ಕಪ್ಪು ಅರಿಶಿಣ 
ಬೆಂಗಳೂರು

ಕಾನ್ಸರ್ ನಿವಾರಣೆಗೆ ಕಪ್ಪು ಅರಿಶಿಣ ರಾಮಬಾಣ-Black Turmeric

ಪ್ರಮುಖ ಮುಖ್ಯಾಂಶಗಳು

  • ಕ್ಯಾನ್ಸರ್ ನಿವಾರಕ ಸೇರಿ ವಿವಿಧ ಕಾಯಿಲೆ ಗುಣಪಡಿಸುವ ಅಧಿಕ ಔಷಧ ಗುಣದ ಅಂಶವು ಕಪ್ಪು ಅರಿಶಿಣದಲಿವೆ.
  • ಕೃಷಿ ವಿವಿ ಬೆಂಗಳೂರು ಮೊದಲ ಬಾರಿಗೆ ಈ ತಳಿಯನ್ನು ಪರಿಚಯಿಸಿ ಮೇಳದಲ್ಲಿ ಪ್ರದರ್ಶನಕ್ಕಿಟ್ಟಿತ್ತು.
  • ಕಪ್ಪು ಅರಿಶಿಣ 5-6 ಟನ್ ಇಳುವರಿ ಬರಲಿದೆ.
ಬೆಂಗಳೂರು: ಈ ಬಾರಿ ಕೃಷಿ ಮೇಳದಲ್ಲಿ ಮತ್ತೊಂದು ವಿಶೇಷತೆ ಎಂದರೆ ಕಪ್ಪು ಅರಿಶಿಣ. ಕ್ಯಾನ್ಸರ್ ನಿವಾರಕ ಸೇರಿ ವಿವಿಧ ಕಾಯಿಲೆ ಗುಣಪಡಿಸುವ ಅಧಿಕ ಔಷಧ ಗುಣದ ಅಂಶವು ಕಪ್ಪು ಅರಿಶಿಣದಲಿವೆ. ಕೃಷಿ ವಿವಿ ಬೆಂಗಳೂರು ಮೊದಲ ಬಾರಿಗೆ ಈ ತಳಿಯನ್ನು ಪರಿಚಯಿಸಿ ಮೇಳದಲ್ಲಿ ಪ್ರದರ್ಶನಕ್ಕಿಟ್ಟಿತ್ತು.
ನಂಜುನಿರೋಧಕ ಗುಣ ಹೊಂದಿರುವ ಅರಿಶಿಣ ಅಡುಗೆ, ಔಷಧ, ಸೌಂದರ್ಯವರ್ಧಕ್ಕೆ ದಿವ್ಯ ಔಷಧವಾಗಿ ಬಳಕೆಯಾಗುತ್ತದೆ. ಮುಖ್ಯವಾಗಿ ಭಾರತೀಯ ಅಡುಗೆ ಮನೆಗಳಲ್ಲಿ ಎಲ್ಲ ರೀತಿಯ ಆಹಾರ ಪದಾರ್ಥಗಳಿಗೆ ಇದನ್ನು ಬಳಸಲಾಗುತ್ತದೆ. ಖಾದ್ಯಕ್ಕೆ ಉತ್ತಮ ಬಣ್ಣ ನೀಡುವ ಜೊತೆಗೆ ಅಸಂಖ್ಯಾತ ಆರೋಗ್ಯ ಪ್ರಯೋಜನಗಳಿಗೆ ಹೆಸರುವಾಸಿ. ಆದರೆ, ಕಪ್ಪು ಅರಿಶಿಣ ಇತರ ಅರಿಶಿಣಗಿಂತ ಹಲವು ವಿಶೇಷತೆ ಹೊಂದಿದೆ. ಮುಖ್ಯವಾಗಿ ಕ್ಯಾನ್ಸರ್, ಊತ, ಚರ್ಮರೋಗ ಮತ್ತು ಹೊಟ್ಟೆಯಲ್ಲಿ ಉದಾರ ಸೇರಿ ಇತರ ಕಾಯಿಲೆಗಳಿಗೆ ರಾಮಬಾಣವಾಗಿದೆ.
ಇಳುವರಿ ಕಡಿಮೆ:
ಪ್ರತಿ ಎಕರೆಯಲ್ಲಿ ಕೆಂಪು ಸೇರಿ ಇತರ ಬಗೆಯ ಅರಿಶಿಣವನ್ನು ಬೆಳೆದರೆ ಅಂದಾಜು 14-15 ಟನ್‌ವರೆಗೆ ಇಳುವರಿ ಬರಲಿದೆ. ಆದರೆ, ಕಪ್ಪು ಅರಿಶಿಣ ಬರೀ 5-6 ಟನ್ ಇಳುವರಿ ಬರಲಿದೆ. ಇದು 8 ತಿಂಗಳ ಅವಧಿ ಬೆಳೆ. ಚಾಮರಾಜನಗರ, ಮೈಸೂರು ಸೇರಿ ಬಯಲುಸೀಮೆ ಪ್ರದೇಶಗಳಲ್ಲಿ ಇದನ್ನು ಬೆಳೆಯಲಾಗುತ್ತಿದೆ. ಸಾಮಾನ್ಯ ಅರಿಶಿಣಗಿಂತ ಹೆಚ್ಚು ಔಷಧೀಯ ಗುಣ ಕಪ್ಪು ಅರಿಶಿಣದಲ್ಲಿವೆ. ಈ ಬಗ್ಗೆ ಸಾಕಷ್ಟು ಸಂಶೋಧನೆ ನಡೆಯುತ್ತಿದೆ. ಕೃಷಿ ವಿವಿ ಬೆಂಗಳೂರು ಇದರ ಮೇಲೆ ಸಂಶೋಧನೆ ನಡೆಸುತ್ತಿದೆ. ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 300 ರೂ.ಗೆ ಸಿಗಲಿದೆ. ಇದನ್ನು ಹೆಚ್ಚಾಗಿ ಔಷಧ ತಯಾರಿಕೆಗೆ ಬಳಸಲಾಗುತ್ತಿದೆ.
ಕಪ್ಪು ಅರಿಶಿಣ ಬೆಳೆಯುವ ರೈತರಿಗೆ ಹೆಚ್ಚು ಬೆಲೆ ಸಿಗುವಂತಾಗಬೇಕು. ಸಾಮಾನ್ಯ ಅರಿಶಿಣ ಬೆಳೆ ಹೆಚ್ಚು ಇಳುವರಿ ಇದ್ದರೆ ಇದು ಕಡಿಮೆ ಇಳುವರಿ ಬರಲಿದೆ. ಮಾರುಕಟ್ಟೆಯಲ್ಲಿ ಕಡಿಮೆ ಬೆಲೆ ಇದ್ದಾಗ ಈ ಬೆಳೆಯನ್ನು ಬೆಳೆದರೆ ರೈತರಿಗೆ ನಷ್ಟವಾಗಲಿದೆ.ಮುಖ್ಯವಾಗಿ ಕಪ್ಪು ಅರಿಶಿಣದಲ್ಲಿ ಯಥೇಚ್ಛವಾಗಿ ಔಷಧ ಗುಣಗಳಿವೆ. ಇದರ ಮೇಲೆ ಈಗಾಗಲೇ ಸಂಶೋಧನೆ ನಡೆಸಲಾಗುತ್ತಿದೆ.
ಪ್ರೊ.ಕೆ.ಎನ್.ಶ್ರೀನಿವಾಸಪ್ಪ, ತೋಟಗಾರಿಕೆ ವಿಭಾಗದ ಪ್ರಾಧ್ಯಾಪಕ.