ಬಸವನಗುಡಿ ಎ.ಪಿ.ಎಸ್​. ಕಾಲೇಜಿನಲ್ಲಿ ನಡೆಯಲಿರುವ 64ನೇ ಗಣೇಶೋತ್ಸವ ನಿಮಿತ್ತ ನಿರ್ಮಿಸಲಾಗಿರುವ 21 ಅಡಿ ಎತ್ತರದ ಜೆಡಿ ಮಣ್ಣಿನ ಗಣೇಶನ ಮೂರ್ತಿಯನ್ನು ಸಚಿವ ರಾಮಲಿಂಗಾರೆಡ್ಡಿ ವೀಕ್ಷಿಸಿದರು. ಶ್ರೀ ವಿದ್ಯಾರಣ್ಯ ಯುವಕರ ಸಂಘದ ಟ್ರಸ್ಟಿಗಳು ಇದ್ದರು. 
ಬೆಂಗಳೂರು

ನಗರದಲ್ಲಿ 21 ಅಡಿ ಎತ್ತರದ ಮಣ್ಣಿನ ಗಣಪ!

ಪ್ರಮುಖ ಮುಖ್ಯಾಂಶಗಳು

  • 64ನೇ ವರ್ಷದ ಗಣೇಶೋತ್ಸವ
  • ಸೆ.14ರಿಂದ 26ರ ವರೆಗೆ ಆಯೋಜನೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಬಸವನಗುಡಿಯ ಎ.ಪಿ.ಎಸ್​. ಕಾಲೇಜು ಮೈದಾನದಲ್ಲಿ ಶ್ರೀ ವಿದ್ಯಾರಣ್ಯ ಯುವಕರ ಸಂಘದ ವತಿಯಿಂದ 64ನೇ ಬೆಂಗಳೂರು ಗಣೇಶೋತ್ಸವ ಸೆ.14 ರಿಂದ 13 ದಿನಗಳು ವಿವಿಧ ಧಾರ್ಮಿಕ, ಸಾಂಸತಿಕ, ಭಕ್ತಿ ಸಂಗೀತದೊಂದಿಗೆ ನಡೆಯಲಿದೆ.
ಗಂಗಾನದಿಯಿಂದ ಮಣ್ಣು ಮತ್ತು ಮರಳು, ಜಲವನ್ನು ತರಿಸಲಾಗಿದ್ದು, 21 ಅಡಿ ಎತ್ತರದ ಅಪೂರ್ವ ಗಣೇಶ ಮೂರ್ತಿಯನ್ನು ಪರಿಸರ ಸ್ನೇಹಿ ವಸ್ತುಗಳಾದ ಬಿದಿರು, ಹುಲ್ಲು, ಮಣ್ಣಿನ ಮೂಲಕ ಕಲ್ಕತ್ತಾದಿಂದ ನುರಿತ ಕಲಾವಿದರು ಗಣೇಶನಮೂರ್ತಿಯನ್ನು ನಿರ್ಮಿಸುತ್ತಿದ್ದು, ಪ್ರತಿಷ್ಠಾಪನೆ ಮಾಡಲಾಗುತ್ತಿದೆ.
ಪರಿಸರ ಸ್ನೇಹಿ ಆಚರಣೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಪ್ರಯತ್ನವನ್ನು ಕೈಗೊಂಡಿದ್ದು, ಬೆಂಗಳೂರಿನ ಗಣೇಶೋತ್ಸವು 15 ವರ್ಷಗಳಿಂದ ಸಂಪೂರ್ಣ ಪ್ಲಾಸ್ಟಿಕ್​ಮುಕ್ತವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ವರ್ಷ ಶೂನ್ಯತ್ಯಾಜ್ಯ ಸಮರ್ಪಕ ಮರುಬಳಕೆ ಪುನರುತ್ಪಾದನೆಯತ್ತ ಮತ್ತೊಂದು ಹೆಜ್ಜೆ ಇಡಲಾಗುತ್ತಿದೆ. 
ಹೂವುಗಳಿಂದ ಹೆಚ್ಚು ಅಲಂಕಾರ ಮಾಡದೆ, ಹಣ್ಣು, ವಿಶೇಷ ತಿಂಡಿಗಳಿಂದ ಅಲಂಕಾರ ಮಾಡಿ ಪ್ರತಿದಿನ ಬರುವ ಭಕ್ತಾಧಿಗಳಿಗೆ ಪ್ರಸಾದದ ರೂಪದಲ್ಲಿ ವಿತರಣೆ ಮಾಡಲಾಗುವುದು ಎಂದು  ಟ್ರಸ್ಟ್​ನ ನಂದೀಶ್​ ತಿಳಿಸಿದ್ದಾರೆ.
ಇಲ್ಲಿಯೇ ಮಣ್ಣಿನಲ್ಲಿ ಗಣಪತಿ ಮಾಡುವಂತೆ ಕಳೆದ 2 ವರ್ಷಗಳಿಂದ ನುರಿತ ಕಲಾವಿದರಿಂದ ನಾಗರೀಕರಿಗೆ ತರಬೇತಿಯನ್ನು ನೀಡಲಾಗಿದೆ. ಬಾದಾಮಿ ಮತ್ತು ಪಟ್ಟದಕಲ್ಲು ಮಾದರಿಯಲ್ಲಿ ಬೃಹತ್​ ಮಂಟಪ ನಿರ್ಮಿಸಲಾಗಿದೆ.
ಪರಿಸರ ಮತ್ತು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಭೇಟಿ ನೀಡಿ 21 ಅಡಿ ಎತ್ತರದಲ್ಲಿ ನಿರ್ಮಿಸುತ್ತಿರುವ ಗಣಪತಿ ಪ್ರತಿಮೆಯನ್ನು ವೀಕ್ಷಿಸಿ ಮಾತನಾಡಿ, ಎಲ್ಲೆಡೆಯಲ್ಲಿ ಮನೆ, ಬೀದಿ, ಪ್ರಮುಖ ನಗರದಲ್ಲಿ ನಡೆಯುವ ಗಣೇಶನ ಉತ್ಸವ ಸಂಪೂರ್ಣ ಪರಿಸರ ಸ್ನೇಹಿ, ಜೆಡಿ ಮಣ್ಣಿನ ಮೂರ್ತಿ ಪೂಜಿಸುವ ಮೂಲಕ ಪರಿಸರವನ್ನು ರಕ್ಷಿಸಬೇಕಾಗಿದೆ ಎಂದರು.
ಟ್ರಸ್ಟಿಗಳಾದ ಸಿದ್ದರಾಜು, ಬಿ. ಮಲ್ಲಿಕಾರ್ಜುನ್​, ಮರಿಯಪ್ಪ, ಕಿರಣ್​ಕುಮಾರ್​, ಎಚ್​.ಎನ್​.ದೀಪಕ್​ ಸೇರಿದಂತೆ ವಿದ್ಯಾರಣ್ಯ ಯುವಕ ಸಂಘದವರು ಇದ್ದರು.