ಶ್ರೀ ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕ್., ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಮಹಾಮಂಡಳ ಮತ್ತು ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳಿ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ 3 ದಿನಗಳ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿದರು
ಪಾರದರ್ಶಕ, ಉತ್ತಮ ಆಡಳಿತ, ನಿಸ್ವಾರ್ಥ ಸೇವಾ ಮನೋಭಾವವಿರುವ ಸಿಬ್ಬಂದಿ ಹಾಗೂ ಸಹೃದಯ ಸದಸ್ಯರು ಮತ್ತು ಗ್ರಾಹಕರುಗಳನ್ನು ಹೊಂದಿದ್ದರೆ ಮಾತ್ರ ಸಹಕಾರ ಸಂಸ್ಥೆಯ ಬೆಳವಣಿಗೆ ಸಾಧ್ಯ. ಈ ನಿಟ್ಟಿನಲ್ಲಿ ಸಿಬ್ಬಂದಿಗಳು ಬ್ಯಾಂಕಿನ ಉತ್ತಮ ಬೆಳವಣಿಗೆಗೆ ಪೂರಕವಾಗುವಂತಹ ವಿಷಯಗಳನ್ನು ಪರಿಣಿತಿ ಹೊಂದಿರುವವರಿಂದ ತಿಳಿದುಕೊಂಡು ತಮ್ಮ ದಿನನಿತ್ಯದ ಬ್ಯಾಂಕಿಂಗ್ ಕ್ಷೇತ್ರದ ಕೆಲಸಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶ್ರೀ ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಆರ್ ವೆಂಕಟೇಶ್‌ರವರು ಹೇಳಿದರು.
ಶ್ರೀ ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕ್., ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಮಹಾಮಂಡಳ ಮತ್ತು ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳಿ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ 3 ದಿನಗಳ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಕಾಲಘಟ್ಟದಲ್ಲಿ ಕಮರ್ಷಿಯಲ್ ಬ್ಯಾಂಕುಗಳು ಮನೆ ಬಾಗಿಲಿಗೆ ಹೋಗಿ ತನ್ನ ಸೇವೆಗಳನ್ನು ನೀಡುತ್ತಿವೆ. ಅದೇ ರೀತಿ, ನಮ್ಮ ಕೋ-ಆಪರೇಟಿವ್ ಬ್ಯಾಂಕುಗಳೂ ಸಹ ಗ್ರಾಹಕರ ಮನೆ ಬಾಗಿಲಿಗೆ ಹೋಗಿ ತಮ್ಮ ಸೇವೆಗಳನ್ನು ತಲುಪಿಸುವಲ್ಲಿ ಯಶಸ್ವಿಯಾದರೆ ಬ್ಯಾಂಕು ತಂತಾನೇ ಉನ್ನತಿ ಸಾಧಿಸಲಿದೆ ಎಂದರು.
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಶ್ರೀ ಕೆ.ಎಸ್ ನವೀನ್ ಮಾತನಾಡಿ ಆಡಳಿತ ಮಂಡಳಿಯ ಪಾರದರ್ಶಕ ಆಡಳಿತ ವೈಖರಿಯಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಬ್ಯಾಂಕು ಪ್ರಗತಿ ಪಥದಲ್ಲಿ ಸಾಗುತ್ತಿದೆ. ಈ ಕಾರ್ಯಗಾರದಲ್ಲಿ ಬಿ.ಆರ್ ಆಕ್ಟ್, ಕೋ-ಆಪರೇಟಿವ್ ಸೊಸೈಟಿಗಳ ಆಕ್ಟ್, ರೂಲ್ಸ್ ಅಂಡ್ ರೆಗ್ಯುಲೇಷನ್ಸ್ ಬಗ್ಗೆ ಹಾಗೂ ಸೈಬರ್ ಸೆಕ್ಯುರಿಟಿ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಕಲೆ ಹಾಕಿ ಸದಸ್ಯರು ಮತ್ತು ಗ್ರಾಹಕರಿಗೆ ಉತ್ತಮ ಸೇವೆ ನೀಡಬೇಕು ಎಂದು ಹೇಳಿದರು.
ರಾಷ್ಟ್ರೀಕೃತ ಬ್ಯಾಂಕು, ವಾಣಿಜ್ಯ ಬ್ಯಾಂಕು ಮತ್ತು ಖಾಸಗಿ ಬ್ಯಾಂಕುಗಳ ಮಧ್ಯೆ ಪೈಪೋಟಿ ಇದ್ದು, ಈಗಿನ ಯುವಪೀಳಿಗೆಗೆ ನೀವುಗಳು ಬ್ಯಾಂಕಿನ ಸೇವೆಗಳನ್ನು ತ್ವರಿತವಾಗಿ ಗ್ರಾಹಕರಿಗೆ ತಲುಪಿಸಿದ್ದಲ್ಲಿ ಮಾತ್ರ ಸಹಕಾರ ಬ್ಯಾಂಕುಗಳು ಬೆಳೆಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನೀವೆಲ್ಲರೂ ಕಾರ್ಯನಿರ್ವಹಿಸುತ್ತೀರೆಂದು ಆಶಿಸುತ್ತೇನೆ ಎಂದ ಅವರು ಯಾವುದೇ ಪದವಿ ಹೊಂದಿದ್ದರೂ ಸಹ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವಾಗ ಪರಿಣಿತರಿಂದ ಅನುಭವ ಪಡೆದುಕೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು.
ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳ ನಿ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುಂಡಲೀಕ ಎನ್. ಕೇರೂರೆರವರು ಮಾತನಾಡಿ ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಪತ್ರಿಕೆಗಳಲ್ಲಿ ಹೆಕ್ಕಿ ತೆಗೆದು ಮನನ ಮಾಡಿಕೊಂಡು ಸೇವಾ ಮನೋಭಾವದಿಂದ ಸೇವೆ ಸಲ್ಲಿಸುವಂತಾಗಲಿ ಎಂದು ಆಶಿಸಿದರು.
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಕೆ.ಎಸ್ ನವೀನ್,
ಪುಂಡಲೀಕ ಎನ್. ಕೇರೂರೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳ ನಿ., ಹಾಗೂ ಆರ್‌ಐಸಿಎಂನ ನಿವೃತ್ತ ನಿರ್ದೇಶಕ ಡಾ. ಕೆ ರವಿಚಂದ್ರನ್, ಡಾ.ಗುರುಸ್ವಾಮಿ, ಡಾ. ಜಗನ್ನಾಥ್ ಜಿಗಾಟೆ, ಎಂ.ವೀರೇಂದ್ರಕುಮಾರ್ ಮತ್ತಿತರರಿದ್ದರು.