vidahan parishath 
ಬೆಂಗಳೂರು

ಪರಿಷತ್ ಆಕಾಂಕ್ಷಿಗಳ ಪ್ರದಕ್ಷಿಣೆ

ವಿಧಾನಪರಿಷತ್‌ಗೆ ನಾಮನಿರ್ದೇಶನ ಬಯಸಿರುವ ಆಕಾಂಕ್ಷಿಗಳು ಶುಕ್ರವಾರ ಸಿಎಂ ದುಂಬಾಲು ಬಿದ್ದಿದ್ದರು.

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದಿಲ್ಲಿಗೆ ಪ್ರಯಾಣ ಬೆಳೆಸುತ್ತಿರುವುದು ಗೊತ್ತಾಗುತ್ತಿದ್ದಂತೆ ವಿಧಾನ ಪರಿಷತ್ ನಾಮನಿರ್ದೇಶನ ಬಯಸಿರುವ 10ಕ್ಕೂ ಹೆಚ್ಚು ಆಕಾಂಕ್ಷಿಗಳು ಅವರ ಮನೆಗೆ ಪ್ರದಕ್ಷಿಣೆ ಹಾಕಿದರು.

ಕಲೆ, ಸಾಹಿತ್ಯ, ವಿಜ್ಞಾನ, ಸಮಾಜಸೇವೆ, ಪತ್ರಿಕೋದ್ಯಮ ಕ್ಷೇತ್ರಗಳಿಂದ ಐವರನ್ನು ವಿಧಾನಪರಿಷತ್‌ಗೆ ನಾಮನಿರ್ದೇಶನ ಮಾಡಲು ಅವಕಾಶವಿದ್ದು ತಮ್ಮನ್ನೇ ಪರಿಗಣಿಸುವಂತೆ ಸಿಎಂಗೆ ಮನವಿ ಮಾಡಿದರು.

ಕೆಲವರು ಗೃಹಕಚೇರಿಯಲ್ಲಿ ಇನ್ನೂ ಕೆಲವರು ಮನೆಯಲ್ಲಿ ಹಾಗೂ ಕನಕಪುರದಲ್ಲಿ ಸಿಎಂ ಭೇಟಿ ನಿವೇದನೆ ಮಾಡಿಕೊಂಡರು. ದೂರವಿದ್ದವರು ದೂರವಾಣಿ ಕರೆ ಮಾಡಿ ನೆನೆಪಿಸಿದರು.

ಪ್ರಮುಖವಾಗಿ ಚಿತ್ರನಟ ಸಾದು ಕೋಕಿಲ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅವರು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಕಾಣಿಸಿಕೊಂಡರು. ಮಾಜಿ ಸದಸ್ಯ ಆಯನೂರು ಮಂಜುನಾಥ್ ಕಾರ್ಯನಿಮಿತ್ತ ಕೃಷ್ಣಾಕ್ಕೆ ಆಗಮಿಸಿದ್ದರು.

ಆಸಕ್ತರು:

ಹಿರಿಯ ನಾಯಕಿ ಮಾಜಿ ಸಚಿವೆ ರಾಣಿ ಸತೀಶ್, ಮುಖ್ಯಮಂತ್ರಿ ಆಪ್ತ ಸ್ನೇಹಿತ ರವಿಚಂದ್ರನ್ , ವಿಧಾನ ಪರಿಷತ್ ಮಾಜಿ ಸದಸ್ಯರಾದ ರಮೇಶ ಬಾಬು, ವಿ.ಎಸ್.ಉಗ್ರಪ್ಪ ನಟ ಸಾದು ಕೋಕಿಲ, ಕೆಪಿಸಿಸಿ ವಕ್ತಾರ ಡಿ.ಬಸವರಾಜ್, ಮಂಜುಳಾ ನಾಯ್ಡು, ಕೋಲಾರದ ಕೃಷ್ಣ, ತುಮಕೂರಿನ ಆರ್.ಮಂಜುನಾಥ್ ನಟರಾಜ್ ಗೌಡ ಇತರರು