CM DK Shivakumar  
ಬೆಂಗಳೂರು

ಕೇಂದ್ರದಿಂದ ಹಣ ತನ್ನಿ,ಎಚ್ಡಿಕೆಗೆ ಡಿಕೆಶಿ ಸವಾಲ್​

ಆಶಾ ಕಾರ್ಯಕರ್ತೆಯರ ಹೋರಾಟದ ವಿಷಯದಲ್ಲಿ ಬಿಜೆಪಿ- ಜೆಡಿಎಸ್ ನಾಯಕರು ರಾಜಕೀಯ ಲಾಭ ಹುಡುಕುತ್ತಿದ್ದಾರೆ ಬಿಟ್ಟರೆ ಅವರಾರಿಗೂ ನಿಜವಾದ ಕಾಳಜಿ ಎಲ್ಲ ಎಂದು ಸಿಎಂ ಡಿ.ಕೆ.ಶಿವಕುಮಾರ್​ ವಾಗ್ದಾಳಿ ನಡೆಸಿದರು.

ಬೆಂಗಳೂರು: ಆಶಾ ಕಾರ್ಯಕರ್ತೆಯರ ಮೇಲೆ ನಿಜಕ್ಕೂ ಕನಿಕರ ಇದ್ದರೆ ಕೇಂದ್ರ ಸರ್ಕಾರದಿಂದ ಹಣ ಕೊಡಿಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದ್ದಾರೆ.

ಆಶಾ ಕಾರ್ಯಕರ್ತೆಯರ ಹೋರಾಟದ ವಿಷಯದಲ್ಲಿ ಬಿಜೆಪಿ- ಜೆಡಿಎಸ್ ನಾಯಕರು ರಾಜಕೀಯ ಲಾಭ ಹುಡುಕುತ್ತಿದ್ದಾರೆ ಬಿಟ್ಟರೆ ಅವರಾರಿಗೂ ನಿಜವಾದ ಕಾಳಜಿ ಎಲ್ಲ ಎಂದು ಸಿಎಂ ವಾಗ್ದಾಳಿ ನಡೆಸಿದರು.

ದೇಶದಲ್ಲಿ ‘ಆಶಾ’ ಯೋಜನೆ ಆರಂಭಿಸಿದ್ದು ಈ ಹಿಂದೆ ಪ್ರಧಾನಿ ಆಗಿದ್ದ ಮನಮೋಹನ್ ಸಿಂಗ್ ಅವರು. ಯುಪಿಎ ಸರ್ಕಾರದ ಅವಧಿಯ ಕಾರ್ಯಕ್ರಮಕ್ಕೆ ಈಗಿನ ಮೋದಿ ಸರ್ಕಾರ ಹಣ ಕೊಡುತ್ತಿಲ್ಲ ಎಂದು ದೂರಿದರು.

ಆಶಾ ಕಾರ್ಯಕರ್ತೆಯರನೇಕರು ಪ್ರತಿಭಟನೆ ಹಿಂಪಡೆಯಲು ಸಿದ್ಧರಿದ್ದಾರೆ. ಅಣ್ಣಾ ನಿಮ್ಮ ಮೇಲೆ ನಮಗೆ ಭರವಸೆ ಇದೆ. ನಾವು ವಾಪಾಸ್ ಹೊಗಿ ಕೆಲಸ ಮಾಡಲು ಸಿದ್ಧ ಎಂದು ಹಲವರು ನನಗೆ ಸಂದೇಶ ಕೂಡ ಕಳುಹಿಸಿದ್ದಾರೆ.

ಯಾರು ಸಂದೇಶ ಕಳುಹಿಸಿದ್ದು ಎಂದು ಬಹಿರಂಗಪಡಿಸಿ ಅವರ ಸಂಘಟನೆ ಒಡೆಯಲು ನಾನು ಇಷ್ಟ ಪಡುವುದಿಲ್ಲ. ನಾವು ಅವರ ಪರವಾಗಿದ್ದೇವೆ. ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದರು.

ಖಾದರ್ ವಿರುದ್ಧ ಸೋಮಶೇಖರ್ ಕಿಡಿ

ಆಶಾ ಕಾರ್ಯಕರ್ತೆಯರು ಇಲ್ಲದೆ ಹೋದರೂ ಆರೋಗ್ಯ ಇಲಾಖೆ ನಡೆಯುತ್ತದೆ ಎಂದ ಆರೋಗ್ಯ ಸಚಿವ ಯು.ಟಿ ,ಖಾದರ್ ವಿರುದ್ಧ ಕಾಂಗ್ರೆಸ್ ಜತೆ ಗುರುತಿಸಿಕೊಂಡಿಒರುವ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಕಿಡಿ ಕಾರಿದ್ದಾರೆ.

ಖಾದರ್ ಅವರಿಗೆ ತಿಳಿವಳಿಕೆ ಬೇಡವಾ ? ಆಶಾ ಕಾರ್ಯಕರ್ತರು ಕಷ್ಟ ಪಡುತ್ತಿದ್ದಾರೆ. ಕೋವಿಡ್‌ನಲ್ಲಿ ಕೂಡ ಕೆಲಸ ಮಾಡಿದ್ದಾರೆ. ನಿಮಗೆ ಆದರೆ ಸಹಾಯ ಮಾಡಿ ಇಲ್ಲದಿದ್ದರೆ ಸುಮ್ಮನಿರಿ. ನೆಗೆಟಿವ್ ಮಾತನಾಡಬೇಡಿ ಎಂದಿದ್ದಾರೆ.

ಸಚಿವರೇನೂ ದೇವಲೋಕದಿಂದ ಇಳಿದು ಬಂದವರಲ್ಲ. ಆಶಾ ಕಾರ್ಯಕರ್ತೆಯರ ಜತೆ ಚರ್ಚಿಸಿ ಸಮಸ್ಯೆ ಬಗೆಹರಿಸಿ. ನಿಮ್ಮ ಕೈಯಲ್ಲಿ ಆಗದೆ ಹೋದರೆ ಮುಖ್ಯಮಂತ್ರಿ ನೋಡಿಕೊಳ್ಳುತ್ತಾರೆ ಬಿಡಿ ಎಂದರು.

ಮುಖ್ಯಾಂಶಗಳು

ಯುಪಿಎ ಸರ್ಕಾರದ ಯೋಜನೆಗೆ ಬಿಜೆಪಿ ನಿರ್ಲಕ್ಷ್ಯ

ಪ್ರತಿಭಟನೆ ಕೊನೆಗೊಳಿಸುವ ಸಂದೇಶ ಬರುತ್ತಿವೆ

ಸಂದೇಶ ಕಳಿಸಿದವರ ಹೆಸರು ಬಹಿರಂಗಪಡಿಸಲ್ಲ

ಸಿಎಂ ಸಭೆಗೆ ಕಾದ ಆಶಾ ಕಾರ್ಯಕರ್ತೆಯರು