- ಜಾಗತಿಕ ಮಟ್ಟದ ಪೇಟೆಂಟೆಡ್ ವಾಟರ್ ಫ್ಯೂರಿಫಯರ್ ಉತ್ಪನ್ನ ಪೇಟೆಗೆ
- ಗೌರಿ-ಗಣೇಶ ಹಬ್ಬದ ವೇಳೆಗೆ ಹಂತ-ಹಂತವಾಗಿ ಮಾರಾಟಕ್ಕೆ ವ್ಯವಸ್ಥೆ
ಭಾರತದ ಮುಂಚೂಣಿ ಎಲೆಕ್ಟ್ರಿಕಲ್ ಗೃಹೋಪಯೋಗಿ ಕಂಪನಿಯಾದ ಕ್ರಾಂಪ್ಟನ್ ಗ್ರೀವ್ಸ್ ಕನ್ಸೂಮರ್ ಎಲೆಕ್ಟ್ರಿಕ್ಸ್ ಲಿಮಿಟೆಡ್ (ಸಿಜಿಸಿಇಎಲ್) ತನ್ನ 85 ವರ್ಷಗಳ ಸೇವೆ ಬಳಿಕ ಹೊಸತಲೆಮಾರಿನ ಗ್ರಾಹಕರನ್ನು ತನ್ನತ್ತ ಸೆಳೆಯಲು 2.0 ಆವಿಷ್ಕಾರ ಆಧಾರಿತ ಉತ್ಪನ್ನಗಳನ್ನು ‘ಕ್ರಾಂಪ್ಟನ್ ರೈಯಾನ್’ ಬ್ರ್ಯಾಂಡ್ ಅಡಿಯಲ್ಲಿ ಬಿಡುಗಡೆಗೊಳಿಸುವ ಘೋಷಣೆ ಮಾಡಿದೆ.
ಇದರ ಮೊದಲ ಭಾಗವಾಗಿ ಜಾಗತಿಕ ಮಟ್ಟದ ಪೇಟೆಂಟೆಡ್ ವಾಟರ್ ಫ್ಯೂರಿಫೈಯರ್ ಆದ ‘ಬಯೋಫೈಯರ್’ ಹೆಸರಿನ ಹೊಸ ಉತ್ಪನ್ನವನ್ನು ಮಂಗಳವಾರ ಅನಾವರಣಗೊಳಿಸಿದೆ. ತಕ್ಷಣದಿಂದಲೇ ಗ್ರಾಹಕರಿಂದ ಬೇಡಿಕೆ ಮುಂಗಡ ಪಡೆಯಲಿರುವ ಕಂಪನಿಯು, ಮುಂಬರುವ ಗೌರಿ-ಗಣೇಶ ಹಬ್ಬದ ವೇಳೆಗೆ ದಕ್ಷಿಣ ಭಾರತದಲ್ಲಿ ಹಾಗೂ ಹಂತ-ಹಂತವಾಗಿ ದೇಶದ ವಿವಿಧೆಡೆ ಮಾರಾಟ ಮಾಡಲು ಕಂಪನಿ ನಿರ್ಧರಿಸಿದೆ ಎಂದು ಸಿಜಿಸಿಇಎಲ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೊಮೀತ್ ಘೋಷ್ ಪ್ರಕಟಿಸಿದರು.
ಸಾಮಾನ್ಯ ಆರ್‌ಒ ಘಟಕದಲ್ಲಿ 10 ಲೀ. ನೀರು ಬಳಸಿಕೊಂಡಲ್ಲಿ 4 ಲೀ. ಮಾತ್ರ ಶುದ್ಧೀಕರಿಸಿದ ಕುಡಿಯುವ ನೀರು ಲಭ್ಯವಾಗುತ್ತದೆ. ಆದರೆ, ಬಯೋಫೈಯರ್ ಉತ್ಪನ್ನವು 7 ಲೀ. ಸ್ವಯಂ ಶುದ್ಧೀಕರಿಸಿದ ಕುಡಿಯುವ ನೀರನ್ನು ಒದಗಿಸಲಿದೆ. ಆರು ಲೀ. ಸಾಮರ್ಥ್ಯದ ಉತ್ಪನ್ನಕ್ಕೆ 42 ಸಾವಿರ ರೂ. ದರ ನಿಗದಿ ಮಾಡಲಿದ್ದು, 5 ವರ್ಷದ ವಾರಂಟಿ ಇರಲಿದೆ. ಭವಿಷ್ಯದಲ್ಲಿ ಕಂಪನಿ ಹೊರತರುವ ಎಲ್ಲ ಉತ್ಪನ್ನಗಳನ್ನು ಕ್ರಾಂಪ್ಟನ್ ರೈಯಾನ್ ಬ್ರ್ಯಾಂಡ್ ಮೂಲಕವೇ ಗ್ರಾಹಕರಿಗೆ ತಲುಪಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.
