Bengaluru Resident Stops Traffic, Makes Auto Driver Apologise 
ಬೆಂಗಳೂರು

ಬೆಂಗಳೂರಲ್ಲಿ ರೂಲ್ಸ್ ಬ್ರೇಕ್ ಮಾಡಿದ ಆಟೋ ಚಾಲಕನಿಗೆ ಕ್ಲಾಸ್​​ ತಗೊಂಡ ಟೆಕ್ಕಿ; ತಪ್ಪೊಪ್ಪಿಕೊಂಡು ಸಾರಿ ಕೇಳಿದ್ದು ಹೀಗೆ..Bengaluru

ಪ್ರಮುಖ ಮುಖ್ಯಾಂಶಗಳು

  • ಮಹದೇವಪುರದಲ್ಲಿ ಒನ್ ವೇನಲ್ಲಿ ಬಂದ ಆಟೋ ಚಾಲಕ, ಗಾಡಿ ನಿಲ್ಲಿಸಿ ಕ್ಲಾಸ್​​ ತಗೊಂಡ ಟೆಕ್ಕಿ.
  • ರಸ್ತೆಯಲ್ಲಿ ತಪ್ಪು ದಾರಿಯಲ್ಲಿ ಬರುವವರನ್ನು ತಡೆಯುತ್ತೇನೆ ಎಂದು ಹೇಳಿದ ಟೆಕ್ಕಿ.
  • ಸರಿಯಾದ ಕೆಲಸವನ್ನೇ ಮಾಡಿದ್ದೀರಿ, ನಿಮ್ಮಂತೋರು ಸಿಗೋದು ಕಷ್ಟ ಎಂದ ನೆಟ್ಟಿಗರು.

ಬೆಂಗಳೂರು: ನಗರದಲ್ಲಿ ರಸ್ತೆ ನಿಯಮಗಳನ್ನು ಗಾಳಿಗೆ ತೂರಿ ಓಡಾಡುವ ವಾಹನ ಸವಾರರ ಸಂಖ್ಯೆ ಸಾವಿರಕ್ಕೂ ಹೆಚ್ಚಿದೆ.  ಸಿಗ್ನಲ್ ದಾಟುವುದು, ಫುಟ್​ಪಾತ್ ಮೇಲೆ ಸಂಚರಿಸುವುದು,  ಹೆಲ್ಮೆಟ್​ ಧರಿಸದೇ ಇರವುದು ವಾಡಿಕೆಯಾಗಿದೆ. ಆದರೆ ಇಲ್ಲೊಬ್ಬ ಟೆಕ್ಕಿ, ಒನ್​ ವೇನಲ್ಲಿ ಬಂದ ಆಟೋ ಚಾಲಕನ ತಪ್ಪನ್ನು ಪ್ರೂವ್​ ಮಾಡಿ, ಸಾರಿ ಕೇಳುವಂತೆ ಮಾಡಿದ ಘಟನೆ ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಈ ಬಗ್ಗೆ r/Bangalore​ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಟೆಕ್ಕಿ, ಆಟೋ ಹಾಗೂ ಘಟನಾ ಸ್ಥಳದ ಫೋಟೋವನ್ನು ಹಂಚಿಕೊಂಡು, ಚಾಲಕನ ತಪ್ಪೇನು ಎನ್ನುವುದನ್ನು ಹೇಗೆ ಪ್ರೂವ್​ ಮಾಡಿದೆ. ಆತ ಸಾರಿ ಕೇಳಿದ ಬಗ್ಗೆ ಸವಿವರವಾಗಿ ಬರೆದುಕೊಂಡಿದ್ದಾರೆ. ಇದಕ್ಕೆ ಸಾಕಷ್ಟು ಜನರು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದೀರಾ ಎಂದು ಪ್ರಶಂಸಿಸಿದ್ದಾರೆ. 

ಟೆಕ್ಕಿ ಬರೆದುಕೊಂಡಿದ್ದು ಹೀಗೆ

ನಾನಿಂದು ಬೆಳಿಗ್ಗೆ ಕೆಲಸಕ್ಕೆ  ಬೆಂಗಳೂರಿನ ಮಹದೇವಪುರದ ಮೋರ್​ (mahadevapura)ಬಳಿ ಬರುತ್ತಿದೆ.   ಈಗಾಗಲೇ ಸಾಕಷ್ಟು ವಾಹನಗಳಿಂದ ಕೂಡಿದ ರಸ್ತೆಯಲ್ಲಿ ಆಟೋ ಚಾಲಕ ಎದುರಾದ. ಇದು ಒಂದು ಕಡೆಯಿಂದ ಸಂಚರಿಸಬಹುದಾದ ಒನ್​ ವೇ ರಸ್ತೆ. ಅದಕ್ಕೆಂದು ಫಲಕವೂ ಇತ್ತು. ಎದುರು ದಿಕ್ಕಿನಲ್ಲಿ ಬರುತ್ತಿದ್ದ ವಾಹನಗಳಿಂದಾಗಿ ನನಗೆ ತೀವ್ರ ಕಿರಿಕಿರಿಯಾಯಿತು.  ಹೀಗಾಗಿ ನಾನು ಆಟೋ ಮುಂದೆ ನಿಂತೆ ಕದಲಲಿಲ್ಲ. ಮತ್ತು ವಿದ್ಯಾವಂತ ಐಟಿ ಉದ್ಯೋಗಿಗಳಿಂದಾಗಿ ಈಗಾಗಲೇ ಉಂಟಾಗಿದ್ದ ಜಾಮ್‌ಗೆ ನಾನೂ ಕೂಡ ಕೊನೆಗೆ ಕಾರಣನಾದೆ ಎಂಬುದು ನನಗೆ ವಿಷಾದಕರವಾಗಿದೆ ಎಂದು ಬರೆದುಕೊಂಡಿದ್ದಾರೆ.

ಮುಂದುವರೆದು,   ಆಟೋ ಚಾಲಕ ಇಡೀ ರಸ್ತೆಯನ್ನು ಆಕ್ರಮಿಸಿಕೊಂಡು,  ತಪ್ಪಿಲ್ಲದವರಂತೆ ಮಾತನಾಡಿದ ಧೈರ್ಯ ಮತ್ತು ಆತ್ಮವಿಶ್ವಾಸವಿದೆಯಲ್ಲ. ಯಬ್ಬಾ. ಇದು ಒನ್​ ವೇ ಅಲ್ಲ ಎಂದು ವಾದ ಮಾಡಿದ.   ಇದು ಒನ್​ವೇ ಫಲಕವೂ ಇದೆ. ಅಕಸ್ಮಾತ್​  ಬೋರ್ಡ್​ ಇಲ್ಲದಿದ್ದರೆ 1,000 ರೂಪಾಯಿ ಕೊಡಲು ಸಿದ್ಧ. ಆದರೆ ಬೋರ್ಡ್ ಇದ್ದರೆ ಆತ ಕ್ಷಮೆಯಾಚಿಸಬೇಕು ಎಂದೆ. ಮುಂದೆ ಹೋಗಿ ಆತನಿಗೆ ಒನ್ ವೇ ಬೋರ್ಡ್ ತೋರಿಸಿದೆ. 

ಆಗ ಆತ ಮುಜುಗರದಿಂದ ಕ್ಷಮೆಯಾಚಿಸಿದ. ತಪ್ಪು ದಾರಿಯಲ್ಲಿ ಮತ್ತು ಫುಟ್‌ಪಾತ್‌ ಮೇಲೆ ವಾಹನ ಚಲಾಯಿಸಿದವರ ಮುಖಗಳು ಹಾಗೂ ವಾಹನದ ನಂಬರ್​ ಪ್ಲೇಟ್​​ ಇರುವ ಕೆಲವು ವೀಡಿಯೊಗಳನ್ನು ನಾನು ತೆಗೆದುಕೊಂಡಿದ್ದೇನೆ. ಅವುಗಳನ್ನು ಹೋಗಿ ಪೊಲೀಸ್ ಠಾಣೆಯಲ್ಲಿ ಸಲ್ಲಿಸಲಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಅಲ್ಲಿ ಉಪಸ್ಥಿತರಿದ್ದು, ನನ್ನ ಹಿಂದಿದ್ದವರಿಗೆ ನಾನು ತೊಂದರೆ ಕೊಟ್ಟೆ ಎಂದು ನನ್ನದೇ ತಪ್ಪು ಎಂದು ಹೇಳುವ ಎಲ್ಲರಿಗೂ ಒಂದೇ ಮಾತು: ನಾನು ನನ್ನ ಹಿಂದೆ ಇದ್ದವರಿಗೆ ತೊಂದರೆ ಕೊಟ್ಟಿರಬಹುದು, ಆದರೆ ರಸ್ತೆಯಲ್ಲಿ ತಪ್ಪು ದಾರಿಯಲ್ಲಿ ಬರುವವರನ್ನು ಖಂಡಿತವಾಗಿಯೂ ತಡೆಯುತ್ತೇನೆ ಎಂದು ಹೇಳಿದ್ದಾರೆ. 

 ನೆಟ್ಟಿಗರು ಏನಂದ್ರು?

ನಿಮ್ಮಂತಹ ನಾಗರಿಕರು ನಿಜಕ್ಕೂ ಇರಬೇಕು. ನೀವು ಮಾಡಿದ್ದು ನಿಜಕ್ಕೂ ಸರಿಯಾದ್ದದ್ದು ಎಂದು ಹಲವರು ಕೊಂಡಾಡಿದ್ದಾರೆ.  ಈ ಮನುಷ್ಯರನ್ನು ಕ್ಷಮೆಯಾಚಿಸುವಂತೆ ಮಾಡುವುದು ಸರಿದಾರಿಗೆ ತರುವಂತೆ ಮಾಡುವುದು ತುಂಬಾನೆ ಕಷ್ಟ. ನಿಮಗೆ ತುಂಬಾ ಧನ್ಯವಾದ ಮಾಡಿ ತೋರಿಸಿದ್ದೀರಿ. ಎಂದು ಮತ್ತೊಬ್ಬ ರೆಡ್ಡಿಟ್​ ಬಳಕೆದಾರ ಹೇಳಿದ್ದಾರೆ, (ಏಜೆನ್ಸೀಸ್).