constructionofinterchanges
- ಪರಿಷ್ಕೃತ ವಿನ್ಯಾಸ ಅಂತಿಮಗೊಳಿಸಿದ ಬಿಡಿಎ
- ಪ್ರಮುಖ ಸ್ಥಳಗಳಲ್ಲಿ ಮಾತ್ರ ಪ್ರವೇಶ/ನಿರ್ಗಮನ ಸೌಲಭ್ಯ
ಬೆಂಗಳೂರು: ಉದ್ದೇಶಿತ ಬೆಂಗಳೂರು ಬಿಜಿನೆಸ್ ಕಾರಿಡಾರ್ (ಬಿಬಿಸಿ) ರಸ್ತೆ ಯೋಜನೆಯಲ್ಲಿ ಸಿಗ್ನಲ್ ರಹಿತ ಸಂಚಾರ ಹಿನ್ನೆಲೆಯಲ್ಲಿ ಪ್ರಮುಖ ಸ್ಥಳಗಳಲ್ಲಿ ವಾಹನಗಳ ಪ್ರವೇಶ ಹಾಗೂ ನಿರ್ಗಮನಕ್ಕಾಗಿ 11 ಸ್ಥಳಗಳಲ್ಲಿ ಇಂಟರ್‌ಚೇಂಜ್ ಸೌಲಭ್ಯವನ್ನು ಒದಗಿಸುವ ಪರಿಷ್ಕೃತ ವಿನ್ಯಾಸವನ್ನು ಬಿಡಿಎ ರೂಪಿಸಿದೆ.
ತುಮಕೂರು ರಸ್ತೆಯ ನೈಸ್ ರಸ್ತೆಯಿಂದ ಬಳ್ಳಾರಿ ರಸ್ತೆ, ಹೊಸಕೋಟೆ ರಸ್ತೆ ಮಾರ್ಗವಾಗಿ ಹೊಸೂರು ರಸ್ತೆವರೆಗೆ 73 ಕಿ.ಮೀ. ಉದ್ದದ ಬಿಬಿಸಿ ರಸ್ತೆ ನಿರ್ಮಾಣವಾಗಲಿದೆ. ಪೆರಿಫೆರಲ್ ರಿಂಗ್ ರಸ್ತೆ (ಪಿಆರ್‌ಆರ್) ಯನ್ನು ಬಿಬಿಸಿ ಹೆಸರು ಬದಲಿಸಿದ ನಂತರ ವಿನ್ಯಾಸದಲ್ಲೂ ಕೆಲವೊಂದು ಬದಲಾವಣೆ ಮಾಡಲಾಗಿದೆ. ಮಾರ್ಗದುದ್ದಕ್ಕೂ ಅಲ್ಲಲ್ಲಿ ಹಾದುಹೋಗುವ ಪ್ರಮುಖ ರಸ್ತೆ, ಹೆದ್ದಾರಿಗಳಲ್ಲಿ ವಾಹನ ಸಂಚಾರ ಸುಗಮವಾಗಿ ಸಾಗಲು ಈ ಇಂಟರ್‌ಚೇಂಜ್‌ಗಳನ್ನು ನಿರ್ಮಿಸಲಾಗುತ್ತಿದೆ. ಈ ಸ್ಥಳಗಳನ್ನು ಹೊರತುಪಡಿಸಿ ಇತರ ರಸ್ತೆಗಳ ಬಳಿ ಮಾರ್ಗದ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚರಿಸಲು ಅವಕಾಶ ಇರುವುದಿಲ್ಲ.