ಇದೇ ವೇಳೆ ಕೊರಿಯನ್ ಕಂಪನಿ ಸಿಯಾನ್‌ಟೆಕ್‌ನೊಂದಿಗೆ ಸಹಭಾಗಿತ್ವಕ್ಕೆ ಒಡಂಬಡಿಕೆ ಪತ್ರವನ್ನು ವಿನಿಮಯ ಮಾಡಿಕೊಳ್ಳಲಾಯಿತು.
ಸಮಾರಂಭದಲ್ಲಿ ಸಿಜಿಸಿಇಎಲ್‌ನ ಮುಖ್ಯ ಮಾರುಕಟ್ಟೆ ಅಧಿಕಾರಿ ತನ್ಮಯ್ ಪಿ, ಚೀಫ್ ಬಿಜಿನೆಸ್ ಆಫೀಸರ್ (ಬಟರ್‌ಪ್ಲೈ ಉತ್ಪನ್ನ ವಿಭಾಗ) ಶ್ವೇತಾ ಸಾಗರ್ ಜಿ, ಕೊರಿಯನ್ ಕಂಪನಿ ಸಿಯಾನ್‌ಟೆಕ್‌ನ ಎಂಡಿ ಡಾ. ಕ್ಯೂಂಗ್ ಎಸ್. ಕಾಂಗ್ ಉಪಸ್ಥಿತರಿದ್ದರು.
ಕ್ರಾಂಪ್ಟನ್ 2.0 ಘೋಷಣೆ ಏನೇನು? . . .
* ಗ್ರಾಹಕ ಕೇಂದ್ರಿತ ಆವಿಷ್ಕಾರದ ಉತ್ಪನ್ನ ಬಿಂಬಿಸುವ ಹೊಸ ಲೋಗೋ
* ‘ಅಮೇಜಿಂಗ್, ಎವರಿ ಡೇ’ ಹೆಸರಿನ ಟ್ಯಾಗ್‌ಲೈನ್ ಅನಾವರಣ
* ಮುಂಬರುವ ಎಲ್ಲ ಉತ್ಪನ್ನಗಳಲ್ಲಿ ಮೋನೋಗ್ರಾಮ್ ಬಳಕೆ
* ಭವಿಷ್ಯದಲ್ಲಿ ಸೂಪರ್ ಪ್ರೀಮಿಯಂ ಬ್ರ್ಯಾಂಡ್ ಅಡಿಯಲ್ಲಿ ಹೊಸ ಉತ್ಪನ್ನ
* ಮಹಿಳಾ ಪ್ಲಂಬರ್ಸ್‌ಗೆ ಉತ್ತೇಜನ ನೀಡಲು ತರಬೇತಿ ಘಟಕ
* ಕರ್ನಾಟಕ ಸಹಿತ ಪ್ರಮುಖ ರಾಜ್ಯಗಳಲ್ಲಿ ಮನೆ/ಕೃಷಿ ಬಳಕೆಗೆ ಸೌರ ಫಲಕ
ಪ್ರಸ್ತುತ ಕ್ರಾಂಪ್ಟನ್ 10 ಕ್ಷೇತ್ರಗಳಲ್ಲಿ ಹಲವು ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುತ್ತಿದೆ. ಕಂಪನಿಯ ಒಟ್ಟು ವಹಿವಾಟಿನಲ್ಲಿ ದಕ್ಷಿಣ ಭಾರತದಲ್ಲಿ ಶೇ.40 ವಹಿವಾಟು ಇದೆ. ಒಟ್ಟಾರೆ ವಹಿವಾಟಿನಲ್ಲಿ ವಾರ್ಷಿಕ ಶೇ.6 ಪ್ರಗತಿ ಇದ್ದು, ಮುಂದಿನ 3 ವರ್ಷದಲ್ಲಿ ಸೋಲಾರ್ ಪ್ಯಾನಲ್ ಕ್ಷೇತ್ರ ವಿಸ್ತರಣೆಗೆ ಒತ್ತು ನೀಡಲಿದ್ದೇವೆ. ಕೊಲ್ಲಿ ಯುದ್ಧದಿಂದ ನಮ್ಮ ವಹಿವಾಟಿಗೆ ಹೊಡೆತ ಬೀಳದಿದ್ದರೂ, ಕಂಪನಿ ಹಿತದೃಷ್ಟಿಯಿಂದ ಶೇ.3-4 ವೆಚ್ಚ ಮಾಡುವ ಕಡಿತ ಮಾಡುವ ಆಲೋಚನೆ ಇದೆ.
- ಕಾಳೇಶ್ವರನ್ ಅರುಣಾಚಲಂ, ಸಿಜಿಸಿಇಎಲ್‌ನ ಮುಖ್ಯ ಹಣಕಾಸು ಅಧಿಕಾರಿ