ್ಪನೆಯಡಿ, ಭಾರಿ ಮಳೆಯ ಸಂದರ್ಭದಲ್ಲಿ ಹೆಚ್ಚುವರಿ ಮಳೆನೀರನ್ನು ತಾತ್ಕಾಲಿಕವಾಗಿ ಹಿಡಿದಿಟ್ಟುಕೊಳ್ಳುವ ಪ್ರಕೃತಿ ಆಧಾರಿತ ಜಾಗಗಳನ್ನು ನಿರ್ಮಿಸಲಾಗುತ್ತದೆ. ಈ ಯೋಜನೆಯ ಮೊದಲ ಹಂತವಾಗಿ ನಗರದ ಪ್ರಮುಖ ನಾಲ್ಕು ಕೆರೆಗಳನ್ನು ಗುರುತಿಸಲಾಗಿದೆ. ಇದರೊಂದಿಗೆ ನಗರದಾದ್ಯಂತ ತಾತ್ಕಾಲಿಕ ಪ್ರವಾಹಪೀಡಿತ ಸೂಕ್ಷ$್ಮ ಪ್ರದೇಶಗಳನ್ನು ಗುರುತು ಮಾಡಲಾಗುತ್ತಿದ್ದು, ತೀವ್ರ ಮಳೆಯ ಸಮಯದಲ್ಲಿ ಮಳೆನೀರನ್ನು ಹಿಡಿದಿಟ್ಟುಕೊಳ್ಳಲು ಸೂಕ್ತವಾದ ಸ್ಥಳವಾಗಿ ಮಾರ್ಪಡಿಸಲು ಚಿಂತಿಸಲಾಗುತ್ತಿದೆ.
ಲಿಂಗರಾಜಪುರ ಕೆರೆಯಲ್ಲಿ ಪ್ರವಾಹ ನಿರೋಧಕ ಭೂದೃಶ್ಯ ಮತ್ತು ಬಯೋಸ್ವೇಲ್ಸ್, ದ್ಯಾಟಗುಂಟೆಪಾಳ್ಯ ಕೆರೆಯನ್ನು ಪ್ರಕೃತಿ ಆಧಾರಿತ ನೀರು ಶೇಖರಣಾ ತಾಣ, ಚಿಕ್ಕಲ್ಲಸಂದ್ರ ಕೆರೆಯಲ್ಲಿ ತಾತ್ಕಾಲಿಕ ಮಳೆನೀರು ನಿಯಂತ್ರಣ ಜಾಗ ಹಾಗೂ ಇಟ್ಟಮಡು ಕೆರೆಯನ್ನು ಪರಿಸರಸ್ನೇಹಿ ಜಲನಯನ ಪ್ರದೇಶವಾಗಿ ಪರಿವರ್ತಿಸಲು ತೀರ್ಮಾನಿಸಲಾಗಿದೆ.