ಮಹಿಳೆಗೆ ಧಮ್ಕಿ ಹಾಕಿದ್ದ ಮೂವರ ಮೇಲೆ ದೂರು ದಾಖಲು 
ಬೆಂಗಳೂರು

ಮಹಿಳೆ ಸ್ನಾನದ ಚಿತ್ರಿಕರಣ, ಪ್ರಕರಣ ದಾಖಲು

ಬೆಂಗಳೂರು: ಮಹಿಳೆಯೊಬ್ಬರ ಸ್ನಾನದ ದೃಶ್ಯ ರಹಸ್ಯವಾಗಿ ಸೆರೆ ಹಿಡಿಯಲು ಯತ್ನಿಸಿದ ಕೃತ್ಯ ಕೊರಮಂಗಲದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿರುವ 29 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.

ಕೋರಮಂಗಲದ 7ನೇ ಬ್ಲಾಕ್‌ನ 1ನೇ ಮುಖ್ಯ ರಸ್ತೆ, 3ನೇ ಕ್ರಾಸ್‌ನಲ್ಲಿ ಮಹಿಳೆ ವಾಸವಾಗಿದ್ದು, ನ.20ರಂದು ಜಿಮ್ ಮುಗಿಸಿ ರಾತ್ರಿ 9.40ರ ವೇಳೆಗೆ ಸ್ನಾನಕ್ಕೆ ಹೋಗಿದ್ದ ಸಂದರ್ಭದಲ್ಲಿ ಕೃತ್ಯ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸ್ನಾನದ ಬಕೆಟ್‌ನಲ್ಲಿ ಚಿಕ್ಕ ನಟ್ ಬಿದ್ದಿತ್ತು. ಅದು ಎಲ್ಲಿಂದ ಬಿದ್ದಿರಬಹುದೆಂದು ಗಮನಿಸುತ್ತಿದ್ದ ವೇಳೆ ಎಕ್ಸಾಸ್ಟ್ ್ಯಾನ್‌ನ ನಡುವೆ ಯಾರೋ ೆನ್ ಇಟ್ಟಿದ್ದನ್ನು ನೋಡಿದ್ದೆ. ಜೋರಾಗಿ ಕೂಗಿದಾಗ ೆನ್ ಹಿಂದಕ್ಕೆ ಸರಿದಿದೆ. ಕೂಡಲೇ ಬಟ್ಟೆ ಧರಿಸಿ ಹೊರಗೆ ಹೋಗಿ ನೋಡಿದಾಗ ಯಾರೂ ಇರಲಿಲ್ಲ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.

ಮಹಿಳೆ ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಮನೆಯ ಅಕ್ಕ-ಪಕ್ಕದ ಪಿಜಿಗಳಲ್ಲಿರುವ ಯುವಕರ ಮೊಬೈಲ್‌ಗಳನ್ನು ಪರಿಶೀಲಿಸಲಾಗಿದೆ. ಜತೆಗೆ ಅಲ್ಲಿದ್ದ ಸಿಸಿ ಕ್ಯಾಮರಾಗಳನ್ನು ಪೊಲೀಸರು ಗಮನಿಸಿದ್ದಾರೆ. ಆದರೂ ಆರೋಪಿಗಳ ಸುಳಿವು ಪೊಲೀಸರಿಗೆ ಲಭಿಸಿಲ್ಲ.

ಮೊಬೈಲ್ ಇಟ್ಟಿದ್ದರು ಎನ್ನಲಾದ ಕಿಟಕಿಯ ಬಳಿ ನಿಲ್ಲಲೂ ಜಾಗವಿಲ್ಲ. ಆ ಸ್ಥಳದಲ್ಲಿ ವಿಡಿಯೋ ಮಾಡಿಕೊಳ್ಳಲು ಆಗುವುದಿಲ್ಲ. ಅಸ್ಟೊಂದು ಕಿರಿದಾದ ಜಾಗ ಅಲ್ಲಿದೆ. ಆದರೂ ಮಹಿಳೆ ನೀಡಿದ ದೂರಿನ ಮೇರೆಗೆ ತನಿಖೆ ಕೈಗೊಂಡಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.