ಬಹುತೇಕ ಇಂಟರ್‌ಚೇಂಜ್‌ಗಲು ಕ್ಲೋವರ್ ಲೀಫ್ ಮಾದರಿಯಲ್ಲಿ ನಿರ್ಮಿಸಲಾಗುತ್ತದೆ. ಇದರಿಂದ ಕೂಡು ರಸ್ತೆಗಳ ಬಳಿ ಎಲ್ಲ ದಿಕ್ಕುಗಳಿಂದ ವಾಹನಗಳು ಏಕ ಕಾಲದಲ್ಲಿ ತಡೆರಹಿತವಾಗಿ ಸಂಚರಿಸಬಹುದಾಗಿದೆ. ಇಂಟರ್‌ಚೇಂಜ್‌ಗಳನ್ನು ನಿರ್ಮಿಸಲು ಸ್ಥಳ ಹಾಗೂ ವಿನ್ಯಾಸ ಕೂಡ ಅಂತಿಮಗೊಳಿಸಿರುವುದರಿಂದ ಬಿಬಿಸಿ ಯೋಜನೆಯ ಕಾಮಗಾರಿ ಕೈಗೊಳ್ಳುವಾಗ ಯಾವುದೇ ಅಡ್ಡಿಯಿಲ್ಲದೆ ಕೆಲಸ ನಿರ್ವಹಿಸಬಹುದಾಗಿದೆ.
ಹೆದ್ದಾರಿ ಹಾಗೂ ನೈಸ್ ರಸ್ತೆ ಜಂಕ್ಷನ್ ಹೊರತುಪಡಿಸಿ ಇನ್ನುಳಿದ ಸ್ಥಳಗಳಲ್ಲಿ ಇಂಟರ್‌ಚೇಂಜ್ ನಿರ್ಮಿಸುವ ಉದ್ದೇಶ ಕಾಯ್ದಿರಿಸಲಾಗಿತ್ತು. ಹಾಗಾಗಿ ಹೊಸದಾಗಿ ಆಯ್ಕೆಯಾಗಿರುವ ಸ್ಥಳಗಳಲ್ಲಿ ಇಂಟರ್‌ಚೇಂಜ್ ಕಾಮಗಾರಿಗೆ ಅಡ್ಡಿಯಾಗದ ರೀತಿ ಈಗಾಗಲೇ ಅಲ್ಲಿರುವ ಸ್ವತ್ತುಗಳಿಗೆ ಹಾನಿಯಾಗದಂತೆ ವಿನ್ಯಾಸ ರೂಪಿಸಲಾಗಿದೆ. ಇದರಿಂದ 2-3 ಸ್ಥಳಗಳಲ್ಲಿ ಇಂಟರ್‌ಚೇಂಜ್ ಮಾರ್ಗವು ಹೆಚ್ಚು ವಿಸ್ತಾರವಾಗಿರಲಿವೆ.
ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ:
ಪ್ರಸ್ತುತ ಬಿಬಿಸಿ ಯೋಜನೆಗೆ ಭೂಸ್ವಾಧಿನ ಪ್ರಕ್ರಿಯೆ ಆರಂಭಗೊಂಡಿದ್ದು, ಜಮೀನು ಬಿಟ್ಟುಕೊಡುವ ಭೂಮಾಲೀಕರಿಗೆ 5 ಬಗೆಯ ಪರಿಹಾರಗಳಲ್ಲಿ ಸೂಕ್ತವಾದವುಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಕೆಲ ಭೂಮಾಲೀಕರಿಗೆ ಪರಿಹಾರ ಮಾದರಿ ಬಗ್ಗೆ ಇನ್ನೂ ಗೊಂದಲ ಮುಂದುವರಿದಿದೆ. ಹಾಗಾಗಿ ಅಂತಹವರಿಗಾಗಿಯೇ ಬಿಬಿಸಿಯ ಸಾಮಾಜಿಕ ಜಾಲತಾಣಗಳಾದ ಎಕ್ಸ್, ಇನ್‌ಸ್ಟ್ರಾಗ್ರಾಂ, ಫೇಸ್‌ಬುಕ್ ಹಾಗೂ ಯೂ ಟ್ಯೂಬ್ ಮೂಲಕ ಪ್ರಶ್ನಾವಳಿ ಅಥವಾ ಸಂಬಂಧಿತ ಪ್ರಶ್ನೆಗಳಿಗೆ ನಿಯಮಿತವಾಗಿ ಉತ್ತರ ನೀಡುವುದಾಗಿ ಬಿಬಿಸಿ ಅಧ್ಯಕ್ಷ ಎಲ್.ಕೆ. ಅತೀಕ್ ತಿಳಿಸಿದ್ದಾರೆ.
ಎಲ್ಲೆಲ್ಲಿ ಇಂಟರ್‌ಚೇಂಜ್ ನಿರ್ಮಾಣ?: