Wife tortures husband Bengaluru(AI image) 
ಬೆಂಗಳೂರು

ಪತ್ನಿಯಿಂದ ಲೈಂಗಿಕ ಕಿರುಕುಳ, ಸ್ನೇಹಿತರ ಜೊತೆ ದೈಹಿಕ ಸಂಪರ್ಕಕ್ಕೆ ಒತ್ತಾಯ ಆರೋಪ; ಪೊಲೀಸರ ಮೊರೆ ಹೋದ ಪತಿರಾಯ..Wife tortures husband Bengaluru

ಬೆಂಗಳೂರು: ಇಲ್ಲಿನ ಪೊಲೀಸ್​ ಠಾಣೆಯಲ್ಲಿ ವಿಚಿತ್ರ ಪ್ರಕರಣವೊಂದು ದಾಖಲಾಗಿದೆ.  ಸಾಮಾನ್ಯವಾಗಿಲೈಂಗಿಕ ಕಿರುಕುಳವಾಗುತ್ತಿದೆ. ಸ್ನೇಹಿತರ ಜೊತೆ ಲೈಂಗಿಕ ಕ್ರಿಯೆಗೆ ಒತ್ತಾಯ ಪ್ರಕರಣಗಳು ಪತಿಯ ವಿರುದ್ಧ ಕೇಳಿಬರುತ್ತವೆ. ಆದರೆ, ಇಲ್ಲೊಬ್ಬ ವ್ಯಕ್ತಿ ಪತ್ನಿಯ ವಿರುದ್ಧ ಹಾಗೂ ಆಕೆಯ ಕುಟುಂಬಸ್ಥರ ವಿರುದ್ಧ ದೂರು(Wife tortures husband Bengaluru)ನೀಡಿದ್ದಾರೆ ಎನ್ನಲಾಗಿದೆ. 
37 ವರ್ಷದ ವ್ಯಕ್ತಿಯೊಬ್ಬ ಪತ್ನಿಯ ವಿರುದ್ಧ ಕಿರುಕುಳ, ಲೈಂಗಿಕ ದುರ್ನಡತೆ ಆರೋಪ ಹೊರಸಿದ್ದಾನೆ. ಅಲ್ಲದೇ ತಮ್ಮ ವೈವಾಹಿಕ ಜೀವನದಲ್ಲಿ ಅತ್ತೆ-ಮಾವನ ಹಸ್ತಕ್ಷೇಪ ಹೆಚ್ಚಾಗಿದೆ ಎಂದು ಪೊಲೀಸ್​​ ಠಾಣೆಯ ಮೊರೆ ಹೋಗಿರುವುದು ಸದ್ಯ ಚರ್ಚೆಗೆ ಗ್ರಾಸವಾಗಿದೆ.

ದೂರಿನಲ್ಲಿ ಏನಿದೆ?

ಪೊಲೀಸರ ಪ್ರಾಥಮಿಕ ವರದಿ ಪ್ರಕಾರ,  ದೂರು ಕೊಟ್ಟ ವ್ಯಕ್ತಿಯು ನಾಗರಭಾವಿ ನಿವಾಸಿ.  ಅವರು 31 ವರ್ಷದ ಶಿಲ್ಪಾ  ಎಂಬುವವರನ್ನು ಮದುವೆಯಾಗಿ ಜಕ್ಕೂರಿನಲ್ಲಿರುವ ವಿಲ್ಲಾಕ್ಕೆ ಶಿಫ್ಟ್​​ ಆಗಿದ್ದರು.  ಮದುವೆಯಾದ ಕೆಲವೇ ವರ್ಷದ ನಂತರ ಆಕೆಯ ದುರ್ನಡತೆ ಹೊರಬಿದ್ದಿದೆ. ಪತ್ನಿ ಪದೇ ಪದೆ ಲೈಂಗಿಕ ಕಿರುಕುಳ ನೀಡಿದ್ದಾಳೆ. ಅಶ್ಲೀಲ ವಿಡಿಯೋಗಳನ್ನು ಕಳುಹಿಸಿ, ಅದನ್ನು ಅನುಸರಿಸುವಂತೆ ಮಾನಸಿಕ ಹಿಂಸೆ ನೀಡುತ್ತಿದ್ದಾಳೆ. ಇಷ್ಟೇ ಅಲ್ಲದೇ ಆಕೆಯ ಸ್ನೇಹಿತರ ಜೊತೆಯೂ ಲೈಂಗಿಕತೆಗೆ ಒತ್ತಾಯಿಸಿದಳು ಎಂದು ಆರೋಪಿಸಿದ್ದಾರೆ. 
 ತನ್ನ ದೂರಿನಲ್ಲಿ, ತನ್ನ ಅತ್ತೆ ಆಶಾ ಹಾಗೂ ತನ್ನ ಮಾವ ಮಾಧವ ಕೃಷ್ಣ ತನಗೆ ಬೆದರಿಕೆ ಹಾಕಲು ತನ್ನ ಮನೆಗೆ ಜನರನ್ನು ಕಳುಹಿಸಿದ್ದಾನೆ ಎಂದು ದೂರುದಾರರು ಆರೋಪಿಸಿದ್ದಾರೆ. ತನ್ನ ಸ್ನೇಹಿತರೊಬ್ಬರೊಂದಿಗೆ ಆತ್ಮೀಯ ಸಂಬಂಧಗಳಲ್ಲಿ ತೊಡಗಿಸಿಕೊಳ್ಳುವಂತೆ. ಜೊತೆಗೆ ಆಕೆಗೆ ತನ್ನ ಮಾಜಿ ಗೆಳೆಯರೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಾಗಿ ಒಪ್ಪಿಕೊಂಡಿದ್ದಾಳೆ. ನಮ್ಮ ಖಾಸಗಿ ಜೀವನ ಹಾಗೂ ವೈಯಕ್ತಿಕ ಕ್ಷಣಗಳ ಬಗ್ಗೆ ಪತ್ನಿ ಆಕೆಯ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಿರುವುದು ನನಗೆ ಹಿಂಸೆಯನ್ನುಂಟು ಮಾಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮನೆಯಿಂದ ಹೊರ ದೂಡಿದ್ಲು

