apartment-owners-forum 
ಬೆಂಗಳೂರು

ಬಿಡಿಎ ಅಪಾರ್ಟ್‌ಮೆಂಟ್ ಮಾಲೀಕರ ವೇದಿಕೆ ಅಸ್ತಿತ್ವಕ್ಕೆ

ಪ್ರಮುಖ ಮುಖ್ಯಾಂಶಗಳು

  • ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಫೋರಂನಿಂದ ಸಹಕಾರಿ
  • ಫ್ಲ್ಯಾಟ್​​​ ಖರೀದಿದಾರರ ಹಿತಾಸಕ್ತಿ ರಕ್ಷಣೆಗೆ ವೇದಿಕೆಯಿಂದ ಆದ್ಯತೆ
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಿಸಿರುವ ವಸತಿ ಯೋಜನೆಗಳಲ್ಲಿ ವಿಲ್ಲಾ, ಫ್ಲ್ಯಾಟ್​​ ಖರೀದಿಸಿರುವವರು ಒಗ್ಗೂಡಿ ಹೊಸದಾಗಿ ‘ಬಿಡಿಎ ಅಪಾರ್ಟ್‌ಮೆಂಟ್ ಮಾಲೀಕರ ವೇದಿಕೆ’ (ಬಿಎಒಎಫ್) ಆರಂಭಿಸಿದ್ದಾರೆ.
ಈ ವೇದಿಕೆಯು ಪ್ರಾಧಿಕಾರ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳ ಮಾಲೀಕರ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ಹಾಗೂ ಸಾರ್ವಜನಿಕ ಅಧಿಕಾರಿಗಳೊಂದಿಗೆ ಸಂಬಂಧ ಬಲಪಡಿಸುವ ಉದ್ದೇಶವನ್ನು ಹೊಂದಿದೆ. ಗುಂಜೂರು, ಕೊಮ್ಮಘಟ್ಟ, ಕಣಿಮಿಖೆ, ಜ್ಞಾನಭಾರತಿ, ಕೋನದಾಸಪುರ, ತಿಪ್ಪಸಂದ್ರ ಸೇರಿ ಇತರ ಸ್ಥಳಗಳಲ್ಲಿ ಬಿಡಿಎ ಅಪಾರ್ಟ್‌ಮೆಂಟ್‌ನಲ್ಲಿರುವ ಸಮಾನ ಮನಸ್ಕ ಮಾಲೀಕರು ಒಗ್ಗೂಡಿ ವೇದಿಕೆ ರಚಿಸಿಕೊಂಡಿದ್ದೇವೆ ಎಂದು ಫೋರಂನ ಪದಾಧಿಕಾರಿಗಳು ತಿಳಿಸಿದ್ದಾರೆ.
ಬಿಡಿಎ ಅಪಾರ್ಟ್‌ಮೆಂಟ್, ಮನೆ ಖರೀದಿಸಿದವರಿಗೆ ಅವುಗಳ ನಿರ್ವಹಣೆ ವಿಚಾರದಲ್ಲಿ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಅಪೂರ್ಣ ಕಾಮಗಾರಿ, ವಸತಿ ಸಮುಚ್ಛಯಗಳ ಹಸ್ತಾಂತರ ಸೇರಿ ಇತರ ವಿಷಯಗಳಲ್ಲಿ ಸಕಾಲದಲ್ಲಿ ಸಹಾಯ, ಸಹಕಾರ ಕೋರಿದರೂ, ಅಧಿಕಾರಿ ವರ್ಗದಿಂದ ತ್ವರಿತ ಸ್ಪಂದನೆ ಸಿಗುತ್ತಿಲ್ಲ. ಇಂತಹ ಸಮಸ್ಯೆಗಳನ್ನು ನಿವಾರಿಸಿಕೊಂಡು ಅಪಾರ್ಟ್‌ಮೆಂಟ್‌ಗಳ ಆಡಳಿತ, ಹೊಣೆಗಾರಿಕೆ ಹಾಗೂ ವಾಸವಿರುವ ಅಪಾರ್ಟ್​​​ಮೆಂಟ್‌ದಾರರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಫೋರಂನಿಂದ ಸಹಕಾರಿ ಆಗಲಿದೆ ಎಂದು ಬಿಎಒಎಫ್​ ಪದಾಧಿಕಾರಿ ಶಶಾಂಕ್ ತಿಳಿಸಿದ್ದಾರೆ.