Bengaluru man harasses woman waiting for cab
- ಕ್ಯಾಬ್‌ಗಾಗಿ ಕಾಯುತ್ತಿದ್ದ ಯುವತಿಯೊಬ್ಬರ ಜೊತೆ ಅಸಭ್ಯವಾಗಿ ವರ್ತಿಸಿದ ಹಣ್ಣು ಮಾರಾಟಗಾರ
- ರಾಮಮೂರ್ತಿ ನಗರದ ಎನ್‌ಆರ್‌ಐ ಲೇಔಟ್‌ನ ನಿವಾಸಿ 42 ವರ್ಷದ ವಿಜಯ್ ರಾಘವ್ ಬಂಧನ
- ಒಂಟಿಯಾಗಿ ನಿಂತಿದ್ದ ಯುವತಿಗೆ ನಿನ್ನ ರೇಟ್ ಎಷ್ಟು ಎಂದವ ಪೊಲೀಸರ ಅತಿಥಿ
ಬೆಂಗಳೂರಿನಲ್ಲಿ ರಾತ್ರಿ ವೇಳೆ ಮಹಿಳೆಯರು ಒಬ್ಬಂಟಿಯಾಗಿ ಓಡಾಡೋದು ಎಷ್ಟು ಕಷ್ಟ ಎನ್ನುವುದನ್ನು ಇತ್ತೀಚೆಗೆ ಬಿಗ್ಬಾಸ್ನ ಮಾಜಿ ಸ್ಪರ್ಧಿ ದಿವ್ಯಾ ಸುರೇಶ್ ಅವರು ತಮಗಾದ ಅನುಭವದ ಬಗ್ಗೆ ವಿಡಿಯೋ ಹಂಚಿಕೊಂಡಿದ್ದರು. ಆ ಬೆನ್ನಲ್ಲೇ ನಗರದ ರಾಮಮೂರ್ತಿನಗರದಲ್ಲಿ ಕ್ಯಾಬ್‌ಗಾಗಿ ಕಾಯುತ್ತಿದ್ದ ಯುವತಿಗೆ ನಿನ್ನ ರೇಟ್ ಎಷ್ಟು ಎಂದು ಕೇಳಿದ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ರಾತ್ರಿ ಯುವತಿಯೊಬ್ಬರು ಕ್ಯಾಬ್‌ಗಾಗಿ ಕಾಯುತ್ತಿದ್ದರು. ಈ ವೇಳೆ ಸ್ಕೂಟಿಯಲ್ಲಿ ಬಂದ ವ್ಯಕ್ತಿಯೊಬ್ಬ ನಿನ್ನ ರೇಟ್ ಎಷ್ಟು ಎಂದು ಕೇಳಿದ್ದಾನೆ ಎಂದು ಎಕ್ಸ್ನಲ್ಲಿ ವಿಡಿಯೋ ಹಂಚಿಕೊಂಡಿದ್ದರು. ಆ ಮಾಹಿತಿ ಮೇರೆಗೆ ತನಿಖೆ ನಡೆಸಿದ ಪೊಲೀಸರು ಸದ್ಯ ಕಾಮುಕನನ್ನು ಬಂಧಿಸಿದ್ದಾರೆ.
ಹಣ್ಣು ಮಾರಾಟಗಾರ ಅರೆಸ್ಟ್
ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಯನ್ನು ರಾಮಮೂರ್ತಿ ನಗರದ ಎನ್‌ಆರ್‌ಐ ಲೇಔಟ್‌ನ ನಿವಾಸಿ 42 ವರ್ಷದ ವಿಜಯ್ ರಾಘವ್ ಎಂದು ಗುರುತಿಸಲಾಗಿದೆ. ಈತ ಹಣ್ಣು ಮಾರಾಟಗಾರ ಎನ್ನಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿ, ಆತ ಬಳಕೆ ಮಾಡಿದ್ದ ಸ್ಕೂಟರ್ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಯುವತಿ ಹಂಚಿಕೊಂಡ ವಿಡಿಯೋದಲ್ಲಿ ಏನಿದೆ?
ಕ್ಯಾಬ್‌ಗಾಗಿ ಕಾಯುತ್ತಿದ್ದ ವೇಳೆ ಸ್ಕೂಟಿಯಲ್ಲಿ ಬಂದ ವ್ಯಕ್ತಿ ನನ್ನನ್ನು ಕಂಡು ಗಾಡಿ ನಿಲ್ಲಿಸಿದ. ಆನಂತರ ನಿನ್ನ ರೇಟ್ ಎಷ್ಟು ಸಾವಿರನಾ ಎಂದು ಕೇಳಿದೆ. ಸಾವಿರ ಯಾವುದಕ್ಕೆ ಎಂದು ಈಕೆ ಕೇಳಿದ್ದಾಳೆ.ಅಶ್ಲೀಲವಾಗಿ ಮಾತನಾಡುತ್ತಾ, ದರ ಕೇಳಿ 10,000 ನೀಡುವುದಾಗಿ ಹೇಳಿದ್ದಾನೆ. ಆಕೆ ವಿಡಿಯೋ ರೆಕಾರ್ಡ್ ಮಾಡುತ್ತಿರುವುದನ್ನು ಕಂಡ ಆತ ಆಕೆಯನ್ನು ನಿಂದಿಸಿ ಪರಾರಿಯಾಗಿರುವುದು ವಿಡಿಯೋದಲ್ಲಿ ಇದೆ. ಸದ್ಯ ಈ ವಿಡಯೋ ಎಕ್ಸ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಹಿಳೆ ಕೊಟ್ಟಿರುವ ದೂರಿನ ಮೇರೆಗೆ ಪೊಲೀಸರು ದೂರು ದಾಖಲಿಸಿಕೊಂಡು, ಸ್ಕೂಟರ್ ನಂಬರ್ ಪ್ಲೇಟ್ ಆಧರಿಸಿ ಆತ ಯಾರು ಎಲ್ಲಿದ್ದಾನೆ ಎಂದು ಪತ್ತೆ ಹಚ್ಚಿದ್ದಾರೆ. ಆತ ಬಳಕೆ ಮಾಡಿದ್ದ ಸ್ಕೂಟರ್ ಸಹ ಆತನದಲ್ಲ ಎನ್ನುವುದು ತಿಳಿದು ಬಂದಿದೆ, (ಏಜೆನ್ಸೀಸ್).