ಬೌರಿಂಗ್ ಆಸ್ಪತ್ರೆ ತಡೆಗೋಡೆ 
ಬೆಂಗಳೂರು

ಬೌರಿಂಗ್​ ಆಸ್ಪತ್ರೆ ಕಾಂಪೌಂಡ್​ ಇನ್ನೂ ತೆರವಾಗಿಲ್ಲ

ಪವನ್ ಆಚಾರ್ಯ ನೀರ್ಚಾಲು

ಪ್ರಮುಖ ಮುಖ್ಯಾಂಶಗಳು

  • ಮತ್ತೆ ಅನಾಹುತದ ಭೀತಿ ಮೂಡಿಸುತ್ತಿದೆ ಉಳಿದ ಗೋಡೆ
  • ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಸ್ಥಳಿಯರ ಆಕ್ರೋಶ
ಪವನ್​ ಆಚಾರ್ಯ ನೀರ್ಚಾಲು ಬೆಂಗಳೂರು
ಶಿವಾಜಿನಗರದಲ್ಲಿರುವ ಬೌರಿಂಗ್​ ಆಸ್ಪತ್ರೆ ಆವರಣದ ಕಾಂಪೌಂಡ್​ ಗೋಡೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿ ಲೋಕಾಯುಕ್ತ ತನಿಖೆ ಚುರುಕುಗೊಂಡಿದ್ದು, ಕೆಲವೊಂದು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಆದರೆ, ಟನೆ ನಡೆದು ವಾರ ಕಳೆದರೂ ಶಿಥಿಲ ಕಾಂಪೌಂಡ್​ ತೆರವುಗೊಳಿಸಲು ಆಸ್ಪತ್ರೆಯ ಮುಖ್ಯಸ್ಥರು ರ್ನಿಲಕ್ಷ$್ಯವಹಿಸಿರುವುದು ಅಚ್ಚರಿ ಮೂಡಿಸಿದೆ.
ಏ. 29ರಂದು ಸುರಿದ ಆಲಿಕಲ್ಲುಸಹಿತ ಗಾಳಿ& ಮಳೆ ಪರಿಣಾಮ ದುರಂತದಲ್ಲಿ 7 ಮಂದಿ ಮೃತಪಟ್ಟಿದ್ದರು. ಹಲವರು ಗಾಯಗೊಂಡಿದ್ದರು. ಈ ಹಿನ್ನೆಲೆ ಲೋಕಾಯುಕ್ತ ಸಂಸ್ಥೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದು, ಸೋಮವಾರ ವಿಶೇಷ ತನಿಖಾ ತಂಡ ಆಸ್ಪತ್ರೆ ಆವರಣಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿತ್ತು. ಗೋಡೆ ನಿಮಾರ್ಣದ ಗುಣಮಟ್ಟ, ಅಡಿಪಾಯದ ಸ್ಥಿತಿ, ನಿರ್ವಹಣೆಯಲ್ಲಿ ಆಗಿರುವ ರ್ನಿಲಕ್ಷ$್ಯ ಹಾಗೂ ಮಳೆ ನೀರಿನ ಹರಿವಿನ ಪರಿಣಾಮ ಸೇರಿ ಹಲವು ಅಂಶಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ.
ತಾತ್ಕಾಲಿಕ ಕ್ರಮ:
ಬೌರಿಂಗ್​ ಆಸ್ಪತ್ರೆ ಕಾಂಪೌಂಡ್​ ಕುಸಿದ ಭಾಗಕ್ಕೆ ಗೋಣಿ ಚೀಲಗಳನ್ನು ತುಂಬಿಸಿ ಜೋಡಿಸುವ ಮೂಲಕ ತಾತ್ಕಾಲಿಕ ತಡೆಗೋಡೆಯನ್ನು ನಿರ್ಮಿಸಲಾಗದೆ. ಆದರೆ, ಹಳೇ ಗೋಡೆಯ ಅವಶೇಷಗಳು ಇನ್ನೂ ರಸ್ತೆಯ ಮೇಲೆ ಬಿದ್ದು, ಸಮಸ್ಯೆಯಾಗಿದೆ. ಕುಸಿದ ಗೋಡೆಯ ಅವಶೇಷಗಳನ್ನು ತೆರವುಗೊಳಿಸುವ ಕೆಲಸವನ್ನು ಅಧಿಕಾರಿಗಳು ಇನ್ನೂ ಕೈಗೊಂಡಿಲ್ಲ ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾಹನ ಸಂಚಾರಕ್ಕೆ ಅಡ್ಡಿ: ಗೋಡೆ ಜರಿದು ಪಾದಚಾರಿ ಮಾರ್ಗ ಪೂರ್ತಿ ಹಾಗೂ ರಸ್ತೆಯ ಸ್ವಲ್ಪ ಭಾಗವನ್ನು ಆವರಿಸಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಗೋಡೆ ಕುಸಿತ ತಾಣದಿಂದ ಮೀನಾ ಕೋವಿಲ್​ ರಸ್ತೆ ಉದ್ದಕ್ಕೂ 200 ಮೀಟರ್​ ಬ್ಯಾರಿಕೇಡ್​, ರೋಪ್​ ಹಾಕಿದ್ದು, ಈ ಭಾಗದಲ್ಲಿ ಓಡಾಡುವುದು ಕಷ್ಟವಾಗಿದೆ.
ವ್ಯಾಪಾರಿಗಳ ಅಳಲು
ಗೋಡೆ ಕುಸಿತದ ಜಾಗದಲ್ಲಿ ಸುಮಾರು 200 ವ್ಯಾಪಾರಿಗಳಿದ್ದರು. ಟನೆಯ ಬಳಿಕ ಆ ಭಾಗದಲ್ಲಿ ವ್ಯಾಪಾರಕ್ಕೆ ಅವಕಾಶ ಇಲ್ಲ. ಅದರ ವಿರುದ್ಧ ಭಾಗದಲ್ಲಿ ಈಗಾಗಲೇ ಸಾಕಷ್ಟು ವ್ಯಾಪಾರಿಗಳಿದ್ದಾರೆ. ನನ್ನದು ಪುಟ್ಟ ವ್ಯಾಪಾರವಾದ ಕಾರಣ ರಸ್ತೆಯ ಈ ಬದಿಗೆ ಇರುವ ಪಾದಚಾರಿ ಮಾರ್ಗವನ್ನು ಆಶ್ರಯಿಸಿದ್ದೇನೆ. ಆದರೆ, ಹಲವು ವ್ಯಾಪಾರಿಗಳಿಗೆ ಸರಿಯಾದ ಸ್ಥಳ ಸಿಕ್ಕಿಲ್ಲ. ಇದರಿಂದ ವ್ಯಾಪಾರಿಗಳು ಸಂಕಷ್ಟಕ್ಕೆ ಒಳಗಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಅಪಾಯಕಾರಿಯಾಗಿ ನಿಂತಿರುವ ಗೋಡೆ
ಬೌರಿಂಗ್​ ಆಸ್ಪತ್ರೆಯಲ್ಲಿ ಕಾಂಪೌಂಡ್​ನ ಬಾಕಿ ಭಾಗವೂ ಅಪಾಯಕಾರಿಯಾಗಿ ಕಂಡುಬರುತ್ತಿದ್ದು, ಯಾವ ಕ್ಷಣದಲ್ಲಾದರೂ ಬೀಳಬಲ್ಲದು ಎಂಬಂತೆ ಭಾಸವಾಗುತ್ತಿದೆ. ಸುಮಾರು 10 ಅಡಿ ಎತ್ತರವಿರುವ ಗೋಡೆಯ ಮುಂಭಾಗದಲ್ಲಿರುವ ಪಾದಚಾರಿ ಮಾರ್ಗದಲ್ಲಿ ವ್ಯಾಪಾರ ಮಾಡುತ್ತಿದ್ದ ಸುಮಾರು 200 ವ್ಯಾಪಾರಿಗಳನ್ನು ಅಲ್ಲಿಂದ ಒಕ್ಕಲೆಬ್ಬಿಸಲಾಗಿದೆ. ಕೆಲವರು ರಸ್ತೆಯ ಇನ್ನೊಂದು ಬದಿಯಲ್ಲಿ ವ್ಯಾಪಾರಕ್ಕೆ ಜಾಗ ಕಂಡುಕೊಂಡರೆ, ಮತ್ತೆ ಕೆಲವರು ಬೇರೆಬೇರೆ ಕಡೆ ತೆರಳಿದ್ದಾರೆ. ಜನರು ಗೋಡೆಯ ಸಮೀಪದಿಂದಲೇ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದಾರೆ. ಒಂದು ವೇಳೆ ಉಳಿದ ಭಾಗವೂ ಕುಸಿದರೆ, ಮತ್ತೆ ಸಾವು& ನೋವುಗಳಾಗಬಹುದೇ ಎಂಬ ಭೀತಿ ಆವರಿಸಿದೆ. ಗೋಡೆಯನ್ನು ಸಂಪೂರ್ಣ ತೆರವುಗೊಳಿಸಿ ಮರುನಿರ್ಮಾಣಕ್ಕೆ ಸಂಬಂಧಪಟ್ಟವರು ಶ್ರೀ ಕ್ರಮ ಕೈಗೊಳ್ಳಬೇಕೆಂದು ಜನ ಆಗ್ರಹಿಸಿದ್ದಾರೆ.