2024 ಜುಲೈ 4ರಂದು ನನ್ನ ಹಾಗೂ ಆಕೆಯ ಪೋಷಕರ ಜೊತೆ ಈ ಬಗ್ಗೆ ಮಾತನಾಡಿದ್ದೆ. ಅವರು ನಮ್ಮಿಬ್ಬರನ್ನು ಕೂರಿಸಿ ಮಾತನಾಡಿಸಿ ಸಂಧಾನ ಮಾಡಿಸಿದ್ದರು. 2024 ಸೆಪ್ಟೆಂಬರ್ 24ರಂದು ನನ್ನ ಅತ್ತೆಯ ಜೊತೆ ಆಕೆ ಚೆನ್ನೈಗೆ ತೆರಳಿದಳು. ಅದಕ್ಕೂ ಮುನ್ನ ನನ್ನನ್ನು ಮನೆಯಿಂದ ಹೊರ ಹಾಕಿದಳು. ಪತ್ನಿ ಕುಡಿತದ ಚಟಕ್ಕೆ ಒಳಗಾಗಿ ನಿತ್ಯವೂ ಗಲಾಟೆ ಮಾಡುತ್ತಿದ್ದಳು ಎನ್ನಲಾಗಿದೆ.

ಹಣ ಮತ್ತು ಒಡವೆ ಕಳ್ಳತನ?

 ನನ್ನ ಬಳಿ 44 ಗ್ರಾಂ ತೂಕದ ಚೋಕರ್  ಸೇರಿ ಚಿನ್ನ ಮತ್ತು ಬೆಳ್ಳಿ ಆಭರಣ, 35 ಗ್ರಾಂ ಚಿನ್ನದ ಸರ, 18 ಗ್ರಾಂ ಚಿನ್ನದ ಬಳೆ, ಮತ್ತು 11 ಗ್ರಾಂ ಚಿನ್ನದ ಉಂಗುರ ಇತ್ತು. ಜೊತೆಗೆ ಬಳಿ ಇದ್ದ 1.87 ಲಕ್ಷ ರೂಪಾಯಿ  ನಗದು ಇಟ್ಟುಕೊಂಡಿದ್ದಾಳೆ ಅದನ್ನು ಮರುಪಾವತಿ ಮಾಡುತ್ತಿಲ್ಲ ಎಂದಿದ್ದಾರೆ. ಮುಂದುವರೆದು, ನನ್ನ ಪಾಸ್‌ಪೋರ್ಟ್,  ಶೈಕ್ಷಣಿಕ ಗೃಹೋಪಯೋಗಿ ವಸ್ತುಗಳು ವಿಲ್ಲಾದಲ್ಲಿ ಉಳಿದಿವೆ. ಲ್ಯಾಪ್‌ಟಾಪ್‌ನಲ್ಲಿ ಸಂಗ್ರಹವಾಗಿರುವ ಮದುವೆಯ ಫೋಟೋಗಳು ಮತ್ತು ವೀಡಿಯೊಗಳನ್ನು ಅಳಿಸಿಹಾಕಲಾಗಿದೆ ಎಂದು ಹೇಳಿದ್ದಾರೆ. 
ಪತಿಯ ದೂರಿನ ಮೇರೆಗೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಕ್ರಿಮಿನಲ್ ಬೆದರಿಕೆ, ನಂಬಿಕೆ ದ್ರೋಹ ಮತ್ತು ಇತರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ  ದೂರು ದಾಖಲಿಸುತ್ತಲೇ ಎಚ್ಚೆತ್ತ ಆಕೆಯೂ ಪ್ರತ್ಯೇಕ ದೂರು ನೀಡಿದ್ದಾಳೆ ಎನ್ನಲಾಗಿದೆ,(ಏಜೆನ್ಸೀಸ್​​).