ಬೆಂಗಳೂರು: ಕೆಂಪೇಗೌಡ ಬಸ್ ನಿಲ್ದಾಣದಿಂದ ಕುಣಿಗಲ್ವರೆಗೆ ಹೊಸದಾಗಿ "ವಜ್ರ ವಿಸ್ತಾರ' ಹವಾನಿಯಂತ್ರಿತ ಬಸ್ಗಳ ಸೇವೆಯನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಆರಂಭಿಸಿದೆ. "ಹೊರವಲಯವು ಈಗ ಹತ್ತಿರ' ಎಂಬ ಆಶಯದೊಂದಿಗೆ ಆರಂಭಿಸಿರುವ ಈ ಸೇವೆಯಿಂದ ಕುಣಿಗಲ್ ಹಾಗೂ ಸುತ್ತಮುತ್ತಲಿನ ಪ್ರಯಾಣಿಕರಿಗೆ ಬೆಂಗಳೂರಿಗೆ ನೇರ ಸಂಪರ್ಕ ಮತ್ತಷ್ಟು ಸುಗಮವಾಗಲಿದೆ.
ನೂತನ ಬಸ್ ಸೇವೆಗಳಿಗೆ ಸಾರಿಗೆ ಸಚಿವ ಬೈರತಿ ಸುರೇಶ್, ಬಮುಲ್ ಅಧ್ಯಕ ಡಿ.ಕೆ. ಸುರೇಶ್ ಹಾಗೂ ಕುಣಿಗಲ್ ಶಾಸಕ ಡಾ.ಎಚ್.ಡಿ. ರಂಗನಾಥ್ ಹಸಿರುನಿಶಾನೆ ತೋರಿಸಿದರು. ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಘುನಂದನ್ ಮೂರ್ತಿ, ನಿರ್ದೇಶಕ ಅಬ್ದುಲ್ ಅಹ್ಮದ್ ಇತರರಿದ್ದರು.
ಹೊಸ ಮಾರ್ಗಕ್ಕೆ ವಿ&ಇಎಕ್ಸ್& ಕೆಜಿಎಲ್ &1 ಎಂದು ಹೆಸರಿಸಲಾಗಿದ್ದು, ಕುಣಿಗಲ್ನಿಂದ ಬೆಳಗ್ಗೆ 7.10ಕ್ಕೆ ಮೊದಲ ಬಸ್ ಹೊರಡಲಿದೆ. ರಾತ್ರಿ 9.30ರವರೆಗೆ ಸೇವೆ ಮುಂದುವರಿಯಲಿದೆ. ಬೆಂಗಳೂರಿನಿಂದ ಕುಣಿಗಲ್ ಕಡೆಗೆ ಬೆಳಗ್ಗೆ 7.40ರಿಂದ ರಾತ್ರಿ 8.55ರವರೆಗೆ ಬಸ್ಗಳು ಸಂಚರಿಸಲಿವೆ. ಒಟ್ಟು ಎಂಟು ಬಸ್ಗಳು ಸೇವೆ ನೀಡಲಿವೆ. ವಿವಿಧ ಹಂತಗಳಿಗೆ ಅನುಗುಣವಾಗಿ 25 ರೂ.ನಿಂದ 120 ರೂ.ವರೆಗೆ ಪ್ರಯಾಣ ದರ ಇರಲಿದೆ. ಬಸ್ಗಳ ಸಂಚಾರ, ಮಾರ್ಗ ಹಾಗೂ ಇತರ ವಿವರಗಳನ್ನು "ನಮ್ಮ ಬಿಎಂಟಿಸಿ 2.0' ಮೊಬೈಲ್ ಅಪ್ಲಿಕೇಷನ್ನಲ್ಲಿ ವೀಸಬಹುದು.