ಪೋಲೆಂಡ್ ಪ್ರಧಾನಮಂತ್ರಿ ಡೋನಾಲ್ಡ್ ಟಸ್ಕ್ ಅವರನ್ನು ಗೌರವಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ 
ಬೆಂಗಳೂರು

ಪೋಲೆಂಡ್ ಪ್ರಧಾನಿ ಜತೆಗೆ ಸಿಎಂ ದ್ವಿಪಕ್ಷೀಯ ಮಾತುಕತೆ

ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ವಿದೇಶಿ ಪ್ರಧಾನಿಗೆ ಆಹ್ವಾನ

ಬೆಂಗಳೂರು: ಜಾಗತಿಕ ಹೂಡಿಕೆದಾರರ ಸಮಾವೇಶ-2027ರಲ್ಲಿ ಭಾಗವಹಿಸುವಂತೆ ಪೋಲೆಂಡ್ ಪ್ರಧಾನಿಮಂತ್ರಿ ಡೋನಾಲ್ಡ್ ಟಸ್ಕ್ ಅವರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಹ್ವಾನ ನೀಡಿದರು.

ಶುಕ್ರವಾರ ಖಾಸಗಿ ಹೋಟೆಲ್‌ನಲ್ಲಿ ನಡೆದ ಭಾರತ-ಪೋಲೆಂಡ್ ವಾಣಿಜ್ಯೋದ್ಯಮಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್, ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪೋಲೆಂಡ್ ಉದ್ಯಮಿಗಳು ಭಾಗವಹಿಸುವಂತೆ ಮನವಿ ಮಾಡಿದರು.

ಬೆಂಗಳೂರಿನ ತಂತ್ರಜ್ಞಾನ ಪರಿಸರ ವ್ಯವಸ್ಥೆ ಮತ್ತು ಸುಧಾರಿತ ಉತ್ಪಾದನೆ, ಕೃತಕ ಬುದ್ಧಿಮತ್ತೆ (ಎಐ) ಹಾಗೂ ಹಸಿರು ಇಂಧನದಲ್ಲಿ ಪೋಲೆಂಡಿನ ಪರಿಣತಿಯನ್ನು ಬಳಸಿಕೊಂಡು ಹೂಡಿಕೆ, ತಂತ್ರಜ್ಞಾನ, ನಾವೀನ್ಯತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ದ್ವಿಪಕ್ಷೀಯ ಸಹಕಾರವನ್ನು ಆಳವಾಗಿಸಲು ರಾಜ್ಯವು ಉತ್ಸುಕವಾಗಿದೆ ಎಂದರು.

ಕೋಲಾರ ಜಿಲ್ಲೆಯ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ 5 ಎಕರೆ ಪ್ರದೇಶದಲ್ಲಿ 80 ಕೋಟಿ ರೂ. ಮೊತ್ತದ ಟಿಜಡ್‌ಎಂಒ ಗ್ರೂಪ್ ಹೂಡಿಕೆ ಮಾಡುತ್ತಿರುವುದು ಸ್ವಾಗತರ್ಹವಾಗಿದೆ. ವಿಶೇಷವಾಗಿ ವೈದ್ಯಕೀಯ ಉತ್ಪನ್ನಗಳು, ಆರೋಗ್ಯ ರಕ್ಷಣೆ ಮತ್ತು ಸುಧಾರಿತ ಉತ್ಪಾದನಾ ವಲಯಗಳಲ್ಲಿ ಸಾಕಷ್ಟು ಅವಕಾಶಗಳಿವೆ. ಹೊಸ ತಂತ್ರಜ್ಞಾನಗಳನ್ನು ತರುವ, ಸ್ಥಳೀಯ ಉದ್ಯಮಗಳನ್ನು ಬಲಪಡಿಸುವ, ಗುಣಮಟ್ಟದ ಉದ್ಯೋಗಗಳನ್ನು ಸೃಷ್ಟಿಸುವ ಮತ್ತು ರಫ್ತಿಗೆ ಬೆಂಬಲ ನೀಡುವ ಹೂಡಿಕೆಗಳನ್ನು ಆಕರ್ಷಿಸಲು ರಾಜ್ಯ ಸರ್ಕಾರವು ಉತ್ಸುಕವಾಗಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ಇದೇ ವೇಳೆ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್, ಬಂಡವಾಳ ಹೂಡಿಕೆಗೆ ಕರ್ನಾಟಕ ಪ್ರಮುಖ ಹೆಬ್ಬಾಗಿಲಾಗಿದೆ. ಬಾಹ್ಯಾಕಾಶ, ರಕ್ಷಣೆ ಮತ್ತು ಸುಧಾರಿತ ಉತ್ಪಾದನಾ ವಲಯಗಳಲ್ಲಿ ಹೂಡಿಕೆಗೆ ಹೆಚ್ಚಿನ ಆಸಕ್ತಿ ಇರುವುದಾಗಿ ಭರವಸೆ ನೀಡಿದರು.