ಬಿಎಂಟಿಸಿ 
ಬೆಂಗಳೂರು

ಹಳದಿ ಹಾದಿಯಲ್ಲಿ ವಿಶೇಷ ಫೀಡರ್​ ಬಸ್​ | feeder bus

ಪವನ್ ಆಚಾರ್ಯ ನೀರ್ಚಾಲು

ಪ್ರಮುಖ ಮುಖ್ಯಾಂಶಗಳು

  • ಪೀಕ್​ ಅವರ್​ಗಳಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಬಿಎಂಆರ್​ಸಿಎಲ್​ ಯೋಜನೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಮ್ಮ ಮೆಟ್ರೋದ ಹಳದಿಮಾರ್ಗದಲ್ಲಿ ರೈಲುಗಳ ಸಂಖ್ಯೆಯನ್ನು ಹೆಚ್ಚಿಸಿದ ಪರಿಣಾಮ, ಆನೇಕಲ್​ ಹಾಗೂ ಬೊಮ್ಮಸಂದ್ರ ಮೆಟ್ರೋ ನಿಲ್ದಾಣದ ನಡುವೆ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದು, ಪೀಕ್​ ಅವರ್​ಗಳಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್​ಸಿಎಲ್​) ತಿಳಿಸಿದೆ.
ರಾಷ್ಟ್ರೀಯ ವಿದ್ಯಾಲಯ ರಸ್ತೆಯಿಂದ ಬೊಮ್ಮಸಂದ್ರವರೆಗೆ ಸಂಚರಿಸುವ ಹಳದಿ ಮಾರ್ಗದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಹಾಗೂ ಅಂತಿಮ ಹಂತದ ಸಂಪರ್ಕವನ್ನು ಸುಧಾರಿಸುವ ಉದ್ದೇಶದಿಂದ, ಬಿಎಂಆರ್​ಸಿಎಲ್​ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪರಸ್ಪರ ಸಂಯೋಜನೆ ಮಾಡಿಕೊಂಡು ವಿಶೇಷ ಫೀಡರ್​ ಬಸ್​ ಸೇವೆಗಳನ್ನು ಪರಿಚಯಿಸಿದೆ.
ಈ ಯೋಜನೆಯ ಭಾಗವಾಗಿ, ದಟ್ಟಣೆಯನ್ನು ಕಡಿಮೆ ಮಾಡಲು ಹಾಗೂ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ, ಬಿಎಂಟಿಸಿ ವತಿಯಿಂದ 4 ವಿಶೇಷ ಮೆಟ್ರೋ ಫೀಡರ್​ ಬಸ್​ ಸೇವೆಗಳನ್ನು ಬೊಮ್ಮಸಂದ್ರ ಮೆಟ್ರೋ ನಿಲ್ದಾಣದಿಂದ ಸಮೀಪದ ವಸತಿ ಹಾಗೂ ವಾಣಿಜ್ಯ ಪ್ರದೇಶಗಳಿಗೆ ಸೋಮವಾರ ಆರಂಭಿಸಲಾಗಿದೆ.