ಇ ಖಾತಾ 
ಬೆಂಗಳೂರು

ಪ್ರತಿ ಇ-ಖಾತಾ ಸೇವೆಗೆ 45 ರೂ.ಗಳಿಸಿ | e khata

ಪವನ್ ಆಚಾರ್ಯ ನೀರ್ಚಾಲು
ಬೆಂಗಳೂರು: ಇ-ಖಾತಾ ಸೇವೆಗಳನ್ನು ಶ್ರೀ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಗ್ರೇಟರ್​ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹೊಸ ಯೋಜನೆ ರೂಪಿಸಿದ್ದು, ಯುವ ಉದ್ಯಮಿ ಅಥವಾ ಸ್ಥಳಿಯ ಉದ್ಯಮಿಯಾಗಿ ಜಿಬಿಎನಲ್ಲಿ ಆನ್​ಲೈನ್​ ನೋಂದಣಿ ಮಾಡಿ, ನಾಗರಿಕರಿಗೆ ಇ-&ಖಾತಾ ಸೇವೆಗಳನ್ನು ನೀಡಬಹುದು.  ಪ್ರತಿ ಇ&-ಖಾತಾಗೆ 45 ರೂ.ಗಳಿಸುವ ಸುವರ್ಣಾವಕಾಶ ನೀಡಿದೆ.
ಈಗಾಗಲೇ ನಗರದಲ್ಲಿ ಶೇ.99.22 ಇ-&ಖಾತಾ ವಿಲೇವಾರಿ ಮಾಡಲಾಗಿದೆ. ಸಾಮಾನ್ಯವಾಗಿ ನಾಗರಿಕರು ಅರ್ಜಿ ಸಲ್ಲಿಸಿದ ಬಳಿಕ ಸರಾಸರಿ 2 ದಿನಗಳೊಳಗೆ ವಿಲೇವಾರಿ ಮಾಡಲಾಗುತ್ತಿದೆ.ಆದ್ದರಿಂದ ದಯವಿಟ್ಟು ಯಾವುದೇ ನಗರ ಪಾಲಿಕೆ ಅಥವಾ ಜಿಬಿಎ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ ಎಂದು ವಿಶೇಷ ಆಯುಕ್ತ (ಕಂದಾಯ) ಮುನೀಶ್​ ಮೌದ್ಗಿಲ್​ ತಿಳಿಸಿದ್ದಾರೆ.
ಇ-&ಖಾತಾ ಬದಲಾವಣೆ ವೇಳೆ ಯಾವುದೇ ಮಧ್ಯವರ್ತಿಗಳಿಗೆ ಲಂಚ ನೀಡುವ ಅಗತ್ಯವಿಲ್ಲ. ಸೇವೆ ನೀಡಲು ಆಸಕ್ತಿ ಇರುವವರು ಅಧಿಕೃತವಾಗಿಯೇ ಮುಂದೆ ಬರಬಹುದು. ಅರ್ಜಿಯನ್ನು ಸಲ್ಲಿಸಿದ ನಂತರ 3&4 ದಿನಗಳ ಕಾಲ ಕಾಯಿರಿ. ಮ್ಯೂಟೇಶನ್​ ಅಥವಾ ತಿದ್ದುಪಡಿ ಅಗತ್ಯವಿದ್ದರೆ, ಅದಕ್ಕೆ ಸುಮಾರು 10&15 ದಿನಗಳು ಬೇಕಾಗುತ್ತದೆ. ಇತರ ಸಂದರ್ಭಗಳಲ್ಲಿ ನಿಮ್ಮ ಇ-&ಖಾತಾ ಅನುಮೋದನೆ ಶ್ರೀ ಆಗುತ್ತದೆ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸುವ ವಿಧಾನವನ್ನು ಕಲಿಯಿರಿ ಎಂದು ತಿಳಿಸಿದರು. 
ಇ-ಖಾತಾ ಸಹಾಯವಾಣಿ : 94806 83695